ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಮಾಳವಿಕಾ ಪ್ಲ್ಯಾನ್ ವಿಫಲವಾಗಿ ಶರತ್ ಮತ್ತು ಮಗಳು ಹಿತಾ ಒಂದಾಗಿದ್ದಾರೆ. ಇದರ ನಡುವೆಯೇ, ಶರತ್‌ನ ಕಾಲೇಜು ಗೆಳತಿಯಾಗಿ ಐಶ್ವರ್ಯ ಸಿಂಧೋಗಿ ಎಂಟ್ರಿ ಕೊಟ್ಟಿದ್ದು, ಆಕೆಯ ಆಗಮನದಿಂದ ಪತ್ನಿಯರಾದ ದುರ್ಗಾ ಮತ್ತು ಅಂಬಿಕಾಗೆ ಹೊಟ್ಟೆಕಿಚ್ಚು ಶುರುವಾಗಿದೆ.
ನಾ ನಿನ್ನ ಬಿಡಲಾರೆ (Naa Ninna Bidalaare Serial)ನಲ್ಲಿ ಸದ್ಯ ಶರತ್ ಮತ್ತು ಮಗಳು ಹಿತಾ ಒಂದಾಗಿದ್ದಾರೆ. ಇವರಿಬ್ಬರನ್ನೂ ಒಂದು ಮಾಡಲು ದುರ್ಗಾ ಸಾಕಷ್ಟು ಶ್ರಮ ಪಟ್ಟಿದ್ದಾಳೆ.
26
ಮಾಳವಿಕಾ ಪ್ಲ್ಯಾನ್ ಫ್ಲಾಪ್
ಅದೇ ಇನ್ನೊಂದೆಡೆ, ಎಲ್ಲರನ್ನೂ ಬ*ಲಿ ಪಡೆಯಲು ಮಾಳವಿಕಾ ಮಾಡಿರುವ ಪ್ಲ್ಯಾನ್ ಫ್ಲಾಪ್ ಆಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಳವಿಕಾ ಸಾಯಿಸಲು ಮಾಡಿರುವ ಪ್ಲ್ಯಾನ್ ತಿರುಗಿ, ಈಗ ಅಪ್ಪ-ಮಗಳು ಒಂದಾಗುವ ಹಾಗೆ ಮಾಡಿದೆ.
36
ಐಶ್ವರ್ಯ ಸಿಂಧೋಗಿ ಎಂಟ್ರಿ
ಇದರ ನಡುವೆಯೇ, ಸೀರಿಯಲ್ಗೆ ಬಿಗ್ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಎಂಟ್ರಿಯಾಗಿದೆ. ಇದರಲ್ಲಿ ಇವರ ಹೆಸರು ಶ್ರೇಯಾ.
ಶರತ್ನನ್ನು ನೋಡಿ ಶರು ಶರು ಎಂದು ಬಂದು ಅಪ್ಪಿಕೊಂಡುಬಿಟ್ಟಿದ್ದಾಳೆ ಶ್ರೇಯಾ. ಯಾವುದೇ ಬ್ಯೂಟಿ ಬಂದು ಗಂಡನನ್ನು ತಬ್ಬಿಕೊಂಡ್ರೆ ಪತ್ನಿಯ ಹೊಟ್ಟೆಗೆ ಬೆಂಕಿ ಬೀಳದೇ ಇರತ್ತಾ? ದೆವ್ವ ಆಗಿರೋ ಅಂಬಿಕಾ ಹೊಟ್ಟೆಗೂ ಬೆಂಕಿ ಬಿದ್ದರೆ, ದುರ್ಗಾ ಕೂಡ ಸಪ್ಪೆ ಮೋರೆ ಹಾಕಿಕೊಂಡಿದ್ದಾಳೆ.
56
ಕ್ಲೋಸ್ ಫ್ರೆಂಡ್
ಇವರ್ಯಾರು ಎಂದು ಶರತ್ಗೆ ದುರ್ಗಾ ಕೇಳಿದಾಗ, ಇವಳು ನನ್ನ ಕಾಲೇಜಿನ ಕ್ಲೋಸ್ ಫ್ರೆಂಡ್ ಅಂದಿದ್ದಾನೆ ಶರತ್. ಇದನ್ನು ಕೇಳಿ ಇಬ್ಬರು ಪತ್ನಿಯರಿಗೂ ಹೊಟ್ಟೆ ಉರಿದು ಹೋಗಿದೆ. ದುರ್ಗಾ, ಇರಲಿ ಬಿಡಿ. ಫ್ರೆಂಡ್ ಅಷ್ಟೇ ಎಂದು ಸಮಾಧಾನ ಪಟ್ಟುಕೊಂಡರೆ, ನೀನು ಸುಮ್ಮನಿದ್ದರೆ ಆಗಲ್ಲ ಎಂದು ಅಂಬಿಕಾ ದುರ್ಗಾಗೆ ಹೇಳಿದ್ದಾಳೆ.
66
ಹಾಸ್ಯದ ಟಚ್
ಒಟ್ಟಿನಲ್ಲಿ ಮಾಟ, ಮಂತ್ರ, ತಂತ್ರ ಎಂದೆಲ್ಲಾ ಸೀರಿಯಸ್ ಆಗಿ ಹೋಗ್ತಿದ್ದ ಸೀರಿಯಲ್ಗೆ ಒಂದಿಷ್ಟು ಹಾಸ್ಯದ ಟಚಪ್ ನೀಡಲು ಐಶ್ವರ್ಯ ಅವರ ಎಂಟ್ರಿ ಕೊಡಲಾಗಿದೆ. ಮುಂದೇನಾಗತ್ತೆ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.