ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಪತಿ ಜೊತೆಗಿನ ಫೋಟೋ ಹಂಚಿಕೊಂಡ Gattimela Serial ನಟಿ ಅಶ್ವಿನಿ!

Published : Feb 14, 2025, 02:44 PM ISTUpdated : Feb 14, 2025, 03:54 PM IST

ʼಗಟ್ಟಿಮೇಳʼ ಧಾರಾವಾಹಿ ನಟಿ ಅಶ್ವಿನಿ ಅವರು ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವರ್ಷಗಳಿಂದ ತೆರೆಯಿಂದ ದೂರ ಇದ್ದರೂ ಅವರ ಅಭಿಮಾನಿ ಬಳಗ ಹೆಚ್ಚಾಗುತ್ತಲೇ ಇದೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ರೂ ವೈಯಕ್ತಿಕ ವಿಚಾರಗಳನ್ನು ಶೇರ್‌ ಮಾಡೋದು ಕಡಿಮೆ.

PREV
17
ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಪತಿ ಜೊತೆಗಿನ ಫೋಟೋ ಹಂಚಿಕೊಂಡ Gattimela Serial ನಟಿ ಅಶ್ವಿನಿ!

ʼಪ್ರೇಮಿಗಳ ದಿನʼದ ಅಬ್ಬರ ಜೋರಾಗಿದೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಅನೇಕರು ʼವ್ಯಾಲೆಂಟೈನ್ಸ್‌ ಡೇʼ ಶುಭಾಶಯ ತಿಳಿಸುತ್ತಿದ್ದಾರೆ, ಇನ್ನೂ ಕೆಲವರು ಆಚರಣೆಯಲ್ಲಿ ಮಗ್ನರಾಗಿದ್ದಾರೆ. ಈಗ ‘ಗಟ್ಟಿಮೇಳ’ ಧಾರಾವಾಹಿ ನಟಿ ಅಶ್ವಿನಿ ಅವರು ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ವರ್ಷಗಳಿಂದ ತೆರೆಯಿಂದ ದೂರ ಇದ್ದರೂ ಕೂಡ ಅಶ್ವಿನಿ ಅವರ ಅಭಿಮಾನಿ ಬಳಗ ಹೆಚ್ಚಾಗುತ್ತಲೇ ಇದೆ.
 

27

ʼರಾಧಾ ರಮಣʼ ಧಾರಾವಾಹಿಯಲ್ಲಿ ನಟಿಸಿದ್ದ ಅಶ್ವಿನಿ ಅವರು ʼಗಟ್ಟಿಮೇಳʼ ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ನಟಿಸಿದ್ದರು. ಆ ನಂತರದಲ್ಲಿ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದರು. ಇದಾದ ನಂತರದಲ್ಲಿ ಸಾಕಷ್ಟು ಬಾರಿ ಆರತಿ ಪಾತ್ರಧಾರಿಗಳ ಬದಲಾವಣೆ ಆಗಿದೆ.
 

37

ಅಶ್ವಿನಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ರೂ ಕೂಡ ವೈಯಕ್ತಿಕ ವಿಚಾರಗಳನ್ನು ಶೇರ್‌ ಮಾಡೋದು ತುಂಬ ಕಡಿಮೆ. ಇದೇ ಕಾರಣಕ್ಕೆ ಅವರು ಮದುವೆಯ ವಿಷಯವನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ. ಈ ಬಾರಿ ಸತ್ಯನಾರಾಯಣ ಪೂಜೆ ಮಾಡಿ ತಾವು ಮದುವೆಯಾಗಿರುವ ವಿಷಯವನ್ನು ಅವರು ಹೇಳಿಕೊಂಡಿದ್ದರು. 

47

ಅಶ್ವಿನಿ ಪತಿ ಅಜಯ್‌ ಅವರು ಮೆಡಿಕಲ್‌ ಫೀಲ್ಡ್‌ನಲ್ಲಿದ್ದಾರೆ. ಪ್ರೀತಿಸಿ ಮದುವೆಯಾಗಿರುವ ಈ ಜೋಡಿ ಪರಸ್ಪರ ಕಷ್ಟ-ಸುಖದಲ್ಲಿ ಜೊತೆಗಿದೆ. ಅಶ್ವಿನಿ ಅವರ ನಟನೆಗೆ ಅಜಯ್‌ ತುಂಬ ಬೆಂಬಲ ಕೊಟ್ಟಿದ್ದಂತೆ. 
 

57

ಅಶ್ವಿನಿ ಅವರು ಅಜಯ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ವರ್ಷಗಳ ಹಿಂದೆ ಇವರ ಮದುವೆ ನಡೆದಿದೆ. ದಾವಣಗೆರೆಯಲ್ಲಿ ಸರಳವಾಗಿ ಮದುವೆ ನಡೆದಿದೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

67

ಅಶ್ವಿನಿ ಅವರು ಕನ್ನಡದ ಜೊತೆಗೆ ತೆಲುಗು ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ತೆಲುಗಿನಲ್ಲಿ ಅವರು ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.
 

77

ಸದ್ಯ ಅಶ್ವಿನಿ ಉದ್ಯಮದ ಕಡೆಗೆ ಗಮನ ಕೊಡುತ್ತಿದ್ದಾರೆ. ಸಿರಿಧಾನ್ಯಗಳ ಮಾಲ್ಟ್‌ ಮಾಡಿ ಅವರು ಮಾರಾಟ ಮಾಡುತ್ತಿದ್ದಾರೆ. ಅಶ್ವಿನಿ ಈ ಹೊಸ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದ್ದು, ಪತಿ ಅಜಯ್‌ ಸಹಕಾರ ಸಾಕಷ್ಟಿದೆಯಂತೆ. 


 

click me!

Recommended Stories