ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Season 10) ರಲ್ಲಿ ಬೆಂಕಿ ಅಂತಲೇ ಹೆಸರು ಮಾಡಿದ್ದ ನಟಿ ತನಿಷಾ ಕುಪ್ಪಂಡ. ಬಿಗ್ ಬಾಸ್ ನಿಂದಾಗಿ ಇವರು ಸಾಕಷ್ಟು ಅಭಿಮಾನಿಗಳು, ಜೊತೆಗೆ ಜನಪ್ರಿಯತೆಯನ್ನು ಗಳಿಸಿದರು.
ಬಿಗ್ ಬಾಸ್ ಮನೆಯಲ್ಲಿ ತನಿಷಾ (Tanisha Kuppanda) ಕಾರ್ತಿಕ್ ಜೊತೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಕಾರ್ತಿಕ್ ವಿನ್ನರ್ ಪಟ್ಟ ಗೆದ್ದಾಗ ಸಹ ತನಿಷಾ ತಾವೇ ಗೆದ್ದಷ್ಟು ಖುಷಿ ಪಟ್ಟಿದ್ದರು. ಬಿಗ್ ಬಾಸ್ ಬಳಿಕವೂ ತನಿಷಾ ಅದೇ ಸ್ನೇಹವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಬಿಗ್ ಬಾಸ್ ಬಳಿಕ ಹಲವಾರು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ತನಿಷಾ ಇತ್ತೀಚೆಗೆ ಮೈಸೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರ ಮನೆಗೆ ಕೂಡ ಭೇಟಿ ನೀಡಿ, ಫ್ಯಾಮಿಲಿ ಜೊತೆ ಸಮಯ ಕಳೆದಿದ್ದರು.
ಬಿಗ್ ಬಾಸ್ ಮನೆಯಲ್ಲಿರುವಾಗಲೇ ಕಾರ್ತಿಕ್ ತಂಗಿಗೆ ಮಗು ಹುಟ್ಟಿದ ವಿಷಯ ಕೇಳಿದ ತಕ್ಷಣ ತನಿಷಾ ಬೆಳ್ಳಿ ಉಡಿದಾರವನ್ನು ಉಡುಗೊರೆಯಾಗಿ ನೀಡಿದ್ದರು, ಇದೀಗ ಕಾರ್ತಿಕ್ ಅಳಿಯನನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ತಿಕ್ ತಂಗಿಯ ಮಗುವನ್ನು ಕೈಯಲ್ಲಿ ಎತ್ತಿ ಹಿಡಿದಿರುವ ಜೊತೆಗೆ ಕಾರ್ತಿಕ್ ತಾಯಿ, ತಂಗಿ ತೇಜಸ್ವಿನಿ (Tejaswini Mahesh) ಜೊತೆಗೆ ಹಲವಾರು ಫೋಟೋಗಳನ್ನು ಶೇರ್ ಮಾಡಿರುವ ತನೀಷಾ ನಿಮ್ಮನ್ನೆಲ್ಲಾ ಭೇಟಿ ಮಾಡಿ ತುಂಬಾನೆ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ.
ಈ ಪುಟಾಣಿ ಕಂದನಿಗೆ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗಲಿ, ನೀನು ನನ್ನ ದೋಸ್ತ್ ಕಾರ್ತಿಕ್ ಮಹೇಶ್ ನ ಲಕ್ಕಿ ಚಾರ್ಮ್ (lucky charm), ನಿಮ್ಮನ್ನೆಲ್ಲಾ ಭೇಟಿ ಮಾಡಿ ತುಂಬಾನೆ ಸಂತೋಷವಾಯಿತು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಬರೆದುಕೊಂಡಿದ್ದಾರೆ.
ಇನ್ನು ತನಿಷಾ ಫೋಟೊ ನೋಡಿ ಅಭಿಮಾನಿಗಳು ಪ್ರತಿ ಒಬ್ಬ ಹುಡುಗರ ಲೈಫ್ ನಲ್ಲಿ ತನಿಷಾ ತರಾ ಹುಡುಗಿ ಬೆಸ್ಟ್ ಫ್ರೆಂಡ್ ಇರಬೇಕು... ತನಿಷಾ ಮತ್ತು ಕಾರ್ತಿಕ್ ಸ್ನೇಹಾ ಯಾವಾಗಲೂ ಹೀಗೆ ಇರಲಿ, ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ.