Bhagyalakshmi Serial: ಮದುವೆಗೆ ರೆಡಿಯಾದ ಭಾಗ್ಯ; ಕೊನೆಗೂ ಆ ದುಷ್ಟನ ಆಸೆ ಈಡೇರಿತಾ? ಪ್ರೀತಿ ಸತ್ತೋಯ್ತಾ?

Published : Apr 05, 2026, 09:07 AM IST

Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮದುವೆಯದ್ದೇ ಸಮಸ್ಯೆ ಆಗಿದೆ. ಮೊದಲು ಇಷ್ಟವಿಲ್ಲದೆ ತಾಂಡವ್‌ನನ್ನು ಮದುವೆಯಾಗಿ 16 ವರ್ಷ ನರಕ ಅನುಭವಿಸಿದ್ದ ಭಾಗ್ಯ, ಈಗ ಇಷ್ಟದಂತೆ ಮದುವೆ ಆಗಲು ರೆಡಿ. ಇದಕ್ಕೆ ಮಗಳೇ ಅಡ್ಡಿಯಾದಳು. ಈ ಬಗ್ಗೆ ಮಾಹಿತಿಯಿದೆ. 

PREV
16
ಮದುವೆ ಆಗೋದಿಲ್ಲ ಎಂದಿದ್ದ ಆದಿ

ತನ್ವಿ, ಆದಿ ಬಳಿ ತನ್ನ ತಾಯಿಯನ್ನು ಮದುವೆ ಆಗಬೇಡಿ, ಈ ಮದುವೆ ನಿಲ್ಲಿಸಿ ಎಂದು ಹೇಳಿದಳು. ಹೀಗಾಗಿ ಆದಿ ಕೂಡ ಮದುವೆ ಆಗೋದಿಲ್ಲ ಎಂದು ಹೇಳಿದನು. ಮೊದಲು ಭಾಗ್ಯಳನ್ನು ಪ್ರೀತಿ ಮಾಡ್ತಿದ್ದೀನಿ ಎಂದು ಹೇಳಿ, ಈಗ ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ. ಇದು ಉಳಿದವರಿಗೆ ಸಿಟ್ಟು ತರಿಸಿದೆ.

26
ಧರ್ಮರಾಜ್‌ ಆಸೆ ಏನು?

ಧರ್ಮರಾಜ್‌ ಕೂಡ ಅನಾರೋಗ್ಯ ಪೀಡಿತವಾಗಿದ್ದಾನೆ, ಮಗ ತಾಂಡವ್‌ ಬದಲಾಗಿದ್ದಾನೆ ಎಂದು ನಂಬಿದ್ದಾನೆ. ಭಾಗ್ಯ ಜೀವನ ಚೆನ್ನಾಗಿ ಇರಲಿ ಎಂದು ತಾಂಡವ್‌ ಜೊತೆ ಮರು ಮಾಂಗಲ್ಯ ಆಗು ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿಗೆ ಸೂಚಿಸಿದ್ದಾಳೆ.

36
ಮದುವೆ ಮಂಟಪ ರೆಡಿ ಇದೆ

ಈ ಬಾರಿ ಮಾತ್ರ ತನ್ನಿಷ್ಟದಂತೆ ಮದುವೆ ಆಗಬೇಕು ಎಂದು ಭಾಗ್ಯ ಫಿಕ್ಸ್‌ ಆಗಿದ್ದಾಳೆ. ಮದುವೆ ಮಂಟಪ ರೆಡಿ ಆಗಿದೆ, ತಾಂಡವ್‌ ಕೂಡ ರೆಡಿ ಆಗಿದ್ದಾನೆ, ಆದರೆ ಭಾಗ್ಯ ಯಾರನ್ನು ಮದುವೆ ಆಗ್ತಾಳೆ ಎಂದು ಕಾದು ನೋಡಬೇಕಿದೆ. ಇದೀಗ ಭಾರೀ ಕುತೂಹಲ ಮೂಡಿಸಿದೆ.

46
ತಾಯಿಯಾಗ್ತಿರೋ ಶ್ರೇಷ್ಠ

ಶ್ರೇಷ್ಠ ತಾಯಿಯಾಗುತ್ತಿದ್ದಾಳೆ, ಈ ವಿಷಯ ತಾಂಡವ್‌ಗೆ ಗೊತ್ತಿದೆ, ಆದರೆ ಇದನ್ನು ಅವಳು ಯಾರ ಮುಂದೆ ಕೂಡ, ಹೇಳದಂತೆ ಅವನು ತಡೆದಿದ್ದಾನೆ. ಈ ವಿಷಯ ಭಾಗ್ಯಗೆ ಗೊತ್ತಾದರೆ ಅವಳು ಈ ಮದುವೆ ಆಗೋದಿಲ್ಲ.

56
ಆದಿ-ಭಾಗ್ಯ ಮದುವೆ ಆಗತ್ತಾ?

ಆದಿ ಹಾಗೂ ಭಾಗ್ಯ ಮದುವೆ ಆಗುವ ಚಾನ್ಸ್‌ ಇದೆ. ಕೊನೇ ಕ್ಷಣದಲ್ಲಿ ತನ್ವಿ ತನ್ನ ಮನಸ್ಸು ಬದಲಾಯಿಸಿ, ತಾಯಿ-ಆದಿ ಜೊತೆಗೆ ಮದುವೆ ಮಾಡಿಸಲೂಬಹುದು. ಕೊನೇ ಕ್ಷಣದಲ್ಲಿ ತಾಂಡವ್‌ ಮುಖವಾಡವನ್ನು ಭಾಗ್ಯ ಬಿಚ್ಚಿಡಲೂಬಹುದು.

66
ಡಿವೋರ್ಸ್‌ಗೆ ಬೆಲೆಯೇ ಇಲ್ವಲ್ಲ..

ಆದಿ ಹಾಗೂ ಭಾಗ್ಯ ಮದುವೆಯಂತೂ ಆಗ್ತಿಲ್ಲ. ಆದರೆ ತಾಂಡವ್‌ ಹಾಗೂ ಶ್ರೇಷ್ಠ ಮದುವೆ ಆಗಿದ್ದಾರೆ. ಈಗ ತಾಂಡವ್‌ ಜೊತೆ ಭಾಗ್ಯ ಮದುವೆ ಆಗೋಕೆ ಶ್ರೇಷ್ಠಳಿಗೆ ಡಿವೋರ್ಸ್‌ ಕೊಡಬೇಕು ಅಲ್ವಾ? ಈಗ ಡಿವೋರ್ಸ್‌ ಸುದ್ದಿಯೇ ಇಲ್ಲ. ಒಟ್ಟಿನಲ್ಲಿ ಈಗ ಲಾಜಿಕ್‌ ಇಲ್ಲದ ಹಾಗೆ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories