Black & Red ಸೀರೆಯಲ್ಲಿ ಮಿಂಚಿದ ದಿವ್ಯಾ ಉರುಡುಗ: ಈ ಲುಕ್‌ನಲ್ಲಿ ನಿಮ್ಮನ್ನ ಅರವಿಂದ್‌ ನೋಡಿದ್ರೆ...

First Published | Oct 14, 2023, 2:00 AM IST

ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಇನ್‌ಸ್ಟಾಗ್ರಾಂನಲ್ಲಿ ಬ್ಲ್ಯಾಕ್ ಅಂಡ್ ರೆಡ್ ಸೀರೆ ಧರಿಸಿ ಮಿಂಚುತ್ತಿರುವ ಫೋಟೋ ಹಂಚಿಕೊಂಡಿದ್ದು, ವೈರಲ್ ಆಗಿದೆ.

ದಿವ್ಯಾ ಉರುಡುಗ ಕಿರುತೆರೆ ನಟಿಯಾಗಿ, ಸಿನಿಮಾ ನಟಿಯಾಗಿ ಗುರುತಿಸಿಕೊಂಡಿದ್ದ ದಿವ್ಯಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಮತ್ತಷ್ಟು ಖ್ಯಾತಿಗಳಿಸಿದರು. 

ಬಿಗ್​ ಬಾಸ್ ಬೆಡಗಿ, ಹುಲಿರಾಯ ಬೆಡಗಿ ದಿವ್ಯಾ ಉರುಡುಗ ಸೀರೆಯುಟ್ಟು, ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಲೈಕ್​ಗಳ ಸುರಿಮಳೆ ಆಗಿದೆ.

Tap to resize

ಸದ್ಯ ಬ್ಲ್ಯಾಕ್ ಅಂಡ್ ರೆಡ್​ ಸೀರೆಯಲ್ಲಿ ನಟಿ ದಿವ್ಯಾ ಉರುಡುಗ ಮಿಂಚುತ್ತಿದ್ದು, ಸೀರೆಯಲ್ಲಿ ದಿವ್ಯಾ ನೋಡಿದ ಫ್ಯಾನ್ಸ್ 'ನಾರಿಗೇ ಸೀರೆ ಅಂದವೋ?... ಸೀರೆಗೆ ನಾರಿ ಅಂದವೋ? ಬಗೆಹರಿಯದ ಒಗಟುವೋ', 'ಮಲೆನಾಡಿನ ಸೌಂದರ್ಯ ಗರಿ ಬಿಚ್ಚಿ ನಿಂತಿದೆ ನಿಮ್ಮ ರೂಪದಲ್ಲಿ ದಿವಿ', 'ಈ ಲುಕ್‌ನಲ್ಲಿ ನಿಮ್ಮನ್ನ ಅರವಿಂದ್‌ ನೋಡಿದ್ರೆ', ಹಾಗೂ ಬ್ಯೂಟಿಫುಲ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ದಿವ್ಯಾ ಉರುಡುಗ ಸೀಸನ್ 8ರಲ್ಲಿ ಅರವಿಂದ್ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರೂ ಇದ್ದರು. 

ಅರವಿಂದ್ ಹಾಗೂ ದಿವ್ಯಾ ‘ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ  ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಬಳಿಕ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ. 

ದಿವ್ಯಾ ಉರುಡುಗ ಕನ್ನಡದಲ್ಲಿ ಧ್ವಜ, ಫೇಸ್ 2 ಫೇಸ್ ಮತ್ತು ರಾಂಚಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹುಲಿರಾಯ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. 

Latest Videos

click me!