ಕಿರುತೆರೆ ನಟಿ ಭವ್ಯಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಸಿಕೊಂಡು ಹೊರ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಅಕ್ಟಿವ್ ಹಾಗೂ ಸಂದರ್ಶನಗಳಲ್ಲಿ ಫುಲ್ ಬ್ಯುಸಿ.
26
ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಸಿಸಿಎಲ್ ನೋಡಲು ಹಾಗೂ ತಮ್ಮ ಆಪ್ತ ಸ್ನೇಹಿತರಿಗೆ ಸಪೋರ್ಟ್ ಮಾಡಲು ಭವ್ಯಾ ಆಗಾಗ ಸ್ಟೇಡಿಯಮ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
36
ಈಗ ಭವ್ಯಾ ಗೌಡ ಅಪ್ಲೋಡ್ ಮಾಡಿರುವ ಸೆಲ್ಫಿ ಕೂದ ಸದ್ದು ಮಾಡುತ್ತಿದೆ. ನೆತ್ತಿ ಮೇಲಿರುವ ಸೂರ್ಯನಿಗೆ ನಾಚಿಕೊಂಡು ಸನ್‌ಕಿಸ್ ಪೋಸ್ ಕೊಟ್ಟು ಫೋಟೋ ಅಪ್ಲೋಡ್ ಮಾಡಿದ್ದಾರೆ.
46
me, myself anf I ಎಂದು ಭವ್ಯಾ ಗೌಡ ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಖುಷಿ ವಿಚಾರ ಏನೆಂದರೆ ಈ ಫೋಟೋಗಳನ್ನು ಬಿಗ್ ಬಾಸ್ ತ್ರಿವಿಕ್ರಮ್ ಲೈಕ್ ಮಾಡಿದ್ದಾರೆ ಎಂದು.
56
ಆದರೆ ನೆಟ್ಟಿಗರ ಮತ್ತೊಂದು ಚಿಂತೆ ಏನೆಂದರೆ 'ಅಯ್ಯೋ ಇಷ್ಟು ಬಿಸಿನಲ್ಲಿ ನೀನು ಕುತ್ಕೊಂಡ್ರೆ ಕರ್ಕಿ ಆಗ್ಬಿಡುತ್ತೀಯಾ ಸುಂದರಿ ಮೊದಲು ಎದ್ದು ಹೋಗು' ಎಂದು ಕಾಲೆಳೆದು ಕಾಮೆಂಟ್ ಮಾಡಿದ್ದಾರೆ.
66
ಸದ್ಯ ಭವ್ಯಾ ಗೌಡ ಯಾವ ಪ್ರಾಜೆಕ್ಟ್‌ಗೂ ಸಹಿ ಮಾಡಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಬೇಕಿತ್ತು ಆದರೆ ಆರೋಗ್ಯ ಸಮಸ್ಯೆಯಿಂದ ಹೊರ ನಡೆದಿದ್ದಾರೆ. ಮುಂದೆ ಸೀರಿಯಲ್ ಮಾಡ್ತಾರಾ ಸಿನಿಮಾ ಮಾಡ್ತಾರಾ ಕಾದು ನೋಡಬೇಕಿದೆ.