Must Watch Kannada Short Films: ಬೆಸ್ಟ್ ಕಂಟೆಂಟ್ ಇರೋ ಕನ್ನಡ ಸಿನಿಮಾ ಹುಡುಕ್ತಿದ್ರೆ ಈ 5 ಶಾರ್ಟ್ ಫಿಲಂ ಮಿಸ್ ಮಾಡ್ದೇ ನೋಡಿ

Published : Jun 07, 2025, 03:39 PM IST

ಕನ್ನಡದಲ್ಲಿ ಸಿನಿಮಾ ಚೆನ್ನಾಗಿ ಮಾಡೋದೇ ಇಲ್ಲಪ್ಪ ಅಂತ ಹೇಳೋರು ಈ 5 ಶಾರ್ಟ್ ಫಿಲಂ ನೋಡ್ಲೇಬೇಕು. ನೀವು ಇಷ್ಟ ಪಡದೇ ಇದ್ರೆ ನೋಡಿ…

PREV
16

ಕನ್ನಡದಲ್ಲಿ ಅದೆಷ್ಟೋ ಶಾರ್ಟ್ ಫಿಲಂಗಳು (Kannada Short Films) ಬಂದು ಹೋಗುತ್ತೆ, ಅದು ನಮಗೆ ಗೊತ್ತೆ ಆಗೋದಿಲ್ಲ. ಕೆಲವರು ಕನ್ನಡದಲ್ಲಿ ಕಂಟೆಂಟ್ ಇರುವ ಸಿನಿಮಾನೆ ಇಲ್ಲ, ಶಾರ್ಟ್ ಫಿಲಂಗಳು ಚೆನ್ನಾಗಿಲ್ಲ ಅಂತಾರೆ. ನೀವು ಅವರಲ್ಲಿ ಒಬ್ಬರಾಗಿದ್ರೆ, ನೀವು ಮಿಸ್ ಮಾಡದೇ ಈ 5 ಶಾರ್ಟ್ ಫಿಲಂಗಳನ್ನು ನೋಡಬೇಕು.

26

ಸಮ್ಮರ್ ಲವ್ (Summer Love)

ಮಧು ಕಳಲೆ ಕಥೆ ಬರೆದು ನಿರ್ದೇಶನ ಮಾಡಿರುವ ಸಿನಿಮಾ ಇದು. ಇದನ್ನು ಡಾಲಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಕಿರು ಚಿತ್ರದಲ್ಲಿ ಆಶಿತ್, ವರ್ಷ ಭಟ್, ಕುಶಿ ಬದ್ರಿನಾಥ್, ಶ್ರೀವತ್ಸ, ಜೇಮ್ಸ್ ಕರಿಸ್ನಾ ರೋಸ್, ಸ್ವರೂಪ್ ರಾಣಿ, ಸುಷ್ಮಾ ಭಟ್ ನಟಿಸಿದ್ದಾರೆ. ಬೇಸಿಗೆಯ ಒಂದು ಬೆಳಿಗ್ಗೆ, ವಿಜಯ್ ಅನಿರೀಕ್ಷಿತವಾಗಿ ಬಾಲ್ಯದಿಂದಲೂ ಕ್ರಶ್ ಆಗಿದ್ದ ತನ್ನ ನೆರೆಮನೆಯ ಹುಡುಗಿ ತ್ರಿಷಾಳನ್ನು ಮತ್ತೆ ಭೇಟಿಯಾಗುತ್ತಾನೆ. ಇಲ್ಲಿಂದ ನಗು, ನಾಸ್ಟಾಲ್ಜಿಯಾ ಮತ್ತು ಮೊದಲ ಪ್ರೀತಿಯ ಮಾಂತ್ರಿಕತೆಯಿಂದ ತುಂಬಿದ ಹೃದಯಸ್ಪರ್ಶಿ ಕಥೆ ಪ್ರಾರಂಭವಾಗುತ್ತದೆ. ಇದು ಸಿಂಪಲ್ ಕಥೆಯಾಗಿದ್ದು, ನಿಮಗೂ ನಿಮ್ಮ ಫಸ್ಟ್ ಲವ್ ನೆನಪಾಗಬಹುದು.

