ಕಿರುತೆರೆಯ ರಿಯಾಲಿಟಿ ಶೋಗಳ ಹೈಲೈಟ್ ಅಂದ್ರೆ ಅದು ನಿವೇದಿತಾ ಗೌಡ (Niveditha Gowda). ಬಿಗ್ ಬಾಸ್ ನಲ್ಲಿ ಈ ಟಿಕ್ ಟಾಕ್ ಸುಂದರಿ ಕಾಣಿಸಿಕೊಂಡಂದಿನಿಂದ ಇಲ್ಲಿವರೆಗೆ ಕನ್ನಡದ ಹೆಚ್ಚಿನ ಎಲ್ಲಾ ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡಾಗೆ ಸ್ಥಾನ ಇದ್ದೆ ಇದೆ.
26
ನಿವೇದಿತಾ ಗೌಡ ಬಿಗ್ ಬಾಸ್ (Bigg Boss Kannada) ಬಳಿಕ ಕಾಮಿಡಿ ಕಂಪನಿ, ರಾಜಾ ರಾಣಿ, ಗಿಚ್ಚಿ ಗಿಲಿಗಿಲಿ, ಸೇರಿ ಕಲರ್ಸ್ ಕನ್ನಡದ ಹೆಚ್ಚಿನ ಎಲ್ಲಾ ರಿಯಾಲಿಟಿ ಶೋಗಳಲ್ಲಿ, ಹಾಗೂ ಇತರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಹೊಸದೊಂದು ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಡ್ತಿದ್ದಾರೆ ನಿವೇದಿತಾ.
36
ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೆ ಪ್ರಸಾರವಾಗಲಿರುವ ಕಾಮಿಡಿ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್ (Kwatle Kitchen)ಮೂಲಕ, ಅಡುಗೆ ಬಗ್ಗೆ ಎಬಿಸಿಡಿ ಗೊತ್ತಿಲ್ದೇ ಅಡುಗೆ ಮಾಡೊದಕ್ಕೆ ಬರ್ತಿದ್ದಾರೆ ನಿವೇದಿತಾ ಗೌಡ. ಈಗಾಗಲೇ ಕ್ವಾಟ್ಲೆ ಕಿಚನ್ ಪ್ರೊಮೋ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡ್ತಿದೆ.
ಇದರ ಮಧ್ಯೆ ನಿವೇದಿತಾ ಗೌಡ ಹೊಸದಾಗಿ ಫೋಟೊ ಶೂಟ್ (Photo shoot) ಮಾಡಿಸಿಕೊಂಡಿದ್ದು, ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜನರಂತೂ ನಿವೇದಿತಾ ಗೌಡರನ್ನು ಸಲ್ವಾರ್ ಸೂಟ್ ನಲ್ಲಿ ನೋಡಿ ಶಾಕ್ ಆಗಿದ್ದಾರೆ. ಫುಲ್ ಡ್ರೆಸ್ ಹಾಕೋದಕ್ಕೂ ಬರುತ್ತಾ ನಿಮಗೆ ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.
56
ಅಂದ ಹಾಗೇ ನಿವೇದಿತಾ ಗೌಡ ಫುಲ್ ಸ್ಲೀವ್ಸ್ ಇರುವಂತಹ ಕಡು ನೇರಳೆ ಬಣ್ಣದ ಸುಂದರವಾದ ಸಲ್ವಾರ್ ಸೂಟ್ ಧರಿಸಿದ್ದು, ಈ ರೀತಿಯಾಗಿ ನಿವೇದಿತಾ ಕಾಣಿಸಿಕೊಳ್ಳೋದೆ ಅಪರೂಪ. ಹಾಗಾಗಿ ಅಭಿಮಾನಿಗಳು ಈ ಲುಕ್ ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ.
66
ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಹೆಚ್ಚಾಗಿ ಕಾಣಿಸಿಕೊಳ್ಳೋದು ಶಾರ್ಟ್ ಡ್ರೆಸ್ ಗಳಲ್ಲಿ, ಅದು ಕೂಡ ಬೋಲ್ಡ್ ಆಗಿಯೇ ಕಾಣಿಸುತ್ತಾರೆ. ಆಗೊಮ್ಮೆ ಈಗೊಮ್ಮೆ ಸೀರೆಯಲ್ಲೂ ಕಾಣಿಸಿಕೊಳ್ಳುವ ಸುಂದರಿ, ಸಲ್ವಾರ್ ಧರಿಸೋದು ತುಂಬಾನೆ ಕಡಿಮೆ. ಆದರೆ ಅಪರೂಪಕ್ಕೆ ಎನ್ನುವಂತೆ ಸಲ್ವಾರ್ ಧರಿಸಿದ್ದು, ಜನ ಇದನ್ನು ನೋಡಿ ಹುಡುಗೀರು ಅಂದ್ರೆ ಹೀಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.