ಮಿಡಲ್ ಕ್ಲಾಸ್ ಮನ ಗೆದ್ದ ಅಮೃತಧಾರೆಯ ಭೂಮಿಕಾ- ಗೌತಮ್ ಡೇಟಿಂಗ್ ಸೀನ್ಸ್

Published : Jul 06, 2024, 03:12 PM IST

ಮದುವೆಯಾದ ಬಳಿಕ ತನ್ನ ಮೊದಲ ಸಂಬಳ ಪಡೆದಿರುವ ಭೂಮಿಕಾ, ಇದೀಗ ತನ್ನ ಕೋಟ್ಯಾಧಿಪತಿ ಗಂಡನಿಗೆ ಮಿಡಲ್ ಕ್ಲಾಸ್ ಜೀವನ ಪರಿಚಯಿಸ್ತಿದ್ದಾರೆ. ಹೊರ ಹೋಗಿ ಪುಟ್ಟಕ್ಕ ಮಕ್ಕಳು ಸೀರಿಯಲ್‌ನ ಸಹನಾ ತಳ್ಳೋ ಗಾಡಿಯಲ್ಲಿ ದೋಸೆ ತಿಂದು, ಜೋಳ ಸವಿದಿದ್ದು ಸಾಮಾನ್ಯ ಮಧ್ಯಮ ವರ್ಗದವರ ಮನ ಗೆದ್ದಿದೆ.   

PREV
17
ಮಿಡಲ್ ಕ್ಲಾಸ್ ಮನ ಗೆದ್ದ ಅಮೃತಧಾರೆಯ ಭೂಮಿಕಾ- ಗೌತಮ್ ಡೇಟಿಂಗ್ ಸೀನ್ಸ್

ಅಮೃತಧಾರೆ (Amruthadhare) ಧಾರಾವಾಹಿ ಆರಂಭದಿಂದಲೂ ಇಂದಿನವರೆಗೂ ಜನರನ್ನು ತನ್ನ ಕಥೆಯ ಮೂಲಕ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಕಥೆ ಎಲ್ಲೂ ಬೋರ್ ಹೊಡೆಸದೇ ವೇಗವಾಗಿ ಮುಂದೆ ಹೋಗುವ ರೀತಿ ವೀಕ್ಷಕರಿಗೆ ಇಷ್ಟ. ಅಲ್ಲದೇ ಭೂಮಿಕಾ ಮತ್ತು ಗೌತಮ್ ದಿವಾನ್ ಜೋಡಿ ಧಾರಾವಾಹಿಯ ಪ್ರಮುಖ ಆಕರ್ಷಣೆ.

27

ಮಿಡಲ್ ಕ್ಲಾಸ್ ಹುಡುಗಿ ಭೂಮಿಕಾ ಮತ್ತು ಕೋಟ್ಯಾಧಿಪತಿ ಗೌತಮ್ ದಿವಾನ್ ಕಾಂಬಿನೇಶನ್, ಮನೆಯವರಿಗಾಗಿ ಇಷ್ಟವಿಲ್ಲದ ಮದುವೆ, ನಂತ್ರ ಸ್ನೇಹ (Friendship), ಪ್ರೀತಿ (Love), ಇವರಿಬ್ಬರ ಕೆಮೆಸ್ಟ್ರಿ (Chemistry), ಮನಸ್ಸು ಬಿಚ್ಚಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸೋ ಪ್ರಬುದ್ಧತೆ (Open Mind and Maturity Level), ಇಬ್ಬರ ನಡುವಿನ ಅಂಡರ್ ಸ್ಟಾಂಡಿಂಗ್, ಎಲ್ಲವೂ ಸೂಪರೋ ಸೂಪರ್. ಜನರಿಗೆ ಇಷ್ಟವಾಗೋದೆ ಇವರಿಬ್ಬರ ಪ್ರಬುದ್ಧ ಪ್ರೇಮ ಮತ್ತು ಇವರಿಬ್ಬರ ನಟನೆ. 
 

37

ಸದ್ಯ ಸೀರಿಯಲ್ ನಲ್ಲಿ ಭೂಮಿಕಾಗೆ ಮದುವೆಯ ಬಳಿಕ ಮೊದಲ ಬಾರಿಗೆ ಕೆಲಸದಿಂದ ಸಂಬಳ ನೀಡಿದ್ದು. ತನ್ನ ಮೊದಲ ಸಂಬಳವನ್ನ ಸಂತೋಷದಿಂದ ಗಂಡನ ಕೈಗಿಟ್ಟು ಖುಷಿಪಡೋ ಭೂಮಿಕಾ. ಅದ್ರಿಂದ 3000 ತೆಗೆದುಕೊಂಡು, ಗಂಡನಿಗೆ ಪಾರ್ಟಿ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಗೌತಮ್ ದಿವಾನ್ ಗೆ ಮಿಡಲ್ ಕ್ಲಾಸ್ ಲೈಫ್ ಹೇಗಿದೆ ಅನ್ನೋದನ್ನ ತೋರಿಸ್ತಿದ್ದಾರೆ. 
 

47

ಮೊದಲಿಗೆ ಕಾರು ಬಿಟ್ಟು, ಆಟೋ ರಿಕ್ಷಾದಲ್ಲಿ ಕರೆದು ಕೊಂಡು ಹೋಗುವ ಮೂಲಕ ಕಡಿಮೆ ಬಜೆಟ್ ನಲ್ಲಿ ಮಿಡಲ್ ಕ್ಲಾಸ್ ಲೈಫ್ ಆರಂಭವಾಗೋದು ಹೇಗೆ ಅನ್ನೋದನ್ನ ತೋರಿಸಿದ್ರು. ಬಳಿಕ ತಾನು ಕಲಿತ ಶಾಲೆಗೆ ಕರೆದುಕೊಂಡು ಹೋದ ಭೂಮಿ, ಅಲ್ಲಿ ತನ್ನ ಕ್ಲಾಸ್, ತಾನು ಕುಳಿತ ಬೆಂಚು ಮತ್ತು ತಾನು ಕಂಡ ಕನಸು ನನಸಾಗಿಸಿದ ಕಥೆಯನ್ನು ಸಹ ಗೌತಮ್ ಗೆ ಹೇಳ್ತಾರೆ ಭೂಮಿಕಾ. 
 

57

ಬಳಿಕ ಭೂಮಿ ತನ್ನ ಗಂಡನನ್ನು ಸಾಮಾನ್ಯ ಬಟ್ಟೆ ಅಂಗಡಿಗೂ ಕರೆದುಕೊಂಡು ಹೋಗಿ ಅಲ್ಲಿಯೂ ಬಾರ್ಗೈನ್ ಮಾಡಿ ಗೌತಮ್ ಗೆ ಶರ್ಟ್ ತೆಗೆಸಿಕೊಡ್ತಾರೆಳೆ. ಇಬ್ಬರು ಜೊತೆಯಾಗಿ ಸಿನಿಮಾಗೂ ಹೋಗಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡ್ಕೊಂಡು ಬರ್ತಾರೆ. ಲೈಫ್ ಅನ್ನೋ ಬ್ಯಾಲೆನ್ಸ್ ಶೀಟಲ್ಲಿ ಕೊನೆಗೆ ಪ್ರಾಫಿಟ್ ಅಂತ ಉಳಿಯೋದು ಪ್ರೀತಿ ಒಂದೇ ಅನ್ನುತ್ತಾ ಇಮೋಶನಲ್ ಆಗ್ತಾರೆ ಗೌತಮ್. ಬಳಿಕ ಇಬ್ಬರು ಜೊತೆಯಾಗಿ ಬೀದಿ ಬದಿ ಜೋಳ ತಿನ್ನುತ್ತಾ, ದೋಸೆ ಚಟ್ನಿ ತಿನ್ನುತ್ತಾ ಮಿಡಲ್ ಕ್ಲಾಸ್  ಜನ ಹೇಗೆಲ್ಲಾ ಲೈಫ್ ಸ್ಪೆಂಡ್ ಮಾಡ್ತಾರೋ ಅದನ್ನೆಲ್ಲಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ ಈ ಜೋಡಿ. 
 

67

ಇದನ್ನ ನೋಡಿ ವೀಕ್ಷಕರು ಫುಲ್ ಖುಷಿಯಾಗಿದ್ದು,ದಯವಿಟ್ಟು ನಿರ್ಮಾಪಕರ ಹತ್ರ ಒಂದನ್ನ ಕೇಳ್ಕೊತಾ ಇದೀನಿ, ಧಾರಾವಾಹಿ ತುಂಬಾ ಚೆನ್ನಾಗಿ ಬರುತ್ತಿದೆ. ಇದೇ ತರ ಮುಂದುವರಿಸಿ ಯಾವುದೇ ತರ ಚೇಂಜಸ್ ಮಾಡಕ್ಕೆ ಹೋಗ್ಬೇಡಿ ಎಂದಿದ್ದಾರೆ, ಅಲ್ಲದೆ ಮಿಡಲ್ ಕ್ಲಾಸ್ ಜೀವನ, ಪ್ರೀತಿ ಹೇಗಿರುತ್ತೆ ಅನ್ನೋದನ್ನ ಸುಂದರವಾಗಿ ಕಟ್ಟಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಅಂತಾನೂ ಹೇಳಿದ್ದಾರೆ. ಮಿಡಲ್ ಕ್ಲಾಸ್ ಲವ್ ಸ್ಟೋರಿ ತುಂಬಾನೆ ಸುಂದರ ಅನ್ನೋದನ್ನು ಹೇಳಿತ್ತಾರೆ. 
 

77

ಮಿಡಲ್ ಕ್ಲಾಸ್ ಹೃದಯಗಳ ಎಪಿಸೋಡ್ ಚೆನ್ನಾಗಿ ಮೂಡಿ ಬಂದಿದೆ, ತುಂಬಾ ಚನ್ನಾಗಿದೇ ಎಪಿಸೋಡ್ ಮಿಡ್ಲ್ ಕ್ಲಾಸ್ ಜನರ ಬದುಕಿನ ಅಧ್ಯಯಗಳು ನೋಡೋಕೆ ಚೆನ್ನಾಗಿದೆ. ಇನ್ನು ಭೂಮಿಕಾ -ಗೌತಮ್  ಜೋಡಿಯನ್ನು ಮೆಚ್ಚಿಕೊಂಡ ವೀಕ್ಷಕರು ಆರ್ಥ ಮಾಡಿಕೊಳ್ಳೋರು ಸಿಗ್ಬೇಕು ಇಲ್ಲ ಅಂದ್ರೆ ಈ ತರ ಆರ್ಥಮಾಡ್ಸರೋ ಸಿಗ್ಬೇಕು, ಆಗ ನಮ್ಮ ಜೀವನ ಸುಂದರವಾಗಿ, ಖುಷಿಯಾಗಿ ಇರುತ್ತೆ.  ಇವರಂಥ ಜೋಡಿ ಎಲ್ಲೂ ಇಲ್ಲ ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories