ಬೈಕ್ ಏರಿ ನಿಂತ ಗೀತಾ ಸುಂದರಿ ಭವ್ಯ ಗೌಡ: ಬುಲೆಟ್ ರಾಣಿ ಎಂದ ಜನ!

First Published | Dec 23, 2023, 6:04 PM IST

ಗೀತಾ ಸೀರಿಯಲ್ ನಟಿ ಭವ್ಯ ಗೌಡ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಬೈಕ್ ಏರಿ ನಿಂತು ಪೋಸ್ ನೀಡಿರುವ ಭವ್ಯಾ ಗೌಡರನ್ನು ನೋಡಿದ ಅಭಿಮಾನಿಗಳು ಬುಲೆಟ್ ರಾಣಿ ಎಂದಿದ್ದಾರೆ. 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ನ ನಾಯಕಿ ಭವ್ಯ ಗೌಡ ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ ಅನ್ನೋದು ಗೊತ್ತೇ ಇದೆ. ದಿನಕ್ಕೊಂಡು ಫೋಟೋ ಶೂಟ್ ಮಾಡ್ತಾ ಶೇರ್ ಮಾಡುತ್ತಿರುತ್ತಾರೆ ಬೆಡಗಿ. 

ಕಳೆದೆರಡು ದಿನಗಳಿಂದ ಸಖತ್ ವೈಬ್ರೆಂಟ್ ಮತ್ತು ಬೋಲ್ಡ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಭವ್ಯ (Bhavya Gowda) ಬಿಂದಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Tap to resize

ನೀಲಿ ಬಣ್ಣದ ಗೌನ್ ತೊಟ್ಟು ರಾಯಲ್ ಎನ್ ಫೀಲ್ಡ್ ಬೈಕ್ ಮೇಲೇರಿ ನಿಂತ ಭವ್ಯ ಗೌಡ ಬಿಂದಾಸ್ ಲುಕ್ ನೋಡಿ ಜನರು ವಾವ್ ಎನ್ನುತ್ತಿದ್ದಾರೆ. ತುಂಬಾನೆ ಸುಂದರವಾಗಿ ಮತ್ತು ಬೋಲ್ಡ್ ಆಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಅಷ್ಟೇ ಅಲ್ಲದೇ ಬೈಕ್ ಏರಿ ನಿಂತ ಸುಂದರಿಯನ್ನು ನೋಡಿ ಬೈಕ್ ರಾಣಿ, ಬುಲ್ಲೆಟ್ ರಾಣಿ (Bullet Rani) , ರೌಡಿ ಬೇಬಿ, ಪವರ್ ಫುಲ್ ಪರ್ಸನಾಲಿಟಿ ಎಂದೆಲ್ಲಾ ಹಾಡಿ ಹೊಗಳಿದ್ದಾರೆ. ಜೊತೆಗೆ ನೀವು ನ್ಯಾಚುರಲ್ ಆಗಿಯೂ ತುಂಬಾನೆ ಸುಂದರವಾಗಿದ್ದೀರಿ ಎಂದು ಹೇಳುತ್ತಿದ್ದಾರೆ. 

ಕಲರ್ಸ್ ಕನ್ನಡದಲ್ಲಿ ರಾಮ್ ಜೀ ಅವರು ನಿರ್ದೇಶಿಸುತ್ತಿರುವ ಗೀತಾ ಸೀರಿಯಲ್ (serial) ಕಳೆದ ನಾಲ್ಕು ವರ್ಷಗಳಿಂದ ಭರ್ಜರಿ ಯಶಸ್ಸು ಕಾಣುತ್ತಾ ಮುನ್ನುಗ್ಗುತ್ತಿದೆ. ಜನರಿಂಗತೂ ಗೀತಾ ಮತ್ತು ವಿಜಯ್ ಕೆಮೆಸ್ಟ್ರಿ ತುಂಬಾನೆ ಇಷ್ಟವಾಗಿತ್ತು. 

ಇತ್ತೀಚೆಗಷ್ಟೇ ಗೀತಾ ಸೀರಿಯಲ್ ನಾಯಕ ಧನುಷ್ ಗೌಡ (Dhanush Gowda)ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದನ್ನು ನೋಡಿದ್ದ ಜನರು ಭವ್ಯ ಗೌಡ ಮತ್ತು ಧನುಷ್ ಜೊತೆಯಾಗಬೇಕಿತ್ತು, ಅವರಿಬ್ಬರು ಮದುವೆಯಾಗಬೇಕಿತ್ತು ಎಂದು ಬೇಸರ ಸಹ ವ್ಯಕ್ತಪಡಿಸಿದ್ದರು. 

ಗೀತಾ ಸೀರಿಯಲ್ ನಲ್ಲಿ ಭವ್ಯ ಅಭಿನಯಕ್ಕೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ರಿಯಲ್ ಲೈಫಲ್ಲಿ ಸಿಕ್ಕಾಪಟ್ಟೆ ಮಾಡರ್ನ್ ಆಗಿರುವ ಭವ್ಯ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ, ರೀಲ್ಸ್, ವಿಡೀಯೋ ಮೂಲಕವೇ ಜನರೊಂದಿಗೆ ಕನೆಕ್ಟ್ ಆಗುತ್ತಿರುತ್ತಾರೆ. 

Latest Videos

click me!