Bhagyalakshmi Serialನಿಂದ ಮಹಿಳೆಯರಿಗೆ ಬಿಗ್​ ಆಫರ್​: ಎಲ್ಲರಿಗೂ ಭಾಗ್ಯ ಆಗುವ ಅವಕಾಶ

Published : Jun 01, 2026, 06:07 PM IST

 'ಭಾಗ್ಯಲಕ್ಷ್ಮಿ'  ಸೀರಿಯಲ್ ಅಂತ್ಯದ ಪ್ರಯುಕ್ತ ವೀಕ್ಷಕರಿಗೆ ವಿಶೇಷ ಅವಕಾಶವೊಂದನ್ನು ನೀಡಲಾಗಿದೆ. ನಟಿ ಸುಷ್ಮಾ ಕೆ. ರಾವ್ ಅವರು, ಭಾಗ್ಯಳಂತೆ ಉಡುಗೆ ಧರಿಸಿ ಫೋಟೋ ಟ್ಯಾಗ್ ಮಾಡುವ ಮೂಲಕ ಈ ಬಿಗ್ ಆಫರ್‌ನಲ್ಲಿ ಭಾಗವಹಿಸುವಂತೆ ಅಭಿಮಾನಿಗಳನ್ನು ಕೋರಿದ್ದಾರೆ.

PREV
16
ಅಂತಿಮ ಸಂಚಿಕೆಗಳು

Bhagyalakshmi Serial (ಭಾಗ್ಯಲಕ್ಷ್ಮಿ ಸೀರಿಯಲ್​) ಇನ್ನೇನು ಮುಗಿಯುವ ಹಂತದಲ್ಲಿದೆ. ಇದೇ ಜೂನ್​ 7ರಂದು ಅಂತಿಮ ಸಂಚಿಕೆ ಪ್ರಸಾರ ಆಗಲಿದೆ. ಸೀರಿಯಲ್​ನಲ್ಲಿ ಇನ್ನೂ ಆಗಬೇಕಾಗಿದ್ದು ಹಲವು ದೃಶ್ಯಗಳಿದ್ದು, ಒಟ್ಟಿನಲ್ಲಿ ಒಂದು ವಾರದಲ್ಲಿ ಎಲ್ಲವುಗಳಿಗೆ ತೆರೆ ಬೀಳಲಿದೆ.

26
ಭಾಗ್ಯಳದ್ದು ಬರೀ ಗೋಳು

ಅಷ್ಟಕ್ಕೂ ಭಾಗ್ಯಲಕ್ಷ್ಮಿಯ ಆರಂಭದಿಂದಲೂ ಭಾಗ್ಯಳ ಗೋಳೇ ನೋಡಿಕೊಂಡು ಬಂದವರಿಗೆ ಅಯ್ಯೋ ಭಾಗ್ಯಳಿಗೆ ಭಾಗ್ಯ ಎನ್ನೋದೇ ಇಲ್ವಾ ಎನ್ನುತ್ತಿದ್ದರು. ಈಗ ಆದಿಯನ್ನು ಮದುವೆಯಾದ ಮೇಲೆ ಭಾಗ್ಯಳ ಲಕ್​ ಬದಲಾಗಿದ್ದರೂ ಅಲ್ಲಿಯೂ ಅವಳಿಗೆ ಗೋಳು ನಿಂತಿಲ್ಲ.

36
ಭಾಗ್ಯಳ ನೋವು

ಒಂಟಿ ಹೆಣ್ಣಾಗಿ ಭಾಗ್ಯ ಅನುಭವಿಸಿದ್ದು ಹಲವು. ಈಕೆಯನ್ನು ನೋಡಿ ಹಲವು ಮಹಿಳೆಯರು ತಮಗೆ ನೀವೇ ಸ್ಫೂರ್ತಿ ಎಂದಿದ್ದು ಉಂಟು.

46
ಮಹಿಳಾ ವೀಕ್ಷಕರು

ಅಷ್ಟಕ್ಕೂ ಸೀರಿಯಲ್​ಗಳು ಎಂದರೆ ಬಹುತೇಕ ಮಹಿಳಾ ವೀಕ್ಷಕರಿಗೆ ಇದು ಕೇವಲ ಸೀರಿಯಲ್​ ಆಗಿ ಉಳಿದಿಲ್ಲ. ಅದರಲ್ಲಿನ ಪ್ರತಿಯೊಂದನ್ನೂ ಅನುಭವಿಸುತ್ತಾ, ತಮ್ಮ ಜೀವನದ ಜೊತೆ ತಾಳೆ ಹಾಕಿ ನೋಡುತ್ತಾರೆ. ಆದ್ದರಿಂದ ಭಾಗ್ಯಳ ಜೀವನ ಕೂಡ ತಮ್ಮಂತೆಯೇ ಎಂದುಕೊಂಡವರು ಇದ್ದಾರೆ.

56
ಭಾಗ್ಯಲಕ್ಷ್ಮೀ ಸೀರಿಯಲ್​ ಬಿಗ್​ ಆಫರ್​

ಇಂಥವರಿಗಾಗಿಯೇ ಭಾಗ್ಯಲಕ್ಷ್ಮೀ ಸೀರಿಯಲ್​ ಬಿಗ್​ ಆಫರ್​ ನೀಡಿದೆ. ಭಾಗ್ಯಳ ರೀತಿಯಲ್ಲಿಯೇ ಡ್ರೆಸ್​ ಮಾಡಿಕೊಂಡು ಫೋಟೋ ಟ್ಯಾಗ್​ ಮಾಡುವಂತೆ ವಾಹಿನಿ ಕೋರಿದೆ. ನಿಮ್ಮ ಫೋಟೋ ಎಲ್ಲರಿಗೂ ಕಾಣಿಸಲಿದ್ದು, ಈ ಆಫರ್​ ಮಿಸ್​ ಮಾಡಿಕೊಳ್ಳಬೇಡಿ ಎಂದು ನಟಿ ಸುಷ್ಮಾ ಕೆ. ರಾವ್​ ಹೇಳಿದ್ದಾರೆ.

66
ಫ್ಯಾನ್ಸ್​ ಫಿದಾ

ಅಷ್ಟಕ್ಕೂ ಭಾಗ್ಯಳ ಹೇರ್​ಸ್ಟೈಲ್​ ಒಮ್ಮೆ ಬಹಳ ಟ್ರೆಂಡಿಂಗ್​ ಆಗಿತ್ತು. ಎರಡನೆಯ ಮದುವೆಯಾದ ಮೇಲೆ ಆಕೆಯ ರೂಪ ಬದಲಾದರೂ, ಉದ್ದನೆಯ ಕೂದಲಿಗೆ ಜಡೆ ಹಾಕಿ ಅದನ್ನು ಮುಂದಕ್ಕೆ ಇಟ್ಟು, ಕೈಯನ್ನು ಮಡಚಿ ಕೊಟ್ಟ ಸ್ಟೈಲ್​ಗೆ ಫ್ಯಾನ್ಸ್​ ಫಿದಾ ಆಗಿದ್ದು, ಅದನ್ನೇ ನೀವು ಮಾಡಬೇಕಿದೆ ಈಗ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories