BBK9 ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ; ತಾಳ್ಮೆ ಹೆಚ್ಚಾಗಿದೆ ಅಂದಿದಕ್ಕೆ ಕಣ್ಣೀರಿಟ್ಟ ನಟಿ

Published : Oct 09, 2022, 11:09 PM IST

ವಜ್ರಕಾಯ ತಂಡಕ್ಕೆ ಕ್ಯಾಪ್ಟನ್ ಆಗಿ ಕಿಚ್ಚನ ಮೆಚ್ಚುಗೆ ಪಡೆದ ನಟಿ ಅನುಪಮಾ ಗೌಡ. ಭಾವುಕಳಾದ ನಟಿ...

PREV
18
BBK9 ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ; ತಾಳ್ಮೆ ಹೆಚ್ಚಾಗಿದೆ ಅಂದಿದಕ್ಕೆ ಕಣ್ಣೀರಿಟ್ಟ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ನಟಿ ಕಮ್ ಸೋಷಿಯಲ್ ಮೀಡಿಯಾ ಸ್ಟಾರ್ ಅನುಪಮಾ ಗೌಡ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಸೀಸನ್‌ನಲ್ಲಿ ಅನುಪಮಾ ಸಖತ್ ಡಿಫರೆಂಟ್ ಅಗಿ ಕಾಣಿಸಿಕೊಳ್ಳುತ್ತಿದ್ದಾರೆ.

28

ಬಿಗ್ ಬಾಸ್ ಸೀಸನ್ 5ರಲ್ಲಿ ಅನುಪಮಾ ಗೌಡ ಸ್ಪರ್ಧಿಸಿದ್ದು ಆಗ ವೀಕ್ಷಕರಿಗೆ ಕಾಣಿಸಿಕೊಂಡ ರೀತಿಗೂ ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ರೀತಿಗೂ ತುಂಬಾನೇ ವ್ಯತ್ಯಾಸವಿದೆ. 

38

ಎರಡನೇ ವಾರ ವಜ್ರಕಾಯ ತಂಡದ ಕ್ಯಾಪ್ಟನ್ ಅಗಿ ಪ್ರತಿಯೊಬ್ಬರಿಗೂ ಸ್ಪರ್ಧಿಸಲು ಅವಕಾಶ ಕೊಟ್ಟು ಗೆಲ್ಲುವುದಕ್ಕೆ ಬಿಗ್ ಸಪೋರ್ಟ್‌ ಆಗಿದ್ದರು. ಅಲ್ಲ ತಮ್ಮ ಟೀಂನಲ್ಲಿರುವವರು ಕ್ಯಾಪ್ಟನ್ ಆಗಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.

48

ಹೀಗಾಗಿ ಎರಡನೇ ವಾರದ ಕಿಚ್ಚನ ಚಪ್ಪಾಳೆಯನ್ನು ಅನುಪಮಾ ಗೌಡ ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ ಸುದೀಪ್ ಹೇಳಿದ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ.

58

'ಕಾಮ್ ಅಂಡ್ ಕೂಲ್ ಸ್ಪರ್ಧಿಗೆ ಈ ವಾರದ ಕಿಚ್ಚ ಚಪ್ಪಾಳೆ. ಟಾಸ್ಕ್‌ ಚೆನ್ನಾಗಿ ಆಟವಾಡಿದ್ದಾರೆ ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮನೆ ಕೆಲಸಗಳನ್ನು ಚೆನ್ನಾಗಿ ಮಾಡಿದ್ದಾರೆ. ಪ್ರ್ಯಾಂಕ್‌ನ ಕೂಡ ಚೆನ್ನಾಗಿ ಮಾಡಿದ್ದಾರೆ. ತಪ್ಪಿದ್ದಾಗ ತಪ್ಪು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.' ಎಂದು ಸುದೀಪ್ ಹೇಳಿದ್ದಾರೆ

68

 'ಜೊತೆಗೆ ತಮ್ಮ ಟೀಂನ ಚೆನ್ನಾಗಿ ಆಡಿಸಿ ಗೆಲ್ಲಿಸಿದ್ದಾರೆ. ಎಲ್ಲಾದಕ್ಕಿಂತ ವಿಶೇಷವಾಗಿ ಇವೆಲ್ಲವನ್ನ ಯಾವುದೇ ಅಬ್ಬರ ಇಲ್ಲದೆ ಗಲಾಟೆ ಇಲ್ಲ ಮಾಡಿದ್ದಾರೆ. ಹೀಗಾಗಿ ಅನುಪಮಾ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ' ಎಂದಿದ್ದಾರೆ ಸುದೀಪ್.

78

 'ಥ್ಯಾಂಕ್ಯೂ ಸರ್. ನಮ್ ಸೀಸನ್ ಆದ್ಮೇಲೆ ಪ್ರತಿ ಸಲ ಬಿಗ್ ಬಾಸ್ ನೋಡುವಾಗ ಇದು ನಮ್ ಸೀಸನ್‌ನಲ್ಲಿ ಯಾಕೆ ಇರಲಿಲ್ಲ ಎಂದುಕೊಳ್ಳುತ್ತಿದ್ದೆ. ಕಳೆದ ವಾರ ನೀವು ಹೇಳಿದ್ರಿ ಅನುಪಮಾ ಇನ್ನೂ ಆಟ ಶುರು ಮಾಡಿಲ್ಲ. ಎಲ್ಲೋ ಅನಿಸುತ್ತಿತ್ತು ನನ್ನ ಗಂಟಲು ನನಗೆ ಸಮಸ್ಯೆ ಕೊಡುತ್ತಿತ್ತು' ಎಂದು ಅನುಪಮಾ ಹೇಳಿದ್ದಾರೆ.

88

'ನೀವು ಕಾಮ್ ಆಂಡ್ ಕಂಪೋಸ್ ಅಂತ ಹೇಳಿದ್ದು ಅದಕ್ಕಿಂತ ಖುಷಿ ಕೊಡುತ್ತಿದೆ. ಕಳೆದ ಸೀಸನ್ ನನ್ನನ್ನು ಯಾರು ನೋಡಿರುತ್ತಾರೆ ಅದು ತುಂಬಾನೇ ಬದಲಾವಣೆ ಆಗಿದೆ ಅದು ನಿಮ್ಮ ವರೆಗೂ ತಲುಪಿದೆ ನೀವು ಅದನ್ನು ಗಮನಿಸಿ ಎರಡನೇ ವಾರಕ್ಕೆ ಕೊಟ್ಟಿರುವುದಕ್ಕೆ ಖುಷಿ ಆಗುತ್ತಿದೆ' ಎಂದಿದ್ದಾರೆ ಅನುಪಮಾ.

Read more Photos on
click me!

Recommended Stories