ಮೈ ಕೈ ಜಾಕ್ಸನ್, ಲೌಡ್ ಸ್ಪೀಕರ್ ಅವಾರ್ಡ್ ಗೆದ್ದವರು ಯಾರು? ತಮಾಷೆ ಅವಾರ್ಡ್ ವಿನ್ನರ್ ಗೆ ಸಿಕ್ತು ತಲಾ 1 ಲಕ್ಷ ರೂ

Published : Jan 18, 2026, 09:00 PM IST

Bigg Boss Finale Funny Award : ಬಿಗ್ ಬಾಸ್ ಫಿನಾಲೆಯಲ್ಲಿ ಫನ್ನಿ ಅವಾರ್ಡ್ ವೀಕ್ಷಕರ ಗಮನ ಸೆಳೆದಿದೆ. ವಿಡಿಯೋ ನೋಡಿ ವೀಕ್ಷಕರು ಬಿದ್ದು ಬಿದ್ದು ನಕ್ಕರೆ, ಇಲ್ಲಿ ಗೆದ್ದವರಿಗೆ ಬಂಪರ್ ಒಂದು ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.

PREV
14
ಫನ್ನಿ ಅವಾರ್ಡ್

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆದಿದೆ. ಫಿನಾಲೆಯಲ್ಲಿ ಒಂದಿಷ್ಟು ಸೀರಿಯಸ್ ವಿಷ್ಯಗಳು ನಡೆದ್ರೆ ಮತ್ತೊಂದಿಷ್ಟು ತಮಾಷೆ, ಡಾನ್ಸ್, ಮನರಂಜನೆಗಳಿರುತ್ವೆ. ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಿ ಬಾರಿ ತಮಾಷೆ ವಿಷ್ಯಗಳನ್ನು ಇಟ್ಕೊಂಡು ಅವಾರ್ಡ್ ನೀಡಲಾಗುತ್ತೆ. ಈ ಬಾರಿ ಕೂಡ ಮೂರು ಅವಾರ್ಡ್ ನೀಡಲಾಗಿದೆ. ಅದ್ರಲ್ಲಿ ಗೆದ್ದ ಸ್ಪರ್ಧಿಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.

24
ಮೈ ಕೈ ಜಾಕ್ಸನ್

ಬಿಗ್ ಬಾಸ್ ಶೋನಲ್ಲಿ ಯಾವ ಸ್ಪರ್ಧಿ ಹೆಚ್ಚು ಮೈ ಕೈ ಕುಣಿಸಿದ್ರು ಎಂಬುದಕ್ಕೂ ಒಂದು ಅವಾರ್ಡ್ ಇತ್ತು. ಅದಕ್ಕೆ ಗಿಲ್ಲಿ ನಟ , ಧ್ರುವಂತ್, ರಘು ಹಾಗೂ ರಾಶಿಕಾ ನಾಮಿನೇಷನ್ ಆಗಿದ್ರು. ಒಬ್ಬೊಬ್ಬರ ವಿಡಿಯೋ ನೋಡಿ ವೀಕ್ಷಕರು ನಕ್ಕಿದ್ದೇ ನಕ್ಕಿದ್ದು. ವಿಶೇಷವಾಗಿ ಧ್ರುವಂತ್ ಹಾಗೂ ರಾಶಿಕಾ ಮೈ ಕೈ ಕುಣಿಸಿದ್ದು ಹೆಚ್ಚು ಅಟ್ರ್ಯಾಕ್ಟಿವ್ ಆಗಿತ್ತು. ಕೊನೆಗೆ ಧ್ರುವಂತ್ ಈ ಅವಾರ್ಡ್ ತೆಗೆದುಕೊಂಡ್ರು. ವೇದಿಕೆ ಮೇಲೆ ಬಂದು ಅವಾರ್ಡ್ ಪಡೆದ ಧ್ರುವಂತ್ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಯ್ತು.