36

ಇಟ್ ವಾಸ್ ನೈಸ್ ಮೀಟಿಂಗ್ ಯು (It was nice meeting you)

ಇದು ರಿಷಭ್ ಶೆಟ್ಟಿ ಫಿಲಂ ನಿರ್ಮಾಣ ಮಾಡಿರುವ ಸಿನಿಮಾ. ಚಿತ್ರಕಥೆ ಮತ್ತು ನಿರ್ದೇಶನ ಜೈಶಂಕರ್ ಆರ್ಯರ್. ಈ ಶಾರ್ಟ್ ಫಿಲಂ ನಲ್ಲಿ ಜೈಶಂಕರ್ ಆರ್ಯರ್ ಮತ್ತು ಅಶ್ವಿತಾ ಹೆಗ್ಡೆ ನಟಿಸಿದ್ದಾರೆ. ಗುಡ್ ಬೈ ಹೇಳುವ ಹಂತದಲ್ಲಿ, ಬ್ರೇಕ್ ಅಪ್ ಮಾಡಿಕೊಂಡಿರುವ ಜೋಡಿಗಳು ಎಲ್ಲವನ್ನು ಸರಿಪಡಿಸಲು ಅಥವಾ ಬಿಟ್ಟು ಹೋಗುವ ಸಲುವಾಗಿ ಕೊನೆಯ ದಿನವನ್ನು ಜೊತೆಯಾಗಿ ಕಳೆಯೋದಕ್ಕೆ ನಿರ್ಧರಿಸುತ್ತಾರೆ. ಆವಾಗ ಏನಾಗುತ್ತೆ ಅನ್ನೋದೆ ಕಥೆ. ಇಬ್ಬರ ಅಭಿನಯಕ್ಕೆ ನೀವು ಖಂಡಿತಾ ಮನಸೋಲುವಿರಿ.

46

ಪೆಟಲ್ಸ್ (Petals)

ಇದು ಕುಡ ರಿಷಭ್ ಶೆಟ್ಟಿ ಫಿಲಂ ನಿರ್ಮಾಣ ಮಾಡಿರುವ, ಶರತ್ ರಾಯ್ಸದ್ ಕಥೆ ಬರೆದು ನಿರ್ದೇಶನ ಮಾಡಿರುವ ಕಿರು ಚಿತ್ರ. ಈ ಸಿನಿಮಾವು ಆಯುಶ್ ಮತ್ತು ಮನೆ ಕೆಲಸದ ಅಜ್ಜಿ ಗಿರಿಜಾ ನಡುವೆ ನಡೆಯುವ ಮುದ್ದಾದ ಕಥೆಯಾಗಿದೆ. ಇದನ್ನು ನೀವು ಖಂಡಿತಾ ಇಷ್ಟ ಪಡುವಿರಿ. ಕಣ್ಣಂಚು ಒದ್ದೆ ಕೂಡ ಆಗುತ್ತೆ.

56

ದ ಲಾಸ್ಟ್ ಹ್ಯಾಪಿ ಕಸ್ಟಮರ್ (The Last Happy Customer)

ಅಶ್ವಿತಾ ಹೆಗ್ಡೆ, ಇಂಪನಾ ಭಾರದ್ವಾಜ್ ಮತ್ತು ಶ್ರೀನಿಧಿ ಆಚಾರ್ ನಟಿಸಿರುವ ಈ ಸಿನಿಮಾವನ್ನು ಮಂದಾರ ಬಟ್ಟಲಹಳ್ಳಿ ನಿರ್ದೇಶಿಸಿದ್ದಾರೆ. ರಶ್ಮಿ ಚಂದೂರ್ ಬರೆದು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಕಥೆ ಚೆನ್ನಾಗಿದೆ, ಒಂದ್ಸಲ ನೋಡಿ.

66

ಬಾನದಾರಿ (Baanadaari)

ಈ ಕಿರು ಚಿತ್ರ ಮಾನವ ಭಾವನೆಗಳು ಮತ್ತು ಸಂಬಂಧಗಳ ಆಳವನ್ನು ಸುಂದರವಾಗಿ ಚಿತ್ರಿಸಿದೆ. ಅರುಣ್ ಭರಮಣ್ಣವರ್ ಮತ್ತು ವಿಕ್ರಮಾದಿತ್ಯ ನಟಿಸಿರುವ ಈ ಸಿನಿಮೀಯ ಪ್ರಯಾಣವನ್ನು ಅರುಣ್ ಭರಮಣ್ಣವರ್ ನಿರ್ದೇಶಿಸಿದ್ದಾರೆ, ಸಂಜಯ್ ಆರ್ ಎ ಸಂಗೀತ ನೀಡಿದ್ದಾರೆ. ಅರುಣ್ ಭರಮಣ್ಣವರ್ ಮತ್ತು ವಿಶ್ವಜೀತ್ ದೇಶಪಾಂಡೆ ನಿರ್ಮಿಸಿದ್ದಾರೆ.

Read more Photos on
click me!

Recommended Stories