ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಲನ್ ಕಾವೇರಿ ಪಾತ್ರದ ಮೂಲಕ ರಂಜಿಸಿದ್ದ ನಟಿ ಸುಷ್ಮಾ ನಾಣಯ್ಯ ಇದೀಗ ಆದಿ ಲಕ್ಷ್ಮೀ ಪುರಾಣ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ವಿಲನ್ ಆಗಿ ಬರ್ತಾರೋ, ಒಳ್ಳೆಯವರಾಗ್ತಾರೋ ಕಾದು ನೋಡಬೇಕು.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸುಷ್ಮಾ ನಾಣಯ್ಯ. ಇವರು ಹೆಚ್ಚಿನ ಹೆಸರು ಗಳಿಸಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ. ಆ ಧಾರಾವಾಹಿಯಲ್ಲಿ ಕಾವೇರಿ ಕಷ್ಯಪ್ ಆಗಿ, ಸೊಸೆಯ ಜೀವನವನ್ನೇ ಹಾಳು ಮಾಡುವ ಅತ್ತೆಯಾಗಿ ನಟಿಸಿದ್ದರು.
27
ಖಡಕ್ ವಿಲನ್
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮಗ ವೈಷ್ಣವ್ ಮೇಲಿನ ಅತಿಯಾದ ಮೋಹದಿಂದ, ಆತನ ಜೀವನದಲ್ಲಿ ಎಲ್ಲವೂ ನಾನೇ ಆಗಿರಬೇಕು ಎನ್ನುವ ಆಸೆಗೆ ಬಿದ್ದು, ಮಗಳ ಗರ್ಲ್ ಫ್ರೆಂಡ್, ಹೆಂಡತಿ ಮೇಲೆ ಸುಳ್ಳು ಆಪಾದನೆಗಳನ್ನು ಮಾಡಿ, ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡು ಪೊಲೀಸರಿಗೆ ಸರಂಡರ್ ಆಗಲು ತಯಾರಿಲ್ಲದೇ, ತನ್ನ ಹಠವೇ ಮೇಲೂ ಎಂದು ಪರ್ವತದಿಂದ ಹಾರಿ ಸಾವನ್ನಪ್ಪಿದ್ದರು ಕಾವೇರಿ ಕಷ್ಯಪ್.
37
ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ
ಇದೀಗ ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಗಿದು ವರ್ಷಗಳು ಆಗುತ್ತಾ ಬಂದಿದೆ. ಇದೀಗ ಸುಷ್ಮಾ ನಾಣಯ್ಯ ಮತ್ತೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ. ಇಲ್ಲೂ ಕೂಡ ವಿಲನ್ ಪಾತ್ರ ಇವರ ಪಾಲಾಗಿದೆ.
ಮುಂದಿನ ವಾರದಿಂದ ಶುರುವಾಗಲಿರುವ ಆದಿ ಲಕ್ಷ್ಮೀ ಪುರಾಣ ಧಾರಾವಾಹಿಯಲ್ಲಿ ದೇವಕಿ ಎನ್ನುವ ಪಾತ್ರಕ್ಕೆ ಸುಷ್ಮಾ ನಾಣಯ್ಯ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಇವರ ಪಾತ್ರದ ಪ್ರೊಮೋ ರಿಲೀಸ್ ಆಗಿದ್ದು, ಈ ಧಾರಾವಾಹಿಯಲ್ಲೂ ವಿಲನ್ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಸುಷ್ಮಾ.
57
ಏನ್ ಹೇಳ್ತಾರೆ ದೇವಕಿ
ಅಪ್ಪನ ನಿರ್ಧಾರದಿಂದಲೇ ತನ್ನ ಬದುಕು ಹಾಳಾಯ್ತು ಅನ್ಕೊಂಡಿರೋ ದೇವಕಿ! ಅಪ್ಪನಿಂದ ನನ್ನ ಜೀವನ ಹಾಳಾದಂತೆ, ಬೇರೆ ಯಾರ ಜೀವನ ಹಾಳಾಗೋದಕ್ಕೂ ನಾನು ಬಿಡೋದಿಲ್ಲ ಎನ್ನುತ್ತಾರೆ. ಹಾಗಾದರೆ ಮತ್ತೆ ಹೊಸ ಧಾರಾವಾಹಿಯಲ್ಲೂ ಹುಳಿ ಹಿಂಡೋದಕ್ಕೆ ರೆಡಿಯಾಗಿದ್ದಾರೆ ಸುಷ್ಮಾ.
67
ಅಲ್ಲಿ ವೈಷ್ಣವ್-ಲಕ್ಷ್ಮೀ ಇಲ್ಲಿ ಆದಿ-ಲಕ್ಷ್ಮೀ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮೀ ಜೀವನದಲ್ಲಿ ಬೆಂಕಿ ಹಚ್ಚಿ, ಅವರ ನೆಮ್ಮದಿ ಕೆಡಿಸುವ ಕೆಲಸ ಮಾಡಿದ್ದರು ಕಾವೇರಿ ಕಷ್ಟಪ್. ಇಲ್ಲಿ ಇದೀಗ ದೇವಕಿಯಾಗಿ ಆದಿ ಲಕ್ಷ್ಮೀ ಪುರಾಣದಲ್ಲಿ ಆದಿ ಮತ್ತು ಲಕ್ಷ್ಮೀ ಜೀವನದಲ್ಲಿ ಬೆಂಕಿ- ಬಿರುಗಾಳಿ ಸೃಷ್ಟಿ ಮಾಡಬಹುದೇನೋ?
77
ಫ್ಯಾನ್ಸ್ ಖುಷಿ
ಕನ್ನಡ ಕಿರುತೆರೆಯ ನೆಚ್ಚಿನ ವಿಲನ್ ಆಗಿರುವ ಸುಷ್ಮಾ ನಾಣಯ್ಯ ಅವರು ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವುದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಯ್ಯೋ ಮತ್ತೆ ಬಂದಿದ್ದಾರಾ? ಅಲ್ಲಿ ಲಕ್ಷ್ಮಿ ಬಾರಮ್ಮದಲ್ಲಿ ಲಕ್ಷ್ಮಿಗೆ ತೊಂದರೆ ಕೊಡುತ್ತಿದ್ದರು ಕಾವೇರಿ ಅತ್ತೆ. ಇವಾಗ ಮತ್ತೆ ಈ ಲಕ್ಷ್ಮಿಗೆ ತೊಂದರೆ ಕೊಡುವುದಕ್ಕೆ ಬಂದಿದ್ದಾರಾ? ಎಂದು ತಮಾಷೆಯಾಗಿ ಕೇಳಿದ್ದಾರೆ ವೀಕ್ಷಕರು.