34
ಲೌಡ್ ಸ್ಪೀಕರ್ ಅವಾರ್ಡ್

ಬಿಗ್ ಬಾಸ್ ಇಟ್ಟಿದ್ದ ಇನ್ನೊಂದು ತಮಾಷೆ ಅವಾರ್ಡ್ ಅಂದ್ರೆ ಲೌಡ್ ಸ್ಪೀಕರ್. ಹೆಸರೇ ಹೇಳುವಂತೆ ಯಾರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕೂಗಾಡಿದ್ರು ಎಂಬ ಅವಾರ್ಡ್ ಇದು. ಬಹುತೇಕ ಎಲ್ಲರೂ ಅಶ್ವಿನಿ ವಿನ್ನರ್ ಅಂದ್ಕೊಂಡಿದ್ರು. ಆದ್ರೆ ಕೆಲವೇ ದಿನ ಬಿಗ್ ಬಾಸ್ ಮನೆಯಲ್ಲಿದ್ರೂ ಅಶ್ವಿನಿ ಸೋಲಿಸಿ ಅವಾರ್ಡ್ ಗೆದ್ದಿದ್ದು ರಿಷಾ. ಸ್ಪರ್ಧೆಯಲ್ಲಿ ಅಶ್ವಿನಿ, ರಾಶಿಕಾ, ರಿಷಾ ಇದ್ರು. ಈ ಸ್ಪರ್ಧೆ ಗೆದ್ದ ರಿಷಾ, ವೇದಿಕೆ ಮೇಲೆ ಎಷ್ಟೊಂದು ಅವಾರ್ಡ್ ಪಡೆದಿದ್ದೇನೆ. ಸಿನಿಮಾಕ್ಕೆ ಅವಾರ್ಡ್ ಪಡೆಯುವ ಆಸೆ ಇದೆ. ಆದ್ರೆ ಇಂಥ ಅವಾರ್ಡ್ ಸಿಗುತ್ತೆ ಅಂತ ಗೊತ್ತಿರಲಿಲ್ಲ ಎಂದಿದ್ದಾರೆ. ಇವರಿಗೂ 1 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

44
ಕಣ್ಣೀರ ಕಣ್ಮಣಿ

ಬಿಗ್ ಬಾಸ್ ನೀಡಿದ ಮೂರನೇ ತಮಾಷೆ ಅವಾರ್ಡ್ ಕಣ್ಣೀರ ಕಣ್ಮಣಿ. ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಕಣ್ಣೀರಿಟ್ಟವರಿಗೆ ಈ ಅವಾರ್ಡ್ ಸಿಕ್ಕಿದೆ. ಇದ್ರಲ್ಲಿ ಧ್ರುವಂತ್ ನಾಮಿನೇಟ್ ಆಗಿದ್ರು. ಆದ್ರೆ ವಿನ್ ಆಗಿದ್ದು ರಾಶಿಕಾ. ನನಗೇ ಯಾಕೆ ಹೀಗೆ ಆಗುತ್ತೆ ಎನ್ನುವ ರಾಶಿಕಾ ಡೈಲಾಗ್ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಫಿನಾಲೆ ವೇದಿಕೆ ಮೇಲೂ ಕೇಳಿ ಬಂತು. ಕಿಚ್ಚ ಸುದೀಪ್ ಇವರಿಗೆ ಕಣ್ಣೀರ ಕಣ್ಮಣಿ ಅವಾರ್ಡ್ ನೀಡಿದ್ದಲ್ಲದೆ ಅವರ ಫೆವರೆಟ್ ಡೈಲಾಗ್ ಹೇಳಿ ಕಿಚಾಯಿಸಿದ್ರು. ಬಿಗ್ ಬಾಸ್ ಮನೆಗೆ ಬಂದ್ಮೇಲೇ ನಾನು ಇಷ್ಟೊಂದು ಅಳ್ತೇನೆ ಎಂಬುದು ನನಗೆ ಗೊತ್ತಾಗಿದ್ದು. ನನ್ನ ಹೊಸ ರೂಪ ಬಿಗ್ ಬಾಸ್ ಮನೆಯಲ್ಲಿ ಹೊರಗೆ ಬಂತು ಅಂತ ರಾಶಿಕಾ ಹೇಳಿದ್ದಾರೆ. ರಾಶಿಕಾಗೆ ತಮಾಷೆ ಅವಾರ್ಡ್ ಜೊತೆ ಒಂದು ಲಕ್ಷ ರೂಪಾಯಿ ನಗದು ಮೊತ್ತ ಸಿಕ್ಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories