ಸೀರಿಯಲ್ನಲ್ಲಿ ಕಿತ್ತಾಡುವ ಶ್ರಾವಣಿ, ಇಲ್ಲಿ ಸುಬ್ಬುಗೆ ಸೆರಗು ಹಿಡಿಯೋದನ್ನು ಹೇಳಿಕೊಡ್ತಿದ್ದಾಳೆ ನೋಡಿ!
ಶ್ರಾವಣಿ-ಸುಬ್ರಹ್ಮಣ್ಯ ಸೀರಿಯಲ್ ತಾರೆಯರಾದ ಆಸಿಯಾ ಮತ್ತು ಅಮೋಘ್ ಸೆರಗು ಹಿಡಿದುಕೊಳ್ಳುವ ರೀಲ್ಸ್ ಮಾಡಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜೊತೆ ಎರಡು ನವಿರಾದ ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಪ್ರೇಮಿಗಳ ಮನಸ್ಸು ಗೆದ್ದಿದೆ. ತಂದೆಯ ಪ್ರೀತಿಗಾಗಿ ಹಂಬಲಿಸುವ ಶ್ರಾವಣಿಯ ಕಥೆ ಕೂಡ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಅಪ್ಪ ಯಾವಾಗ ತನ್ನನ್ನು ಒಪ್ಪಿಕೊಳ್ಳುತ್ತಾರೆ, ರಾಜಕಾರಣಿಯಾಗಿರೋ ಅಪ್ಪನ ಪ್ರೀತಿ ಸಿಗಬಹುದು ಎಂಬ ಆಸೆಯ ಕಣ್ಣುಗಳಿಂದಲೇ ಕಾಯುತ್ತಿದ್ದಾಳೆ ಶ್ರಾವಣಿ.
ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿದ್ದಾಳೆ ಶ್ರಾವಣಿ. ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಧಾರಾವಾಹಿ ಕನ್ನಡದಲ್ಲಿ ಈಗಾಗಲೇ ಪ್ರಸಾರವಾಗಿ ಕೆಲ ದಿನಗಳು ಕಳೆದಿದ್ದು, ವೀಕ್ಷಕರಿಗೆ ಕಥೆ ಹಾಗೂ ಶ್ರಾವಣಿ ತುಂಬಾ ಹಿಡಿಸಿದ್ದಾಳೆ. ಅದೇ ರೀತಿ ಮುಗ್ಧನಾಗಿರುವ ಸುಬ್ಬು ಕೂಡ ಅಷ್ಟೇ ಇಷ್ಟವಾಗುತ್ತಿದ್ದಾನೆ. ಇದೀಗ ಶ್ರಾವಣಿ ಮತ್ತು ಸುಬ್ರಹ್ಮಣ್ಯ ಇಬ್ಬರೂ ರೀಲ್ಸ್ ಮಾಡಿದ್ದಾರೆ. ಸುಬ್ಬುಗೆ ಸೆರಗು ಹೇಗೆ ಹಿಡಿದುಕೊಳ್ಳಬೇಕು ಎಂದು ಶ್ರಾವಣಿ ಹೇಳಿಕೊಡುತ್ತಿದ್ದಾಳೆ. ಫೋಟೋಗೆ ಹೇಗೆ ಪೋಸ್ ಕೊಡಬೇಕು ಎನ್ನುವುದನ್ನು ಹೇಳಿಕೊಡುವ ಈ ರೀಲ್ಸ್ಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ. ನಿಮ್ಮಿಬ್ಬರ ಕ್ಯಾರೆಕ್ಟರ್ ನಮಗೆ ಇಷ್ಟ ಎಂದು ನೆಟ್ಟಿಗರು ಹೇಳ್ತಿದ್ದಾರೆ.
ಈಕೆ ನಿಜಕ್ಕೂ ಹಿಟ್ಲರ್ ಕಲ್ಯಾಣ ಅಂತರನಾ? ಫ್ರಾಕ್ ಡಾನ್ಸ್ ನೋಡಿ ಭಲೆ ಭಲೆ ಎಂದ ಫ್ಯಾನ್ಸ್
ಇದರಲ್ಲಿ ಶ್ರಾವಾಣಿ ಪಾತ್ರಧಾರಿಯ ಹೆಸರು ಆಸಿಯಾ ಫಿರ್ದೋಸ್. ಸುಬ್ಬು ಪಾತ್ರಧಾರಿ ಹೆಸರು ಅಮೋಘ್. ಇನ್ನು ಆಸಿಯಾ ಕುರಿತು ಹೇಳುವುದಾದರೆ, ಇವರು ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ (Kanyakumari) ಧಾರಾವಾಹಿಯಲ್ಲಿ ಕನ್ನಿಕಾ ಆಗಿದ್ದರು. ಅಲ್ಲಿ ಭಕ್ತಿ, ಮುಗ್ಧತೆ, ದೈವೀಕತೆಯ ಪ್ರತೀಕವಾಗಿದ್ದ ಪಾತ್ರದಲ್ಲಿ ಈಕೆ ಮಿಂಚಿದ್ದರು. ಕನ್ಯಾಕುಮಾರಿ ಧಾರಾವಾಹಿಯಲ್ಲಿ ಆಸಿಯಾಗೆ ಜೋಡಿಯಾಗಿ ನಟಿಸಿದ್ದ ಯಶ್ವಂತ್ ಗೌಡ (Yashwanth Gowda) ಅವರು ತೆಲುಗು ಕಿರುತೆರೆಯಲ್ಲಿ ಗಟ್ಟಿಮೇಳ ಧಾರಾವಾಹಿ ನಾಯಕಿ ಅಮೂಲ್ಯ ಜೊತೆಗೆ ನಟಿಸಿದ್ದ ಅಮ್ಮಾಯಿಗಾರು ಧಾರಾವಾಹಿಯ ರಿಮೇಕ್ ಆಗಿರುವ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಇದೀಗ ಶ್ರಾವಣಿಯಾಗಿ ಆಸಿಯಾ ನಟಿಸುತ್ತಿದ್ದಾರೆ.
ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ. ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸ್ ಮನೋಜ್ಞವಾಗಿ ನಟಿಸುತ್ತಿದ್ದು, ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಕನ್ಯಾಕುಮಾರಿ ಬಳಿಕ ದ್ವಂದ್ವ ಎನ್ನುವ ಸಿನಿಮಾದಲ್ಲಿ, ಮಿಲನ ಎನ್ನುವ ವೆಬ್ ಸೀರಿಸ್ನಲ್ಲಿಯೂ ಇವರು ನಟಿಸಿದ್ದಾರೆ. ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ ಇವರು. All in one Adda ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಇವರ ಈ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ. ಅವರು ಇದಾಗಲೇ ಸತ್ಯ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಸುಬ್ಬು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸೀರಿಯಲ್ ಶೂಟಿಂಗ್ನಲ್ಲಿ ಹೀಗಿರತ್ತೆ ರೊಮಾನ್ಸ್! ತಬ್ಬಿಕೊಂಡ ನಟ-ನಟಿಯನ್ನು ಎಬ್ಬಿಸಲು ಹರಸಾಹಸ