Spandana Somanna dress trolled : ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ನಟಿ ಸ್ಪಂದನಾ ತುಂಡುಡುಗೆ ತೊಟ್ಟು ಟ್ರೋಲ್ ಆಗಿದ್ದಾಅರೆ. ಅವರ ಡ್ರೆಸ್ ನೋಡಿ ನೆಟ್ಟಿಗರು ಕೋಪಗೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀನಸ್ 12ರ ಸ್ಪರ್ಧಿ ಸ್ಪಂದನಾ ಸೋಮಣ್ಣ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಜನವರಿ 22 ರಂದು ಸ್ಪಂದನಾ ಸೋಮಣ್ಣ 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇ ರೀಲ್ಸನ್ನು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಆಗಿ ವಿಡಿಯೋ ಮಾಡಿರುವ ಸ್ಪಂದನಾ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.
26
ತುಂಡುಡುಗೆಯಲ್ಲಿ ಫೋಟೋಕ್ಕೆ ಫೋಸ್
ಸ್ಪಂದನಾ ಸೋಮಣ್ಣ ತಮ್ಮ ಬರ್ತ್ ಡೇ ರೀಲ್ಸ್ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೆ ತುಂಡುಡುಗೆಯ ಫೋಟೋವನ್ನು ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕ್ಕ ಬಟ್ಟೆಯಲ್ಲಿ ಅವರ ಸಂಪೂರ್ಣ ಕಾಲು ಕಾಣ್ತಿದೆ. ಬೆಂಕಿ ಮುಂದೆ ಕುಳಿತು ಸ್ಪಂದನಾ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಗುಡ್ ನೈಟ್ ಫ್ಯಾಮಿಲಿ ಅಂತ ಫೋಟೋಕ್ಕೆ ಸ್ಪಂದನಾ ಶೀರ್ಷಿಕೆ ನೀಡಿದ್ದಾರೆ.
36
ಸ್ಪಂದನಾ ಫೋಟೋ ಟ್ರೋಲ್
ಸ್ಪಂದನಾ ಈ ಫೋಟೋ ಬಳಕೆದಾರರಿಗೆ ಇಷ್ಟವಾಗಿಲ್ಲ. ಸ್ಪಂದನಾ ಡ್ರೆಸ್ ನೋಡಿ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ನಿಮ್ಮ ಡ್ರೆಸ್ ಸೆನ್ಸ್ ಚೆನ್ನಾಗಿಲ್ಲ, ಸೀರೆಯುಟ್ಟರೆ ಅಪ್ಸರೆಯಂತೆ ಕಾಣ್ತೀರಿ, ಇಂಥ ಡ್ರೆಸ್ ನಿಮಗೆ ಬೇಡ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೈ ತುಂಬಾ ಬಟ್ಟೆ ಹಾಕಿಕೊಳ್ಳಿ ಎನ್ನುವ ಕಮೆಂಟ್ ಬಂದಿದೆ. ಮತ್ತೆ ಕೆಲವರು ಕಾವ್ಯ ನೋಡಿ ಕಲಿಯಬೇಕು, ಅವರು ಹೇಗಿದ್ದಾರೆ ನೋಡಿ ಕಲಿತುಕೊಳ್ಳಿ ಅಂತ ಸ್ಪಂದನಾಗೆ ಸಲಹೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಕಳ್ಳ ಪುಟ್ಟಿ ಎಂದೇ ಪ್ರಸಿದ್ಧಿ ಪಡೆದಿದ್ದರು. ಗಿಲ್ಲಿ, ಸ್ಪಂದನಾಗೆ ಈ ನಾಮಕರಣ ಮಾಡಿದ್ರು. ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಸ್ಪಂದನಾ ಮಧ್ಯೆ ಒಳ್ಳೆ ಫ್ರೆಂಡ್ ಶಿಫ್ ಬೆಳೆದಿತ್ತು. ಬಿಗ್ ಬಾಸ್ ಮುಗಿದ ಮೇಲೂ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತುಂಡುಡುಗೆಯಲ್ಲಿ ಟ್ರೋಲ್ ಆಗ್ತಿದ್ದಂತೆ ಸ್ಪಂದನಾ ತಮ್ಮ ಡ್ರೆಸ್ ಸ್ಟೈಲ್ ಬದಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೀರೆಯುಟ್ಟ ಫೋಟೋ ಪೋಸ್ಟ್ ಮಾಡಿದ್ದಾರೆ.
56
ಸೋಮಾರಿ ಸ್ಪಂದನಾ
ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಸೋಮಾರಿ ಎಂಬುದು ವೀಕ್ಷಕರಿಗೆ ಗೊತ್ತಾಗಿದೆ. ತಟ್ಟೆಗೆ ಊಟ ಹಾಕಿಕೊಳ್ಳಲೂ ಸ್ಪಂದನಾ ಬೇಸರ ಮಾಡ್ಕೊಳ್ತಾರೆ ಅಂತ ಅನೇಕ ಸ್ಪರ್ಧಿಗಳು ಹೇಳಿದ್ದರು. ಚೆನ್ನಾಗಿ ಡ್ರೆಸ್ ಮಾಡ್ಕೊಂಡು, ತಮಾಷೆ ಮಾಡ್ತಾ ಓಡಾಡ್ತಿದ್ದ ಸ್ಪಂದನಾಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಿದೆ.
66
ಕಲರ್ಸ್ ಕನ್ನಡದ ಹುಡುಗಿ
ಸ್ಪಂದನಾ ಸೋಮಣ್ಣ ಕಲರ್ಸ್ ಕನ್ನಡದ ಹುಡುಗಿ. ಸ್ಪಂದನಾ ಕರಿಮಣಿ ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ನಾನು ನನ್ನ ಕನಸು ಕನ್ನಡ ಸೀರಿಯಲ್ ಮೂಲಕ ಕಿರುತೆರೆಗೆ ಬಂದಿದ್ದ ಸ್ಪಂದನಾ ತೆಲುಗು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಮೂಲತಃ ಮೈಸೂರಿನವರಾದ ಸ್ಪಂದನಾ ಸೋಮಣ್ಣ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಜನವರಿ 22, 1998 ರಂದು ಜನಿಸಿದ ಸ್ಪಂದನಾ ಆಕ್ಟಿಂಗ್ ಜೊತೆ ಮಾಡಲಿಂಗ್ ಕೂಡ ಮಾಡ್ತಾರೆ. ಸದ್ಯ ಸ್ಪಂದನಾ, ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಯಾವ ಪ್ರಾಜೆಕ್ಟ್ ಜೊತೆ ತೆರೆಗೆ ಬರ್ತಾರೆ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.