ತನ್ನ ಮಗನ ಜೀವನದಲ್ಲಿ ತಾನು ಅಂದುಕೊಂಡಂತೆ ಆಗಬೇಕು, ತಾನು ಅಂದುಕೊಂಡಂಥ ಹುಡುಗಿಯನ್ನೇ ಸೊಸೆಯನ್ನಾಗಿ ಮಾಡಿ ಕೊಳ್ಳಬೇಕು ಎಂದು ಕೊಂಡಿದ್ದ ಕಾವೇರಿಗೆ ಈಗ ತನ್ನ ನಿರ್ಧಾರವೇ ತನ್ನನ್ನು ಕಷ್ಟದ ಪರಿಸ್ಥಿತಿಗೆ ನೂಕಿದಂತಾಗಿದೆ.
ತಾನು ಹೇಳುವಂತೆ ಕೇಳುವ ಹುಡುಗಿಯೇ ಬೇಕೆಂದು ವೈಷ್ಣವ್ ಇಷ್ಟಪಟ್ಟಿದ್ದ ಕೀರ್ತಿಯನ್ನು ತನ್ನ ಮೋಸದ ಜಾಲಕ್ಕೆ ಸಿಲುಕಿಸಿ, ದೂರ ಆಗುವಂತೆ ಮಾಡಿದ ಕಾವೇರಿ ಮಗನಿಗೆ ಲಕ್ಷ್ಮೀ ಜೊತೆ ಮದುವೆ ಮಾಡಿಸಿದ್ದಾಗಿದೆ.
ಇದೀಗ ತಾನೇ ಹೆಣೆದ ಬಲೆಯಲ್ಲಿ ಕಾವೇರಿ ಸಿಲುಕಿದ್ದಾಳೆ. ತಾನು ಇಷ್ಟಪಟ್ಟಿದ್ದು ತನಗೆ ಸಿಗಲೇ ಬೇಕೆಂದು ಹಠ ಹೊಂದಿರುವ ಕೀರ್ತಿ ಪದೇ ಪದೇ ಕಾವೇರಿ ಮುಂದೆ ಬಂದು ಬೇಗ ತನ್ನ - ವೈಷ್ಣವ್ ಮದುವೆ ಮಾಡಿಸುವಂತೆ ಪೀಡಿಸುತ್ತಿದ್ದಾಳೆ.
ಅದಕ್ಕೂ ಮುನ್ನ ವೈಷ್ಣವ್ ಕೈಬಿಟ್ಟಿದ್ದ ಆಲ್ಬಂ ನಲ್ಲಿ (Album Song) ಮತ್ತೆ ತನ್ನನ್ನೇ ಹಾಕಿಕೊಳ್ಳುವಂತೆ ವೈಷ್ಣವ್ ಗೆ ಹೇಳಲು ಕೀರ್ತಿ ಕಾವೇರಿ ತಲೆ ತಿನ್ನುತ್ತಿದ್ದಾಳೆ. ಅದಕ್ಕಾಗಿ ವೈಷ್ಣವ್ ಇರೋವಾಗ ತಾನಾಗಿಯೇ ಮದುಮಗಳಂತೆ ರೆಡಿಯಾಗಿ ಕಾವೇರಿ ಮುಂದೆ ಬೇಡಿಕೆ ಇಟ್ಟಿದ್ದಾಳೆ.
ನೀವಿನ್ನು ಏನೇ ನೈಸ್ ಮಾಡಿದ್ರೂ ನಾನು ಕೇಳಲ್ಲ, ನನ್ನ ಅಮ್ಮ ಮುದ್ದು ಮಾಡಿದ್ರೇನೆ ನಂಗೆ ಇಷ್ಟ ಆಗಲ್ಲ, ಇನ್ನು ನೀವು ಮುದ್ದು ಮಾಡಿದ್ರೆ ಬಿಡ್ತೀನಾ ಎಂದು ಕೊಂಕಿನ ಮಾತನಾಡುವ ಕೀರ್ತಿ, ನನ್ನ ಲೈಫ್ ಸದ್ಯ ನಂಗೆ ತುಂಬಾ ಇಂಪಾರ್ಟಂಟ್ ಎಂದು ಹೇಳುತ್ತಾಳೆ.
