Published : Feb 23, 2026, 04:12 PM ISTUpdated : Feb 23, 2026, 04:16 PM IST
ಬಿಗ್‌ಬಾಸ್ 12ನೇ ಸೀಸನ್‌ನ ಫೈನಲಿಸ್ಟ್ ಕಾವ್ಯಾ, ಬಿಡುವಿನ ಸಮಯದಲ್ಲಿ ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸಿದ್ದಾರೆ. ಈ ವೇಳೆ ಅವರು ಹಸಿರು ಬಳೆ ತೊಟ್ಟ ಫೋಟೋ ಹಂಚಿಕೊಂಡಿದ್ದು, ಇದು ಗಿಲ್ಲಿ ಕೊಟ್ಟಿದ್ದಾ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.
ಬಿಗ್‌ಬಾಸ್ ಸೀಸನ್ 12 ಮುಕ್ತಾಯಗೊಂಡು ಒಂದು ತಿಂಗಳು ಕಳೆದಿದ್ದರೂ, ಟಾಪ್ 6 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಕಾವ್ಯಾ ಶೈವ ಮತ್ತು ವಿನ್ನರ್ ಗಿಲ್ಲಿ ನಟ ಅವರ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಇಂದಿಗೂ ಇವರಿಬ್ಬರ ಪ್ರತಿ ನಡೆಯನ್ನೂ ಕುತೂಹಲದಿಂದ ಗಮನಿಸುತ್ತಿದ್ದಾರೆ.
27
ನಿರಂತರ ಕಾರ್ಯಕ್ರಮಗಳ ನಡುವೆ ವಿರಾಮ
ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಸಾಲು ಸಾಲು ಟಿವಿ ಶೋಗಳು, ಸನ್ಮಾನ ಹಾಗೂ ಉದ್ಘಾಟನಾ ಸಮಾರಂಭಗಳಲ್ಲಿ ಕಾವ್ಯಾ ಮತ್ತು ಗಿಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಸತತ ಕೆಲಸದ ಒತ್ತಡದ ನಂತರ ಈಗ ಕಾವ್ಯಾ ಕೊಂಚ ಬಿಡುವು ಮಾಡಿಕೊಂಡು ವೈಯಕ್ತಿಕ ಪ್ರವಾಸ ಮಾಡಿದ್ದಾರೆ.
37
ಅಜ್ಜಿಯ ಮನೆಗೆ ಭೇಟಿ
ತಮಗೆ ಸಿಕ್ಕ ಈ ಫ್ರೀ ಟೈಮ್‌ನಲ್ಲಿ ಕಾವ್ಯಾ ಶೈವ ಅವರು ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ. ನಗರದ ಗದ್ದಲದಿಂದ ದೂರವಿರುವ ಹಸಿರು ಪರಿಸರದ ನಡುವೆ ಕಾಲ ಕಳೆಯುತ್ತಾ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಅಜ್ಜಿಯ ಮನೆಯಲ್ಲಿರುವ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಭೇಟಿ ನೀಡಿರುವ ಕಾವ್ಯಾ, ಅಲ್ಲಿನ ಹಚ್ಚ ಹಸಿರಿನ ಪ್ರಕೃತಿಯನ್ನು ನೋಡಿ ಪುಳಕಿತರಾಗಿದ್ದಾರೆ. ತೋಟದಲ್ಲಿ ಎಳೆನೀರನ್ನು ಕುಡಿಯುತ್ತಾ ಕಂಪ್ಲೀಟ್ 'ದೇಸಿ' ಸ್ಟೈಲ್‌ನಲ್ಲಿ ಸಂಭ್ರಮಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
57
ಹಸಿರು ಬಳೆಗಳ ಹವಾ
ಅಜ್ಜಿಯ ಮನೆಗೆ ಹೋದ ಕಾವ್ಯಾ ಅವರು ಕೈ ತುಂಬಾ ಹಸಿರು ಗಾಜಿನ ಬಳೆಗಳನ್ನು ತೊಟ್ಟು ಮಿಂಚಿದ್ದಾರೆ. ಈ ಸಂಪ್ರದಾಯಬದ್ಧ ಲುಕ್ ಅಭಿಮಾನಿಗಳ ಕಣ್ಮನ ಸೆಳೆಯುತ್ತಿದ್ದು, ಕಾವ್ಯಾ ಅವರ ಸೌಂದರ್ಯಕ್ಕೆ ಹಸಿರು ಬಳೆಗಳು ಮತ್ತಷ್ಟು ಮೆರುಗು ನೀಡಿವೆ.
67
ಗಿಲ್ಲಿ ಫ್ಯಾನ್ಸ್ ಕಾಲೆಳೆತ
ಕಾವ್ಯಾ ಅವರು ಹಸಿರು ಬಳೆ ತೊಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಕಾಮೆಂಟ್ ಸೆಕ್ಷನ್‌ನಲ್ಲಿ ಗಿಲ್ಲಿ ನಟ ಅವರ ಅಭಿಮಾನಿಗಳು ಸಖತ್ ಆಕ್ಟಿವ್ ಆಗಿದ್ದಾರೆ. "ಈ ಹಸಿರು ಬಳೆಗಳನ್ನು ಗಿಲ್ಲಿ ಅವರೇ ಗಿಫ್ಟ್ ಕೊಟ್ಟಿದ್ದಾ?" ಎಂದು ಕಾಲೆಳೆಯುವ ಮೂಲಕ ಅವರ ಸ್ನೇಹದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
77
ನೆಮ್ಮದಿಯೇ ಪರಮ ಸುಖ
ತಮ್ಮ ಫೋಟೋಗಳಿಗೆ ಕಾವ್ಯಾ "ನೆಮ್ಮದಿ" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಅಜ್ಜಿಯ ಮನೆಯ ಬಾಗಿಲಲ್ಲಿ ನಿಂತು ತೆಗೆಸಿಕೊಂಡ ಫೋಟೋಗಳು ಮತ್ತು ತೋಟದ ವಿಡಿಯೋಗಳು ಅವರ ಮನಸ್ಸಿನ ಶಾಂತಿಗೆ ಕನ್ನಡಿ ಹಿಡಿದಂತಿದ್ದು, ಈ ಫೋಟೋಗಳು ಈಗ ಜಾಲತಾಣದಲ್ಲಿ ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.