ಮರ್ಯಾದೆ ಅನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ; ಸುದೀಪ್​ ಕೆಂಡಾಮಂಡಲ- Bigg Boss ಸ್ಪರ್ಧಿಗಳಿಗೆ ಕ್ಲಾಸ್​

Published : Oct 18, 2025, 05:30 PM IST

ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ, ಅಶ್ವಿನಿ ಮತ್ತು ಜಾನ್ವಿ ನಡುವೆ ಮಧ್ಯರಾತ್ರಿ ನಡೆದ ಜಗಳ ವೈಯಕ್ತಿಕ ನಿಂದನೆಯ ಹಂತ ತಲುಪಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 'ಮರ್ಯಾದೆ ಯಾರ ಅಪ್ಪನ ಆಸ್ತಿನೂ ಅಲ್ಲ' ಎಂದಿದ್ದಾರೆ. 

PREV
18
ಇವೆಲ್ಲಾ ಮಾಮೂಲೇ ಬಿಡಿ

ಬಿಗ್​ಬಾಸ್​ನಲ್ಲಿ (Bigg Boss) ಗಲಾಟೆ, ಗದ್ದಲ, ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವುದು, ಅಸಹ್ಯ ಮಾತುಗಳನ್ನು ಆಡುವುದು, ತೀರಾ ವೈಯಕ್ತಿಕವಾಗಿ ನಿಂದನೆ ಇವೆಲ್ಲವೂ ಮಾಮೂಲು. ಒಂದು ಹಂತದಲ್ಲಿ ಇಂಥದ್ದೊಂದು ಸನ್ನಿವೇಶ ಇದ್ದರೆ ವೀಕ್ಷಕರು ಹೆಚ್ಚು ನೋಡುತ್ತಾರೆ ಎನ್ನುವ ಕಾರಣಕ್ಕೆ ಸ್ಪರ್ಧಿಗಳ ನಡುವೆ ಇಂಥ ಸನ್ನಿವೇಶಗಳನ್ನೂ ಖುದ್ದು ಬಿಗ್​ಬಾಸ್​​ ಸೃಷ್ಟಿಸುತ್ತದೆ ಎಂದು ಇದಾಗಲೇ ಈ ಹಿಂದಿನ ಷೋಗಳಲ್ಲಿ ಹೋಗಿ ಬಂದಿರುವ ಸ್ಪರ್ಧಿಗಳು ಓಪನ್​ ಆಗಿಯೇ ಹೇಳಿದ್ದಾರೆ.

28
ಮಸಾಲೆ ಇಲ್ಲದಿದ್ರೆ ಹೇಗೆ?

ಎಲ್ಲವೂ ಚೆನ್ನಾಗಿ, ಸುಲಲಿತವಾಗಿ ನಡೆದುಕೊಂಡು ಹೋಗುತ್ತಿದ್ದರೆ, ವೀಕ್ಷಕರಿಗೆ ಮಸಾಲೆಯೇ ಇಲ್ಲದೇ ತೀರಾ ಸಪ್ಪೆ ಎನ್ನಿಸುವ ಕಾರಣ, ಇಂಥದ್ದೆಲ್ಲವೂ ಇದ್ದೇ ಇರುತ್ತದೆ. ಅದೇ ರೀತಿ ಇದೀಗ ಜಾನ್ವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ (Rakshita Shetty) ನಡುವೆ ಮಿಡ್​ನೈಟ್​ನಲ್ಲಿ ನಡೆದ ಗಲಾಟೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

38
ವೈಯಕ್ತಿಕ ನಿಂದನೆ

ಒಂದು ಹಂತದಲ್ಲಿ ಅಶ್ವಿನಿ ಗೌಡ ಅವರು ರಕ್ಷಿತಾಗೆ ನೀನು ಎಂಥವಳು, ಎಲ್ಲಿಂದ ಬಂದವಳು ಎನ್ನುವುದು ಗೊತ್ತು ಎಂದಿದ್ದರೆ, ಜಾನ್ವಿ ಕೂಡ ಅಸಭ್ಯ ಮಾತುಗಳನ್ನು ಆಡಿದ್ದರು. ಇದನ್ನು ನೋಡಿದವರು ಕಿಚ್ಚ ಸುದೀಪ್​ ಇವರಿಗೆ ಸಕತ್​ ಕ್ಲಾಸ್​ ತೆಗೆದುಕೊಳ್ತಾರೆ ಎಂದು ಅಂದುಕೊಂಡಿದ್ದರು. ಅದೀಗ ನಿಜವಾಗಿದೆ.

48
ಸುದೀಪ್​ ಕೆಂಡಾಮಂಡಲ

ಕಿಚ್ಚ ಸುದೀಪ್​ ಈ ವಿಷಯದಲ್ಲಿ ಕೆಂಡಾಮಂಡಲವಾಗಿದ್ದಾರೆ. ಯಮ್ಮಾ ಗಿಮ್ಮಾ ಅನ್ಬೇಡ, ಹೆಸರು ಇದೆ ಎಂದರೂ ನೀವು ರಕ್ಷಿತಾ ಅವರಿಗೆ ಹೀಗೆ ಮಾತನಾಡಿದ್ದೀರಿ ಎಂದಾಗ ಜಾನ್ವಿ (Bigg Boss Jhanvi) ಯಾರಿಗೂ ಹರ್ಟ್​ ಮಾಡಬೇಕು ಅಂತ ಮಾಡಿರಲಿಲ್ಲ ಎಂದರು.

58
ಯಾರ ಅಪ್ಪನ ಆಸ್ತಿನೂ ಅಲ್ಲ

ಅದಕ್ಕೆ ಸುದೀಪ್​ ಅವರು, ನೀವು ಹೀಗೆ ಪರ್ಸನ್ಯಾಲಿಟಿಗಳನ್ನು ಕೊಲೆ ಮಾಡ್ತಾ ಹೋದರೆ Are You People Ok with it? ಎಂದು ಪ್ರಶ್ನಿಸಿದಾಗ ಎಲ್ಲರೂ ಸುಮ್ಮನಾದರು. ಸುದೀಪ್​ (Kichcha Sudeep) ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಒಬ್ಬರ ಮರ್ಯಾದೆ, ಒಬ್ಬರ ಅಸ್ತಿತ್ವ, ಒಬ್ಬರ ಗೌರವ ಇನ್ನೊಬ್ಬರ ಆಟದ ಸಾಮಾನು ಆಗಬಾರದು. ಮರ್ಯಾದೆ ಎನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ ಎಂದು ಮೇಜನ್ನು ಕುಕ್ಕಿ ಹೇಳಿದರು. ಮುಂದೇನಾಗತ್ತೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

68
ಆಗಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ, ಎಲಿಮಿನೇಷನ್​ ಗದ್ದಲ ಇರುವ ಕಾರಣ, ರಕ್ಷಿತಾ ಶೆಟ್ಟಿ ಅವರು ಮೊದಲಿಗೆ, ಅವರು ನನ್ನ ಹೆಸರು ಹೇಳಿದರು, ಅದಕ್ಕೇ ನಾನು ಅವರ ಹೆಸರು ಹೇಳಿದೆ ಎಂದು ಹೇಳುವ ಮೂಲಕ, ಇಬ್ಬರ ನಡುವೆಯ ಜಗಳ ಶುರುವಾಗಿದೆ. ಕೊನೆಗೆ ಅಶ್ವಿನಿ ಅವರೂ ಎಂಟ್ರಿ ಕೊಟ್ಟು ಎಲ್ಲರ ನಡುವೆ ಕಾದಾಟ ಹೆಚ್ಚಾಗಿತ್ತು. 

78
ಜಾಹ್ನವಿ ಗರಂ

ಜಾಹ್ನವಿ ನಾನೇನು ಚಿಕ್ಕವಳಾ, ನನಗೇನು ಮೆಚುರಿಟಿ ಇಲ್ವಾ ಎಂದು ಕೇಳಿದಾಗ, ರಕ್ಷಿತಾ ಶೆಟ್ಟಿ ನಾಗವಲ್ಲಿ ನೀವೇ, ಮಧ್ಯರಾತ್ರಿ ಗೆಜ್ಜೆ ಸೌಂಡ್​ ಅಶ್ವಿನಿ ಅವ್ರು ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದರು. ಇದನ್ನು ಕೇಳಿ ಅಶ್ವಿನಿ ಗೌಡ (Ashwini Gowda) ಕಿಡಿಯಾಗಿದ್ದರು.

88
ಅಶ್ವಿನಿಯಿಂದ ವೈಯಕ್ತಿಕ ನಿಂದನೆ

ಜಾಸ್ತಿ ಮಾತನಾಡಬೇಡ, ಮುಚ್ಕೊಂಡು ಮಗಲು. ಹೋಗಿ ನಿನ್ನ ಡ್ರಾಮಾ ಎಲ್ಲಾ ಬಾತ್​ರೂಮ್​ನಲ್ಲಿ ಮಾಡು ಎಂದಿದ್ದಾರೆ. ಅದಕ್ಕೆ ರಕ್ಷಿತಾ ನಾನು ಎಷ್ಟು ಸಲ ಬೇಕಾದ್ರೂ ಬಾತ್​ರೂಮ್​ಗೆ ಹೋಗ್ತೇನೆ. ನಿಮಗೇನು ಎಂದು ಕೇಳಿದಾಗ, ಅಶ್ವಿನಿ ನೀನು ಎಲ್ಲಿಂದ ಬಂದವಳು ಎಂದು ಗೊತ್ತು, ನಿನ್ನನ್ನು ನೋಡಿದ್ರೆ ಗೊತ್ತಾಗತ್ತೆ ಎನ್ನುವ ಮೂಲಕ ತೀರಾ ವೈಯಕ್ತಿಕವಾಗಿ ನಿಂದಿಸಿದ್ದರು. Bigg Boss First Grand Finale ಏನಾಗುತ್ತೋ ನೋಡಬೇಕಿದೆ. 

Read more Photos on
click me!

Recommended Stories