ಕಾವೇರಿಗೆ ಯಾವುದಕ್ಕೂ ಮಾತನಾಡಲು ಅವಕಾಶ ಕೊಡದ ಕೀರ್ತಿ, ಸದ್ಯ ನಂಗೇನಿದ್ರೂ ಆದಷ್ಟು ಬೇಗ ವೈಷ್ಣವ್ ಜೊತೆ ಮದ್ವೆ ಆಗ್ಬೇಕು, ಅದಕ್ಕೋಸ್ಕರ ನಾನು ಏನು ಮಾಡೋಕು ರೆಡಿ, ಆದಷ್ಟು ಬೇಗ ಆಕ್ಷನ್ ತೆಗೊಳಿ ಎಂದು ಕಾವೇರಿಗೆ ಹೇಳುತ್ತಾ ಕಾಲ್ ಕಟ್ ಮಾಡ್ತಾಳೆ. ಇದರಿಂದ ಕಾವೇರಿಗೆ ಕೀರ್ತಿ (Kaveri and Keerthi)ಮುಂದೆ ಸೋತಂತಾಗಿದೆ.
ಇನ್ನು ಕೀರ್ತಿಯ ಹುಚ್ಚಾಟ ಸಹಿಸಿಕೊಳ್ಳದ ಕೀರ್ತಿ ಅಮ್ಮ, ಇದನ್ನೆಲ್ಲಾ ಇಲ್ಲಿಗೆ ಬಿಟ್ಟು ಬಿಡು. ಹೇಳೋದಾದ್ರೆ ನೇರವಾಗಿ ವೈಷ್ಣವ್ ಜೊತೆ ನಿಜ ಹೇಳು ಎನ್ನುವಾಗ, ಕೀರ್ತಿ, ಇಲ್ಲಾ ವೈಷ್ಣವ್ ತುಂಬಾ ಸೂಕ್ಷ್ಮ ಮನಸ್ಸಿನವನು. ಅವನಿಗೆ ನಿಧಾನವಾಗಿ ಎಲ್ಲಾ ಅರ್ಥ ಮಾಡಿಸ್ತೀನಿ, ಅವಾಗ ಅವನು ನನ್ನನ್ನು ಒಪ್ಪಿಕೊಳ್ತಾನೆ ಎನ್ನುತ್ತಾಳೆ.
ಅಷ್ಟರಲ್ಲೇ ಕೀರ್ತಿಗೆ ಆಲ್ಬಂ ಸಾಂಗ್ ಜೊತೆಯಾಗಿ ಮಾಡಲು ವೈಷ್ಣವ್ ಒಪ್ಪಿರೋದಾಗಿ ಡೈರೆಕ್ಟರ್ ಕಾಲ್ ಬರುತ್ತೆ, ಇದರಿಂದ ತುಂಬಾ ಖುಷಿಯಾಗಿರೋ ಕೀರ್ತಿ ಅಮ್ಮನಿಗೆ ಆದಷ್ಟು ಬೇಗ ಒಂದು ಪಾರ್ಟಿಗೆ ಅರೇಂಜ್ ಮಾಡು, ಇದರಲ್ಲಿ ಆಲ್ಬಂ ಸಾಂಗ್ ಜೊತೆ, ನನ್ನ ಎಂಗೇಜ್ ಮೆಂಟ್ ಡೇಟ್ (engagement date) ಕೂಡ ಅನೌನ್ಸ್ ಮಾಡ್ಬೇಕು ಅಂತಾಳೆ ಕೀರ್ತಿ. ಮುಂದೆ ಏನೇನು ಆಗುತ್ತೆ ಅನ್ನೋದನ್ನು ಕಾದು ನೋಡಬೇಕು.