ಹೆಣ್ಣು ಮಗುವಿಗೆ ತಾಯಿಯಾದ ಕನ್ನಡ ಕಿರುತೆರೆ ನಟಿಮಣಿಯರು

Published : Dec 22, 2023, 06:08 PM IST

ಕನ್ನಡ ಕಿರುತೆರೆಯ ಹಲವು ತಾರೆಯರು ಈ ವರ್ಷ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಅವರಲ್ಲಿ ಯಾರ್ಯಾರು ಹೆಣ್ಣು ಮಗುವಿನ ಆಗಮದ ಸಂಭ್ರಮದಲ್ಲಿದ್ದಾರೆ ನೋಡೋಣ.   

PREV
19
ಹೆಣ್ಣು ಮಗುವಿಗೆ ತಾಯಿಯಾದ ಕನ್ನಡ ಕಿರುತೆರೆ ನಟಿಮಣಿಯರು

ತಾಯಿಯಾಗುವುದೇ ಪ್ರತಿಯೊಬ್ಬ ಹೆಣ್ಣಿನ ಜೀವನದ ಒಂದು ಆನಂದದ ಕ್ಷಣದಲ್ಲಿ ಒಂದಾಗಿದೆ. ಆ ಕ್ಷಣವನ್ನು ಸಂಭ್ರಮಿಸುವುದೇ ತಾಯಿಯಾದವಳಿಗೆ ಹೆಮ್ಮೆಯ ಕ್ಷಣವಾಗಿರುತ್ತೆ. ಈ ವರ್ಷ ಕನ್ನಡ ಕಿರುತೆರೆಯ ಹಲವು ತಾರೆಯರು ತಾಯಿಯಾದ ಸಂಭ್ರಮದಲ್ಲಿದ್ದಾರೆ. 
 

29

ಕನ್ನಡ ಕಿರುತೆರೆಯಲ್ಲಿ (kannada small screen actresses) ಮಿಂಚಿದ ಹಲವು ನಟಿಯರು ಈ ವರ್ಷ ತಾಯಿಯಾಗಿ ಭಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿನ ತಾಯಿಯಾಗಿ ಸಂಭ್ರಮಿಸಿದ ಕನ್ನಡ ಕಿರುತೆರೆಯ ನಟಿಯರು ಯಾರ್ಯಾರು ನೋಡೋಣ. 
 

39

ತೇಜಸ್ವಿನಿ ಪ್ರಕಾಶ್ (Tejaswini Prakash)
ಸವಿ ಸವಿ ನೆನಪು, ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ಮಿಂಚಿದ ನಟಿ ತೇಜಸ್ವಿನಿ ಪ್ರಕಾಶ್ ಹೆಣ್ಣು ಮಗುವಿಗೆ ಇತ್ತೀಚೆಗೆ ಜನ್ಮ ನೀಡಿದರು. 

49

ನಯನ (Nayana)
ಕಾಮಿಡಿ ಕಿಲಾಡಿಗಳು ಮತ್ತು ಹಲವು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಮಿಂಚಿದ ನಯನ ಕೂಡ ಈ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಮುದ್ದು ಲಕ್ಷ್ಮೀ ಬಂದಿರುವುದಾಗಿ ಅವರು ಹೇಳಿಕೊಂಡಿದ್ದರು. 

59

ಆಶಿತಾ ಚಂದ್ರಪ್ಪ (Ashita Chandrappa)
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಆಶಿತಾ ಚಂದ್ರಪ್ಪ ಅವರು ಸಹ ಇತ್ತೀಚೆಗೆ ಹೆಣ್ಣು ಮಗುವಿನ ತಾಯಿಯಾದ ಸಂಭ್ರಮದಲ್ಲಿದ್ದಾರೆ. 

69

ಅರ್ಚನಾ ವಿಘ್ನೇಶ್ (Archana lakshmi Narasimhaswamy)
ಮನೆ ದೇವ್ರು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ಅವರು ಸಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಇವರು ಮಗು ಜನಿಸೋಕು ಮುನ್ನವೇ ಜೆಂಡರ್ ರಿವೀಲ್ ಮಾಡಿ ಸುದ್ದಿಯಾಗಿದ್ದರು. 

79

ಮಾನಸಿ ಜೋಶಿ (Manasa joshi)
ಇನ್ನು ಭರತನಾಟ್ಯಾ ಕಲಾವಿದೆ ಮತ್ತು ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಮಾನಸಿ ಜೋಶಿಯವರು ಸಹ ಹೆಣ್ಣು ಮಗುವಿನ ತಾಯಿಯಾಗಿದ್ದು, ಇವರಿಗೆ ಕಳೆದ ವರ್ಷ ಮಗು ಜನಿಸಿತ್ತು. 

89

ಅಮೃತಾ ರಾಮಮೂರ್ತಿ (Amrutha Rammoorthy)
ಕೆಂಡ ಸಂಪಿಗೆ ಸೀರಿಯಲ್ ನಲ್ಲಿ ವಿಲನ್ ಸಾಧನ ಆಗಿ ಮಿಂಚುತ್ತಿರುವ ಅಮೃತಾ ರಾಮಮೂರ್ತಿ ಸಹ ಹೆಣ್ಣು ಮಗುವಿನ ತಾಯಿ, ಇವರ ಮಗುವಿಗೆ ಈಗಾಗಲೇ ಎರಡು ವರ್ಷ ಕಳೆದಿದೆ. 

99

ಗೌತಮಿ ಗೌಡ (Gowthami Gowda)
ಭಾಗ್ಯ ಲಕ್ಷ್ಮೀ ಸೀರಿಯಲ್ ನಲ್ಲಿ ಶ್ರೇಷ್ಠಾ ಪಾತ್ರದ ಮೂಲಕ ಅದ್ಭುತ ಅಭಿನಯ ನೀಡಿದ ನಟಿ ಗೌತಮಿ ಗೌಡ ಸಹ ಎರಡು ತಿಂಗಳ ಹಿಂದೆ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. 

Read more Photos on
click me!

Recommended Stories