ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ಅಪ್ಪನ ಮರುಹುಟ್ಟು ಎಂದ ನಟಿ

Published : Feb 10, 2026, 06:47 PM IST

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ, 'ಕರಾವಳಿ ಹೆಣ್ಣು ಹುಲಿ' ಎಂದೇ ಪ್ರಸಿದ್ಧರಾದ ನಟಿ ಸುಷ್ಮಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ.

PREV
16
ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ಖ್ಯಾತಿ

ಮಂಗಳೂರಿನ ಹೆಣ್ಣು ಹುಲಿ ಎಂದೇ ಪ್ರಸಿದ್ಧಿ ಪಡೆದಿರುವ, ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ರಿಯಾಲಿಟಿ ಶೋ ಖ್ಯಾತಿಯ ಸುಷ್ಮಾ ರಾಜ್​ ಅವರು ಇಂದು ಗಂಡು ಮಗುವಿನ ಅಮ್ಮ ಆಗಿದ್ದಾರೆ. ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

26
ಅಪ್ಪನ ಮರುಹುಟ್ಟು

ಸುಷ್ಮಾ ಅವರ ಅಪ್ಪ, ಹುಲಿವೇಷಧಾರಿಯಾಗಿದ್ದ ಅಶೋಕ್​ ಅವರು ತೀರಿಕೊಂಡದ್ದು ಕೂಡ ಫೆಬ್ರುವರಿಯಲ್ಲಿ ಆಗಿರುವ ಹಿನ್ನೆಲೆಯಲ್ಲಿ, ಅಪ್ಪನೇ ಮತ್ತೆ ಹುಟ್ಟಿ ಬಂದಿರುವುದಾಗಿ ಹೇಳಿರೋ ನಟಿ, ʻಅಶೋಕ್‌ ರಾಜ್‌ ಈಸ್‌ ಬ್ಯಾಕ್‌ʼ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

36
ಕರಾವಳಿ ಹೆಣ್ಣು ಹುಲಿ

ಸುಷ್ಮಾ ಅವರನ್ನು ಕರಾವಳಿ ಹೆಣ್ಣು ಹುಲಿ ಎಂದೇ ಕರೆಯಲಾಗುತ್ತದೆ. ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ರೂ ಸುಷ್ಮಾ, ಹುಲಿ ಕುಣಿತದ ಮೂಲಕವೇ ಪ್ರಸಿದ್ಧಿ ಪಡೆದವರು. ಅವರ ಸೀಮಂತದ ಥೀಮ್ ಕೂಡ ಇದೇ ಆಗಿತ್ತು. ಹುಲಿ ಮತ್ತು ಮರಿ ಥೀಮ್ ನಲ್ಲಿ ಸೀಮಂತ ನಡೆದಿತ್ತು. ಸೀಮಂತ ನಡೆದ ಹಾಲ್ ನಲ್ಲಿ ಹುಲಿ, ಹುಲಿ ಮರಿ ಹಾಗೂ ಹುಲಿ ವೇಷದ ಚಿತ್ರಗಳು ಗಮನ ಸೆಳೆದಿದ್ದವು.

46
10 ವರ್ಷಗಳ ಪ್ರೀತಿ

ಅಂದಹಾಗೆ, ಸುಷ್ಮಾ ರಾಜ್ ಹಾಗೂ ನಿಶಾನ್ ಪ್ರೀತಿಸಿ ಮದುವೆ ಆಗಿದ್ದಾರೆ. 10 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಅವರು, ಕೆಲ ವರ್ಷಗಳ ಹಿಂದೆಯೇ ತಮ್ಮ ಪ್ರೀತಿಯನ್ನು ಫ್ಯಾನ್ಸ್ ಮುಂದೆ ಇಟ್ಟಿದ್ದರು. 2024ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

56
ಸಿನಿಮಾಗಳಲ್ಲಿ ನಟನೆ

ಸುಷ್ಮಾ ರಾಜ್ ಹುಬ್ಬಳ್ಳಿ ಹುಡುಗ, ಮಂಗಳೂರು ಹುಡುಗಿ ಸೀರಿಯಲ್, ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ ಇಂಡಿಯನ್ ರಿಯಾಲಿಟಿ ಶೋನಲ್ಲಿ ಟಾಪ್ 4 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಸುಷ್ಮಾ ರಾಜ್, ಮಾಡೆಲ್ ಕೂಡ ಹೌದು. ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅವರು, ಫಿಟ್ನೆಸ್ ತರಬೇತಿ ನೀಡ್ತಾರೆ. ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ಮಾಡಿರುವ ಅವರು, ಹುಲಿ ಕುಣಿತದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಅವರ ಪತಿ ನಿಶಾನ್ ಕೂಡ ಫಿಟ್ನೆಸ್ ತರಬೇತುದಾರರಾಗಿದ್ದಾರೆ.

66
ವಿಭಿನ್ನ ಪ್ರೆಗ್ನೆನ್ಸಿ ಫೋಟೋ ಶೂಟ್​

ಅವರು ತಮ್ಮ ಪ್ರೆಗ್ನೆನ್ಸಿ ಫೋಟೋ ಶೂಟ್​ ಕೂಡ ವಿಭಿನ್ನವಾಗಿ ಮಾಡಿಸಿಕೊಂಡಿದ್ದರು. ಹೊಟ್ಟೆ ಮೇಲೆ ಹುಲಿ ಮರಿ ಚಿತ್ರ ಬಿಡಿಸಲಾಗಿತ್ತು. ಅಚ್ಚು ಎನ್ನುವವರು ಹುಲಿ ಚಿತ್ರವನ್ನು ಸುಷ್ಮಾ ಹೊಟ್ಟೆಯ ಮೇಲೆ ಬಿಡಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories