ಬ್ಲ್ಯಾಕ್ ಡ್ರೆಸ್ಸಲ್ಲಿ ಬೋಲ್ಡ್ ಆದ ಭೂಮಿ ಶೆಟ್ಟಿ; 'ಹಾಟ್ ಚಾಕೋಲೇಟ್' ಅಂತಿದಾರೆ ಫಾಲೋವರ್ಸ್

First Published | Jul 6, 2024, 2:12 PM IST

ಕಿರುತೆರೆಯ 'ಕಿನ್ನರಿ' ಭೂಮಿ ಶೆಟ್ಟಿ ದಿನದಿಂದ ದಿನಕ್ಕೆ ಬೋಲ್ಡ್‌ನೆಸ್ಸನ್ನೂ, ಹಾಟ್ನೆಸ್ಸನ್ನೂ ಹೆಚ್ಚಿಸಿಕೊಳ್ತಾ ಇದಾರೆ. ನಟಿಯ ಹೊಸ ಫೋಟೋಶೂಟ್‌ಗೆ ಜನ 'ಹಾಟ್ ಚಾಕೋಲೇಟ್' ಎಂದು ಹಾಡಿ ಹೊಗಳುತ್ತಿದ್ದಾರೆ. 

ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿ ಸಖತ್ ಬಿಸಿಯಾಗುತ್ತಿರೋದು ಗೊತ್ತೇ ಇದೆ. ಆದರೆ, ಈ ಭೂಮಿ ಮಾತ್ರ ತಮ್ಮ ಹಾಟ್ನೆಸ್‌ನಿಂದಲೇ ನೋಡುಗರ ತಾಪಮಾನ ಏರಿಸ್ತಿದಾರೆ. 

ಕಿರುತೆರೆಯ 'ಕಿನ್ನರಿ'ಯಾಗಿ ಬಂದು ಬಿಗ್ ಬಾಸ್‌ನಲ್ಲಿ ಜನಮನ ಗೆದ್ದ ಭೂಮಿ ಶೆಟ್ಟಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. 

Tap to resize

ಕಪ್ಪು ಬಣ್ಣದ ಆಫ್ ಶೋಲ್ಡರ್ ಟಾಪ್, ಸ್ಲಿಟ್ ಸ್ಕರ್ಟ್ ಧರಿಸಿ, ಕೆಂಪು ಶೂಸ್ ಏರಿಸಿಕೊಂಡು, ಮೊಣಕಾಲುದ್ದದ ಜೆಡೆ, ಎದೆ ಮೇಲೊಂದು ಹಚ್ಚೆ ಪ್ರದರ್ಶಿಸುತ್ತಾ ನಟಿ ಸೋಷ್ಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. 

ಕೆಂಪು ಬಣ್ಣದ ಹಿನ್ನೆಲೆಯಲ್ಲಿ ತೆಗೆಸಿಕೊಂಡ ಪೋಟೋಗಳನ್ನು ಶೇರ್ ಮಾಡಿಕೊಂಡಿರುವ ಭೂಮಿ, 'ಕೆಂಪು ಕಪ್ಪನ್ನು ಭೇಟಿಯಾದಾಗ ಅಲ್ಲೊಂದು ಮ್ಯಾಜಿಕ್ ಸಂಭವಿಸುತ್ತದೆ' ಎಂದು ಕ್ಯಾಪ್ಶನ್ ನೀಡಿದ್ದಾರೆ. 

ಈ ಹಿಂದೆ ಬ್ರೈಡ್ಸ್ ಹೇರ್‌ಸ್ಟೈಲ್ ಮಾಡಿಕೊಂಡು ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು ಭೂಮಿ. ಈಗ ಜೆಡೆಯಲ್ಲೂ ಬೋಲ್ಡ್ ಆಗಿ ಕಾಣ್ಬಹುದು ಅಂತ ತೋರಿಸ್ತಿದಾರೆ. 

ಭೂಮಿಯ ಈ ಹೊಸ ಫೋಟೋಶೂಟ್‌ಗೆ ಭಾರೀ ಪ್ರತಿಕ್ರಿಯೆಗಳು ಬಂದಿದ್ದು ಹಲವರು ಆಕೆಯನ್ನು 'ಹಾಟ್ ಚಾಕೋಲೇಟ್', 'ಬ್ಯೂಟಿ ಇನ್ ಬ್ಲ್ಯಾಕ್' ಎನ್ನುತ್ತಿದ್ದಾರೆ. 

ಕನ್ನಡದ ನಿರ್ದೇಶಕರು, ನಿರ್ಮಾಪಕರಿಗೆ ಇಂಥ ಇಲ್ಲಿಯ ಸೊಗಡಿನ ಸುಂದರಿಯರು ಯಾಕೆ ಹಿಡಿಸುವುದಿಲ್ಲವೋ ಗೊತ್ತಿಲ್ಲ ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. 

Latest Videos

click me!