ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಮತ್ತು ಟಿಆರ್‌ಪಿ ರೇಟಿಂಗ್‌ನಲ್ಲಿ ಸದಾ ಮುಂದಿರುವ ಧಾರಾವಾಹಿ ಎಂದರೆ ಅದು ಭಾಗ್ಯಲಕ್ಷ್ಮಿ. ವಿಭಿನ್ನ ಕಥೆಯ ಮೂಲಕ ಜನಮನಗೆದ್ದಿರುವ ಧಾರಾವಾಹಿಯ ಒಬ್ಬ ನಟಿ ಅಮೃತಾ ಗೌಡ.
ಯಾರೀ ಅಮೃತಾ ಗೌಡ (Amrutha Gowda) ಎಂದು ಕನ್ ಫ್ಯೂಸ್ ಆಗ್ಬೇಡಿ, ಯಾಕಂದ್ರೆ ಅಮೃತಾ ಅನ್ನೋದು ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಭಾಗ್ಯ ಮತ್ತು ತಾಂಡವ್ ಮಗಳು ತನ್ವಿಯಾಗಿ ನಟಿಸುತ್ತಿರುವ ಬಾಲ ನಟಿಯ ಹೆಸರು.
ಅಪ್ಪ ಅಂದರೆ ಹೀರೋ ಅಮ್ಮ ಎಂದರೆ ಅವಮಾನ ಎನ್ನುತ್ತಾ, ಸೊಕ್ಕಿನ ಹುಡುಗಿಯಾಗಿ ನಟಿಸುತ್ತಿರುವ ಅಮೃತಾ ನಿಜಕ್ಕೂ ಅದ್ಭುತ ಅಭಿನಯ ನೀಡುತ್ತಿದ್ದಾರೆ. ಇವರು ವಯಸ್ಸಿಗೂ ಮೀರಿದ ಅಭಿನಯ ಮಾಡ್ತಾ ಇದ್ದಾರೆ ಅಂದ್ರೆ ತಪ್ಪಾಗಲ್ಲ.
ತಾಂಡವ್ ಮತ್ತು ಭಾಗ್ಯಾರಿಗೆ ಇಬ್ಬರು ಮಕ್ಕಳು, ಒಬ್ಬಳು ತನ್ವಿ, ಮತ್ತೊಬ್ಬ ಮಗ ಗುಂಡಣ್ಣ. ಗುಂಡಣ್ಣನಿಗೆ ಅಮ್ಮ ಅಂದ್ರೆ ಎಲ್ಲಿಲ್ಲದ ಪ್ರೀತಿ. ಆದರೆ ತನ್ವಿಗೆ ಕೇವಲ 9ನೇ ಕ್ಲಾಸ್ ಕಲಿತಿರುವ, ಇಂಗ್ಲಿಷ್ ಮಾತನಾಡಲು ಸಹ ಬರದಿರುವ ಅಮ್ಮ ಅಂದ್ರೆ ಒಂದು ರೀತಿಯ ಅಸಹ್ಯ.
ಯಾವಾಗಲೂ ಅಮ್ಮನಿಗೆ ಎದುರಾಡುತ್ತಾ, ಅಮ್ಮನ ಬಗ್ಗೆ, ಅಮ್ಮನ ಉಡುಗೆ ತೊಡುಗೆ, ವಿದ್ಯಾಭ್ಯಾಸದ ಬಗ್ಗೆ ಅವಮಾನಿಸುತ್ತಾ, ಅಪ್ಪ ತಾಂಡವ್ ನೇ ತನ್ನ ಹೀರೋ ಎನ್ನುತ್ತಾ ಕೊಬ್ಬಿದ ಹುಡುಗಿಯಾಗಿ ಅಮೃತಾ ಚೆನ್ನಾಗಿಯೇ ನಟಿಸುತ್ತಿದ್ದಾರೆ.
ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ.
ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಲ್ಲದೇ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಾರೆ.