Bigg Bossನಿಂದ ಚೀಪ್​ ಆಗ್ಬಿಟ್ಟೆ, ಕಡಿಮೆ ರೇಟ್​ಗೆ ಕರೀತಾರೆ ಎಂದ Dog Satish, ಗಿಲ್ಲಿ ಸರ ವಾಪಸ್​ಗೆ ಲೇವಡಿ

Published : Apr 21, 2026, 01:17 PM IST

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, 'ಗಿಲ್ಲಿ' ನಟನನ್ನು ಲೇವಡಿ ಮಾಡಿದ್ದಾರೆ. ಬಿಗ್ ಬಾಸ್‌ಗೆ ಹೋಗಿ ಬಂದ ಮೇಲೆ ತಾನು ಚೀಪ್ ಆಗಿದ್ದು, ಕಡಿಮೆ ರೇಟ್‌ಗೆ ಕರೆಯುತ್ತಾರೆ ಎಂದು ಆರೋಪಿಸಿದ್ದಾರೆ. ಬಿಗ್ ಬಾಸ್‌ನಿಂದಲೇ ತಮ್ಮ ಕರಿಯರ್ ಹಾಳಾಯಿತು ಎಂದು ಸತೀಶ್ ಹೇಳಿಕೊಂಡಿದ್ದಾರೆ.

PREV
16
ಬಾಯಿ ಬಿಟ್ಟರೆ ಕೋಟಿ

ಬಿಗ್​ಬಾಸ್​ನಿಂದ ಖ್ಯಾತಿ ಪಡೆದಿರುವ ಡಾಗ್​ ಸತೀಶ್, ಬಾಯಿ ಬಿಟ್ಟರೆ ಕೋಟಿಯಲ್ಲಿ ಮಾತನಾಡುವವರು. ಇವರೊಬ್ಬ ಪುಂಗಿದಾಸ ಎಂದು ಹೇಳಿಕೊಂಡೇ ಅದೆಷ್ಟೋ ಯುಟ್ಯೂಬ್​ ಚಾನೆಲ್​ನವರು ಇವರನ್ನು ಕರೆಸಿ ಟಿಆರ್​ಪಿ ಏರಿಸಿಕೊಂಡರು. ಗೊತ್ತೇ ಇರಲ್ಲ, ಹೆಸರೇ ಇಲ್ಲದ ಕೆಲವು ಇನ್​ಸ್ಟಾಗ್ರಾಮ್​ನಲ್ಲಿಯೂ ಇವರ ಹವಾ ಜೋರಾಗಿಯೇ ನಡೆದಿತ್ತು.

26
ಎಂಟು ಮಂದಿ ಹುಡುಗಿಯರನ್ನು ಇಟ್ಕೊಂಡೇ...

ಕಾಲೇಜು ದಿನಗಳಲ್ಲಿ ಎಂಟು ಮಂದಿ ಹುಡುಗಿಯರನ್ನು ಇಟ್ಟುಕೊಂಡೇ ತಿರುಗುತ್ತಿದ್ದೆ ಎನ್ನುತ್ತಾರೆ. ತಮ್ಮ ಹಿಂದೆ ಈಗಲೂ ಹುಡುಗಿಯರು ಬೀಳ್ತಾರೆ, ಹೀರೋಯಿನ್​ಗಳು ಕರೀತಾರೆ. ಪ್ರಧಾನಿಗೂ ನೀಡದ ವ್ಯವಸ್ಥೆ ನನಗೆ ನೀಡ್ತಾರೆ, ನನ್ನ ಒಂದೇಒಂದು ನೋಟಕ್ಕೆ ಇಂಟರ್​ನ್ಯಾಷನಲ್​ ಫಿಗರ್​ಗಳೂ ಬೀಳ್ತಾರೆ ಎಂದೆಲ್ಲಾ ಇಂದಿಗೂ ಹೇಳುತ್ತಲೇ ಬಂದಿದ್ದಾರೆ.

