ಕಿರುತೆರೆ ನಟ ಮನೋಜ್ ಕುಮಾರ್, ನಟಿ ಅನುಷಾ ರಾಜ್ ಜೊತೆ ರೀಲ್ಸ್ ಮಾಡುವಾಗ ಅವರ ಲುಂಗಿ ಜಾರಿದೆ. ಈ 'Behind the scenes' ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಮನೋಜ್ 'ಭಾರ್ಗವಿ ಎಲ್‌ಎಲ್‌ಬಿ' ಸೀರಿಯಲ್‌ನ ನಾಯಕನಾಗಿಯೂ ಪ್ರಸಿದ್ಧರಾಗಿದ್ದಾರೆ.
ಕಿರುತೆರೆ ನಟ ಮನೋಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಡ್ಯಾನ್ಸ್ ಮಾಡುತ್ತಿರುವಾಗಲೇ ಅವರ ಲುಂಗಿ ಕಳಚಿದೆ. ಲುಂಗಿ ಕಳಚುತ್ತಿದ್ದಂತೆ ಮನೋಜ್ ಕುಮಾರ್ ಡ್ಯಾನ್ಸ್ ಮಾಡೋದನ್ನು ನಿಲ್ಲಿಸಿದ್ದಾರೆ. ಈ ರೀಲ್ಸ್ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
25
ಜಾರಿದ ಲುಂಗಿ
ನಟ ಮನೋಜ್ ಕುಮಾರ್ ಕನ್ನಡ ಮತ್ತು ಬೇರೆ ಭಾಷೆಯ ಸೀರಿಯಲ್‌ಗಳಲ್ಲಿಯೂ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆ ಚೆಂದದ ರೀಲ್ಸ್ ಮಾಡುತ್ತಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ನಟಿ ಅನುಷಾ ರಾಜ್ ಜೊತೆ ಹಾಡಿಗೆ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಮನೋಜ್ ಧರಿಸಿದ್ದ ಲುಂಗಿ ಸಡಿಲಗೊಂಡು ಜಾರಿದೆ. ಕೂಡಲೇ ಅಲರ್ಟ್ ಆಗ ಮನೋಜ್ ಜಾರುತ್ತಿದ್ದ ಲುಂಗಿಯನ್ನು ಹಿಡಿದುಕೊಂಡಿದ್ದಾರೆ.
35
ವಿಡಿಯೋ ವೈರಲ್
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ ಇಲ್ಲಿವರೆಗೆ 9 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. Behind the scenes ಶೀರ್ಷಿಕೆಯೊಂದಿಗೆ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ಮನೋಜ್ ಎಂತ ಮಾರ್ರೆ ನಿಮ್ಮ ಅವಸ್ಥೆ? ನೀವು ಧರಿಸಿದ್ದು ಏನು? Loosing concentration ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಭಾರ್ಗವಿ ಎಲ್‌ಎಲ್‌ಬಿ' ಸೀರಿಯಲ್‌ನಲ್ಲಿ ಅರ್ಜುನ್‌ನನಾಗಿ ನಟಿಸುತ್ತಿದ್ದಾರೆ. ಸೀರಿಯಲ್‌ನಲ್ಲಿ ಮನೋಜ್ ಅವರಿಗೆ ಜೋಡಿಯಾಗಿ ನಟಿ ರಾಧಾ ಭಗವತಿ ನಟಿಸುತ್ತಿದ್ದಾರೆ. ತೆಲುಗಿನ ಜನಪ್ರಿಯ ಧಾರಾವಾಹಿಗಳಾದ ಕಾರ್ತಿಕ ದೀಪಂ ಮತ್ತು ಮೌನ ಪೋರಾಟಂಗಳಲ್ಲಿಯೂ ಮನೋಜ್ ಕುಮಾರ್ ನಟಿಸಿದ್ದಾರೆ.
ಈ ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಮಲ್ಲಮ್ಮ ಅವರನ್ನ ಸೋಶಿಯಲ್ ಮೀಡಿಯಾಗೆ ಪರಿಚಯಿಸಿದ್ದು ಇದೇ ಮನೋಜ್ ಕುಮಾರ್. ಮಲ್ಲಮ್ಮ ಟಾಕ್ಸ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್ ತೆರೆದು, ಅವರೊಂದಿಗೆ ಮಾತುಕತೆಯ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಮಲ್ಲಮ್ಮ ಅವರ ಯಶಸ್ಸು ಮತ್ತು ಜನಪ್ರಿಯತೆ ಹಿಂದೆ ಮನೋಜ್ ಕುಮಾರ್ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.