year ender 2024: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ನಟ-ನಟಿಯರ ಲಿಸ್ಟ್

First Published | Dec 24, 2024, 4:38 PM IST

2024ರಲ್ಲಿ ಹಲವಾರು ಕನ್ನಡ ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀಪಿಕಾ ದಾಸ್, ಕೌಸ್ತುಭ ಮಣಿ, ಸಿರಿ, ನಯನಾ ನಾಗರಾಜ್, ಚಂದನಾ ರಾಘವೇಂದ್ರ, ಮಾನಸ ಮನೋಹರ್, ಮಂಜು ಪಾವಗಡ, ಚಂದನಾ ಅನಂತಕೃಷ್ಣ, ಧನುಷ್ ಗೌಡ, ಲಾವಣ್ಯ ಹಿರೇಮಠ, ಸಿರಿ ಪ್ರಹ್ಲಾದ್ ಮತ್ತು ಲಕ್ಷ್ಮೀಶ್ರೀ ಭಾಗವತರ್ ವಿವಾಹವಾಗಿದ್ದಾರೆ.

2024 ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, 2025ರ ಹೊಸ ವರ್ಷಕ್ಕೆ 1 ವಾರವಷ್ಟೇ ಬಾಕಿ ಇದೆ. ಈ ಒಂದು ವರ್ಷದಲ್ಲಿ ಕನ್ನಡ ಕಿರುತೆಯಲ್ಲಿ ಸಾಕಷ್ಟು ಬೆಳವಣಿಗಳು ನಡೆದಿವೆ. ಇಲ್ಲಿ 2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.

ಕಿರುತೆರೆ ನಟಿ, ಬಿಗ್‌ಬಾಸ್ ಖ್ಯಾತಿಯ  ದೀಪಿಕಾ ದಾಸ್ 2024ರ ಮಾರ್ಚ್‌ 1ರಂದು ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ದೀಪಕ್ ಎಂಬುವವರನ್ನು ಗೋವಾದಲ್ಲಿ ಮದುವೆಯಾದರು.
 

Tap to resize

ನನ್ನರಸಿ ಸೀರಿಯಲ್ ಖ್ಯಾತಿ ಕೌಸ್ತುಭ ಮಣಿ ಅವರು 2024ರ ಏಪ್ರಿಲ್ 26ರಂದು ಸಿದ್ಧಾಂತ್ ಸತೀಶ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

 ಖ್ಯಾತ ಕಿರುತೆರೆ ನಟಿ ಬಿಗ್‌ಬಾಸ್ ಸೀಸನ್ 10 ಖ್ಯಾತಿಯ ಸಿರಿ ಅವರು 2024ರ ಜೂನ್ 13ರಂದು ತಮ್ಮ ಬಹುಕಾಲದ ಸ್ನೇಹಿತನಾಗಿದ್ದ ನಟ, ಉದ್ಯಮಿ ಪ್ರಭಾಕರ್ ಅವರನ್ನು ಮದುವೆಯಾದರು.

ಗಿಣಿರಾಮ ಸೀರಿಯಲ್ ಖ್ಯಾತಿಯ ನಟಿ ನಯನಾ ನಾಗರಾಜ್ ಅವರು 2024ರ ಜೂನ್ 17ರಂದು ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಎಂಬುವವರ ಜೊತೆಗೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
 

ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಚಂದನಾ ರಾಘವೇಂದ್ರ ಅವರು 2024ರ ಆಗಸ್ಟ್‌ನಲ್ಲಿ ಸಂಕೇತ್ ಚಂಪ್ಲಿ ಎಂಬುವವರನ್ನು ಮದುವೆಯಾದರು.  ರಾಜು ಕನ್ನಡ ಮೀಡಿಯಂ, ಮೀರಾಳ ಕೃಷ್ಣ , ರಾಮಾಚಾರಿ 2.0, ಭಗೀರಥ ಮುಂತಾದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟಿ ಮಾನಸ ಮನೋಹರ್, 2024ರ  ನವೆಂಬರ್ 7ರಂದು ಫುಟ್‌ಬಾಲ್ ಪ್ಲೇಯರ್ ಪ್ರೀತಂ ಚಂದ್ರ ಅವರನ್ನು ಮದುವೆಯಾದರು.

ಬಿಗ್‌ಬಾಸ್‌ ಕನ್ನಡ ಸೀಸನ್ 8ರ ಗೆದ್ದಿರುವ ಹಾಸ್ಯನಟ ಮಂಜು ಪಾವಗಡ 2024ರ  ನವೆಂಬರ್ 13ರಂದು ನಂದಿನಿ ಎಂಬುವವರನ್ನು ಹುಟ್ಟೂರಾದ ಪಾವಗಡದಲ್ಲಿ ಮದುವೆಯಾದರು.

 ಖ್ಯಾತ ಕಿರುತೆರೆ ನಟಿ ಬಿಗ್‌ಬಾಸ್ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ  2024ರ ನವೆಂಬರ್ 28ರಂದು ಪ್ರತ್ಯಕ್ಷ್ ಎಂಬುವವರನ್ನು ಮದುವೆಯಾದರು. ಪ್ರತ್ಯಕ್ಷ್ ಕನ್ನಡ ಚಿತ್ರರಂಗದ ದಿವಂಗತ ನಟ ಉದಯ್ ಹುತ್ತಿನಗದ್ದೆ ಹಾಗೂ ಹಿರಿಯ ನಟಿ ಲಲಿತಾಂಜಲಿ ಅವರ ಪುತ್ರ.

ಗೀತಾ ಸೀರಿಯಲ್‌ನ ನಾಯಕ ನಟ ಧನುಷ್‌ ಗೌಡ ಮತ್ತು ಸಂಜನಾ ಅವರ ವಿವಾಹವು ಏಪ್ರಿಲ್ 26 ರಂದು ನಡೆಯಿತು. ಪ್ರಸ್ತುತ ನೂರು ಜನ್ಮಕೂ ಸೀರಿಯಲ್‌ ನಲ್ಲಿ ನಟಿಸುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್​ ನಟಿ ಲಾವಣ್ಯ ಹಿರೇಮಠ ಅವರು ತಮ್ಮ ಬಹುಕಾಲದ ಗೆಳೆಯ ಅಕ್ಷಯ್ ಆಚಾರ್ಯ ಅವರನ್ನು ನವೆಂಬರ್ 11ರಂದು ಮದುವೆಯಾದರು.

ಒಂದು ಶಿಕಾರಿಯ ಕಥೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಿರುತೆರೆ ನಟಿ ಸಿರಿ ಪ್ರಹ್ಲಾದ್‌  ನ.17, 2017ರಲ್ಲಿ ಪ್ರಸಾರವಾದ ಯುಗಳಗೀತೆ ನಟ ಮಧುಸೂದನ್‌ ಎಂಬವರನ್ನು ವಿವಾಹವಾದರು. 

ಕಿರುತೆರೆ ನಟಿ  ಲಕ್ಷ್ಮೀಶ್ರೀ ಭಾಗವತರ್‌ ತಿರುಪತಿಯಲ್ಲಿ ಡಿಸೆಂಬರ್ ಎರಡನೇ ವಾರದಲ್ಲಿ ವಿವಾಹವಾದರು. ‘ಇವಳು ಸುಜಾತಾ’, ‘ಬೃಂದಾವನ’ ಸೀರಿಯಲ್‌ಗಳಲ್ಲಿ ನಟಿ ಲಕ್ಷ್ಮೀಶ್ರೀ ಭಾಗವತರ್‌ ಅಭಿನಯಿಸಿದ್ದರು.

Latest Videos

click me!