ಸಾರ್ವಜನಿಕವಾಗಿ ಸ್ತನ್ಯಪಾನ ಮಾಡುವುದು ನಾರ್ಮಲ್‌ ಅಪರಾಧವಲ್ಲ: ಬಾಲಿಕಾ ವಧು ನಟಿ ನೇಹಾ ಮರ್ದಾ

First Published | May 21, 2023, 10:38 AM IST

ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಿಯಾದ ಬಾಲಿಕಾ ವಧು  ಪಾತ್ರಕ್ಕೆ ಹೆಸರುವಾಸಿಯಾಗಿರುವ  ಕಿರುತೆರೆ ನಟಿ ನೇಹಾ ಮರ್ದಾ ಸಾರ್ವಜನಿಕವಾಗಿ ಹಾಲುಣಿಸುವ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಸಾರ್ವಜನಿಕವಾಗಿ ಮಗುವಿಗೆ ಹಾಲುಣಿಸುವುದು ಅಪರಾಧವಲ್ಲ ಎಂದು ನೇಹಾ ಹೇಳಿದ್ದಾರೆ. ತಾಯಿ ಮಗುವಿಗೆ ಹಾಲುಣಿಸುವುದು 'ನೋಡಲು ಅತ್ಯಂತ ಸುಂದರವಾದ ಸಂಗತಿ' ಎಂದು ಅವರು ಹೇಳಿದರು.  
 
 

ಈ ವರ್ಷದ ಏಪ್ರಿಲ್ 7 ರಂದು ನಟಿ  ನೇಹಾ ಮರ್ದಾ ಮತ್ತು ಅವರ ಪತಿ ಆಯುಷ್ಮಾನ್ ಅಗರ್ವಾಲ್ ಹೆಣ್ಣು ಮಗುವನ್ನು ಸ್ವಾಗತಿಸಿದರು. ಈ ಸುದ್ದಿಯನ್ನು ಅವರ ಪ್ರಚಾರಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

'ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ನೆಹಮರ್ದಾ ಮತ್ತು ಆಯುಷ್ಮಾನ್ ಅಗರ್ವಾಲ್ ಅವರಿಗೆ ಅಭಿನಂದನೆಗಳು, " ಎಂಬ ಪೋಸ್ಟನ್ನು ಅವರ ಪ್ರಚಾರಕರು ಇನ್ಸ್ಟಾಗ್ರಾಮ್‌  ಖಾತೆಯಲ್ಲಿ  ಹಂಚಿಕೊಂಡರು. ಪುಟ್ಟ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದಿರುವ ನೇಹಾ ಅವರ  ಫೋಟೋವನ್ನು  ಸಹ  ಜೊತೆ ಹಂಚಿಕೊಂಡಿದ್ದಾರೆ.

Tap to resize

'ಸಾರ್ವಜನಿಕವಾಗಿ ಸ್ತನ್ಯಪಾನದ ಬಗ್ಗೆ ಕಾಳಜಿ  ಹೊಂದಿರುವುದರ ಜೊತೆಗೆ , ನಾನು ಯಾವಾಗಲೂ ನನ್ನ ಮಗುವಿಗೆ ಮನೆಯಿಂದ ಆಹಾರವನ್ನು ಕೊಡಲು ಬಯಸುತ್ತೇನೆ ಮತ್ತು ನಂತರ ಅವಳನ್ನು ಹೊರಗೆ ಕರೆದೊಯ್ಯಲು ಬಯಸುತ್ತೇನೆ. ಆದರೆ ನಾವು ಹೊರಗೆ ಇರುವಾಗ ಅವಳು ಹಸಿದರೆ ನಾನು   ಅವಳು ಹಸಿವಿನಿಂದ ಇರಲು ಅವಕಾಶ ಮಾಡಿಕೊಡುವುದಿಲ್ಲ. ನಾನು ಅವಳಿಗೆ ಆಹಾರ ನೀಡುತ್ತೇನೆ. ಆದರೆ ನಾನು ಮನೆಯಿಂದ ಹೊರಬರುವ ಮೊದಲು ನಾನು ಅವಳಿಗೆ ಚೆನ್ನಾಗಿ ತಿನ್ನಿಸಲು ಬಯಸುತ್ತೇನೆ' ಎಂದು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ನೇಹಾ ಹೇಳಿದ್ದಾರೆ.

'ನಾನು ಅವಳನ್ನು ಹಸಿವಿನಿಂದ ಸಾಯಿಸುವುದಿಲ್ಲ ಎಂದು ಹೇಳಿದ ನಂತರ ನೇಹಾ ಸ್ತನ್ಯಪಾನ ತುಂಬಾ ಸಹಜ ಸಂಗತಿ. ನೀವು ಸಾರ್ವಜನಿಕವಾಗಿ ನಿಮ್ಮ ಮಗುವಿಗೆ ಹಾಲುಣಿಸುತ್ತಿದ್ದರೆ, ಅದು ಒಳ್ಳೆಯದು. ನೀವು ಅಪರಾಧ ಮಾಡುತ್ತಿಲ್ಲ. ನೀವು ನಿಮ್ಮ ಮಗುವಿಗೆ ಹಾಲುಣಿಸುತ್ತಿದ್ದೀರಿ ಮತ್ತು ಅದು ಸಂಪೂರ್ಣವಾಗಿ ಸಾಮಾನ್ಯ. ಹಾಲು ಉಣಿಸುವಾಗ ಸ್ಕಾರ್ಫ್‌ ಬಳಸಬಹುದು. ತಾಯಿ ಮಗುವಿಗೆ ಹಾಲುಣಿಸುವದನ್ನು ನೋಡುವುದು ಅತ್ಯಂತ ಸುಂದರವಾದ ವಿಷಯ ಮತ್ತು ಅದಕ್ಕೆ ಯಾವುದೇ ಅವಮಾನವಿಲ್ಲ. ಅದು ನನ್ನ ಅಭಿಪ್ರಾಯ' ಎಂದಿದ್ದಾರೆ.

ಹಿಂದಿ ಕಿರುತೆರೆ ನಟಿ ನೇಹಾ  ಮರ್ದಾ  ಪಾಟ್ನಾ ಮೂಲದ ಉದ್ಯಮಿ ಆಯುಷ್ಮಾನ್ ಅಗರ್ವಾಲ್ ಅವರನ್ನು 2012 ರಲ್ಲಿ ವಿವಾಹವಾದರು.

ನೇಹಾ ಅವರು ಬಾಲಿಕಾ ವಧು, ಮಹಾದೇವ್, ಡೋಲಿ ಅರ್ಮಾನೋನ್ ಕಿ ಮತ್ತು ಲಾಲ್ ಇಷ್ಕ್‌ನಂತಹ ಜನಪ್ರಿಯ ಧಾರಾವಾಹಿಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ಕೊನೆಯದಾಗಿ ಕ್ಯುನ್ ರಿಶ್ಟನ್ ಮೇ ಕಟ್ಟಿ ಬಟ್ಟಿಯಲ್ಲಿ ಕಾಣಿಸಿಕೊಂಡರು.

Latest Videos

click me!