36
ಕಿಚ್ಚನ ಕ್ಲಾಸ್​

ಬಿಗ್​ಬಾಸ್​ ಅನ್ನು ರಾತ್ರೋರಾತ್ರಿ ಇಂಟರ್​ನ್ಯಾಷನಲ್​ ಲೆವೆಲ್​ಗೆ ಕರೆದುಕೊಂಡು ಹೋಗಬಲ್ಲೆ ಎಂದೆಲ್ಲಾ ಹೇಳುತ್ತಿದ್ದ ಡಾಗ್​ ಸತೀಶ್​ ಅವರ ಮರ್ಯಾದೆಯನ್ನು ಬಿಗ್​ಬಾಸ್​ ಫಿನಾಲೆಯಲ್ಲಿ ಸಂಪೂರ್ಣವಾಗಿ ತೆಗೆದಿದ್ದರು ಕಿಚ್ಚ ಸುದೀಪ್​. ಡಾಗ್​ ಸತೀಶ್​ ಅವರನ್ನು ಮಾತಿನಲ್ಲಿಯೇ ಕಟ್ಟಿ ಹಾಕಿ, ನೀವು ಕುಡಿದು ಬಂದಿದ್ದೀರೋ, ನಾನು ಕುಡಿದಿದ್ದೇನೋ ಗೊತ್ತಾಗ್ತಿಲ್ಲ ಎಂದು ಹೇಳುವ ಮೂಲಕ ಎಲ್ಲರ ಎದುರೇ ಡಾಗ್​ ಸತೀಶ್​ ಬಾಯಿ ಮುಚ್ಚಿಸಿದ್ದರು.

46
ಗಿಲ್ಲಿ ನಟನ ಬಗ್ಗೆ ಲೇವಡಿ

ಆದರೂ ಡಾಗ್​ ಸತೀಶ್​ ಮಾತು ನಿಂತಿಲ್ಲ. ಇದೀಗ ಚಿನ್ನದ ಷೋರೂಮ್​ ಒಂದರ ವೇಳೆ ಗಿಲ್ಲಿ ನಟನಿಗೆ ಭರ್ಜರಿ ಚಿನ್ನದ ಸರ ಹಾಕಲಾಗಿತ್ತು. ಬಹುತೇಕ ಮಂದಿ ಅದನ್ನುಅವರಿಗೇ ಕೊಟ್ಟಿದ್ದು ಎಂದು ತಿಳಿದುಕೊಂಡಿದ್ದರು. ಖುದ್ದು ತಾನೂ ಹಾಗೆಯೇ ತಿಳಿದುಕೊಂಡಿದ್ದೆ ಎಂದು ಗಿಲ್ಲಿ ಹೇಳಿದ್ದರು. ಆದರೆ ಕೊನೆಗೆ ಅದನ್ನು ಜಾಹೀರಾತಿಗೆ ಬಳಸಿಕೊಂಡು ವಾಪಸ್​ ತೆಗೆದುಕೊಳ್ಳಲಾಗಿತ್ತು.

56
ಗಿಲ್ಲಿಗಿಂತ ನನಗೇ ಸಿಕ್ಕಾಪಟ್ಟೆ ಡಿಮಾಂಡ್​

ಇದರ ಬಗ್ಗೆ ಲೇವಡಿ ಮಾಡಿರೋ ಸತೀಶ್, ಗಿಲ್ಲಿಗಿಂತ ನನಗೇ ಸಿಕ್ಕಾಪಟ್ಟೆ ಡಿಮಾಂಡ್​. ಗಿಲ್ಲಿಗೆ ಚಿನ್ನದ ಸರ ಹಾಕಿ ವಾಪಸ್​ ತಗೊಂಡ್ರು. ಆದ್ರೆ ನನಗಾಗಿದ್ರೆ ನನಗೇ ಕೊಡ್ತಾ ಇದ್ರು, ಈಗಲೂ ನನಗೇ ಸರ ಕೊಡ್ತಾರೆ ಎಂದಿದ್ದಾರೆ.

66
ಕಡಿಮೆ ರೇಟ್​ಗೆ ಕರೀತಾರೆ

ಬಿಗ್​ಬಾಸ್​​ನಿಂದಲೇ ಈ ಪರಿಯ ಖ್ಯಾತಿ ಪಡದಿರುವ ಡಾಗ್​ ಸತೀಶ್​ ಈಗ ಬಿಗ್​ಬಾಸ್​ ವಿರುದ್ಧವೇ ಮಾತನಾಡಿದ್ದಾರೆ. ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ನಾನು ಚೀಪ್​ ಆಗಿದೆ. ಕಡಿಮೆ ರೇಟ್​ಗೆ ಕರೀತಾರೆ. ಮೊದಲೆಲ್ಲಾ ಬಂದು ಹೋದ್ರೆ ಸಾಕು, 2 ಲಕ್ಷ ಕೊಡ್ತಿದ್ರು, ಈಗ ಕಡಿಮೆ ಬೆಲೆ ಹೇಳ್ತಾರೆ. ಬಿಗ್​ಬಾಸ್​ನಿಂದ ನನ್ನ ಕರಿಯರ್​ ಹಾಳಾಯ್ತು ಎಂದಿದ್ದಾರೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories