ಹರ ಹರ ಮಹಾದೇವ ಖ್ಯಾತಿಯ ವಿನಯ್ ಗೌಡ ಈ ಸಲ ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ವಿನಯ್ ಮತ್ತು ಪತ್ನಿ ಅಕ್ಷತಾ ಕಾಣಿಸಿಕೊಂಡಿದ್ದರು.
ವೇದಿಕೆ ಮೇಲೆ ವಿನಯ್ ಜೊತೆ ಮಾತನಾಡಿ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲು ಕಿಚ್ಚ ಸುದೀಪ್ ಸಜ್ಜಾಗುತ್ತಾರೆ, ಆಗ ಪತ್ನಿ ಅಕ್ಷತಾರನ್ನು ಮಾತನಾಡಿಸುತ್ತಾರೆ.
ವಿನಯ್ ಗೌಡ ಯೋಗಕ್ಷೇಮ ಅಥವಾ ಸಲಹೆ ಕೊಡದ ಅಕ್ಷತಾ ಒಂದು ಮಾತಿನಲ್ಲಿ ದಯವಿಟ್ಟು ವಿನಯ್ ಮೊಬೈಲ್ ಪಾಸ್‌ವರ್ಡ್ ಹೇಳಬೇಕು ಎನ್ನುತ್ತಾರೆ.
ಸುದೀಪ್ ಪಕ್ಕ ನಿಂತುಕೊಂಡು ನನಗೆ ಪತ್ನಿ ಮತ್ತು ಮಗ ಮುಖ್ಯ ಅವರಿಗಿಂತ ಹೆಚ್ಚು ನನ್ನ ಜೀವನದಲ್ಲಿ ಏನೂ ಇಲ್ಲ ಎನ್ನುವ ವಿನಯ್ ಮುಖ ನೋಡಿ ಕಿಚ್ಚ ಶಾಕ್ ಆಗುತ್ತಾರೆ.
ಇಲ್ಲ ಇಲ್ಲ ಸರ್ ಆಕೆ ಫಿಂಗರ್ ಪ್ರಿಂಟ್ ನನ್ನ ಮೊಬೈಲ್ ಲಾಕ್ ಓಪನ್ ಮಾಡಬಹುದು ವಾಟ್ಸಪ್ ಯಾಕೆ ಕೊಟ್ಟಿಲ್ಲ ಅಂದ್ರೆ ಕೆಲವೊಂದು ಗ್ರೂಪ್‌ಗಳಿರುತ್ತದೆ ಎಂದಿದ್ದಾರೆ.