ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು!

First Published | Mar 28, 2021, 1:51 PM IST

ನಿರ್ದೇಶಕಿ ಹಾಗೂ ಕಲಾವಿದೆ ಚೈತ್ರಾ ಕೊಟ್ಟೂರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಫೋಟೋಗಳು ಇಲ್ಲಿವೆ....

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿ, ಬರಹಗಾರ್ತಿ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕೊಟ್ಟೂರು.
ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಅರ್ಜುನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Tap to resize

ಮಾರ್ಚ್ 28, 2021ರಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿದೆ.
ಅಖಂಡ ಕರ್ನಾಟಕ ರಕ್ಷ ಣಾ ಸೇವಾದಳ ರಾಜ್ಯಾಧ್ಯಕ್ಷ ರಾದ ಸಿಂಹ ಶಿವು ಗೌಡರವರ ನೇತೃತ್ವದಲ್ಲಿ ಶೈಲೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮಂಗಲ ಕಾರ್ಯ ನಡೆದಿದೆ.
ಕೆಲವು ಮೂಲಗಳ ಪ್ರಕಾರ ಯುವಕ ಅರ್ಜುನ ಅವರ ಮನವೊಲಿಸಿ, ಸರಳವಾಗಿ ಮದುವೆ ಮಾಡಿಸಲಾಗಿದೆ ಎನ್ನಲಾಗಿದೆ.
ಅರ್ಜುನ್ ಮೂಲತಃ ಮಂಡ್ಯದ ಹುಡುಗ.
ಇತ್ತೀಚಿನ ದಿನಗಳಲ್ಲಿ ನಂಬಿಕೆ, ಜೀವನ ಪಾಠ, ಪ್ರೀತಿ ವಿಚಾರದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಚೈತ್ರಾ ಪೋಸ್ಟ್ ಮಾಡುತ್ತಿದ್ದರು.

Latest Videos

click me!