ಅದೊಂದು ತಪ್ಪಿನಿಂದ ಚಿತ್ರರಂಗದಲ್ಲಿ ಅವಕಾಶವಿಲ್ಲದೆ ಬಾರ್‌ ಡ್ಯಾನ್ಸರ್‌ ಆದ Bigg Boss ಸ್ಪರ್ಧಿ!

Published : Aug 24, 2025, 02:46 PM IST

'ಕಚ್ಚಾ ಬಾದಾಮ್' ಹಾಡಿನಿಂದ ಜನಪ್ರಿಯತೆ ಪಡೆದಿರೋ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್, ನಟಿ ಅಂಜಲಿ ಅರೋರಾಇತ್ತೀಚೆಗೆ ಥಾಯ್‌ಲೆಂಡ್‌ನ ಪಟ್ಟಾಯಾದಲ್ಲಿರುವ ಒಂದು ನೈಟ್‌ಕ್ಲಬ್‌ನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

PREV
15

ಟಿಕ್‌ಟಾಕ್‌ನಲ್ಲಿ 'ಕಚ್ಚಾ ಬಾದಾಮ್' ಹಾಡಿಗೆ ರೀಲ್ಸ್ ಮಾಡುವ ಮೂಲಕ ಅಂಜಲಿ ಅರೋರ ಅವರು, 2022ರಲ್ಲಿ ದೇಶಾದ್ಯಂತ ಹೆಸರು ಮಾಡಿದರು. ಅಷ್ಟೇ ಅಲ್ಲದೆ ಕಂಗನಾ ರಣಾವತ್ ಅವರ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ‌ ಕೂಡ ಭಾಗವಹಿಸಿದರು. 'ಬಿಗ್ ಬಾಸ್' ಶೋನಲ್ಲಿಯೂ ಭಾಗವಹಿಸಿದ್ದರು.

25

'ಶ್ರೀ ರಾಮಾಯಣ ಕಥಾ'ದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪದೇ ಪದೇ ವಿವಾದಗಳನ್ನು ಮಾಡಿಕೊಂಡಿದ್ದಕ್ಕೋ ಏನೋ ಇವರಿಗೆ ಸಿನಿಮಾ ರಂಗದಲ್ಲಿ ಅವಕಾಶ ಕಡಿಮೆ ಆಯಿತು. ಈ ಹಿಂದೆ ಇವರ ಖಾಸಗಿ ವಿಡಿಯೋವೊಂದು ಲೀಕ್‌ ಆಗಿತ್ತು.

35

ಪಟ್ಟಾಯಾದ ಐಷಾರಾಮಿ ಕ್ಲಬ್‌ನಲ್ಲಿ ಅಂಜಲಿ ಅರೋರ ಅವರು 'ಓ ಸಾಕಿ ಸಾಕಿ' ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಶಿಮ್ಮರಿಂಗ್ ಪೇಸ್ಟಲ್ ಹಾಲ್ಟರ್ ನೆಕ್ ಕ್ರಾಪ್ ಟಾಪ್, ಹೈ ಸ್ಲಿಟ್ ಸ್ಕರ್ಟ್ ಧರಿಸಿ, ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್‌ ಜೊತೆಗೆ ಡ್ಯಾನ್ಸ್‌ ಮಾಡಿದ್ದಾರೆ. ಕೆಲವರು ಇದನ್ನು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟೀಕಿಸಿದ್ದಾರೆ.

45

ಸರಿಯಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಇಲ್ಲ ಅಂದ್ರೆ ಹೀಗೆ ಕ್ಲಬ್‌ನಲ್ಲಿ ಡ್ಯಾನ್ಸ್‌ ಮಾಡಬೇಕು. ಡ್ಯಾನ್ಸ್‌ ಮೂಲಕ ಜೀವನ ಮಾಡಿದ್ರೆ ತಪ್ಪೇನಿದೆ ಎಂದು ಕೂಡ ಕೆಲವರು ಹೇಳಿದ್ದಾರೆ.

55

ಅಂಜಲಿ ಅರೋರ ಒಟ್ಟು ಆಸ್ತಿಯ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳು. ಮಾಡೆಲಿಂಗ್, ಬ್ರಾಂಡ್ ಕೊಲೇಬರೇಶನ್‌, ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಂದಲೂ ಒಂದಿಷ್ಟು ಹಣ ಬರುವುದು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಪಾನ್ಸರ್ಡ್ ಪೋಸ್ಟ್‌ಗೆ 50,000 ರಿಂದ 1 ಲಕ್ಷ ರೂಪಾಯಿಗಳವರೆಗೆ ಹಣ ಪಡೆಯುತ್ತಾರೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories