Lakshmi Nivasa Serial: ಜಯಂತ್‌ಗೆ ಹೆದರಿ ವಿಶ್ವನ ಮನೆ ತೊರೆದ ಜಾನು ಮತ್ತೆ ಶ್ರೀಲಂಕಾಕ್ಕೆ ಹೋಗ್ತಾಳಾ?

Published : Apr 30, 2025, 12:14 PM ISTUpdated : Apr 30, 2025, 12:30 PM IST

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಾನು ಬದುಕಿಲ್ಲ ಅಂತ ಲಕ್ಷ್ಮೀ ಮನೆಯವರು ಬೇಸರದಲ್ಲಿದ್ದಾರೆ. ಸೈಕೋ ಜಯಂತ್‌ ಇನ್ನಷ್ಟು ಹುಚ್ಚ ಆಗಿದ್ದಾನೆ. ಇನ್ನೊಂದು ಕಡೆ ವಿಶ್ವನ ಮನೆಯಿಂದ ಜಾನು ಹೊರಗಡೆ ಹೋಗಲಿದ್ದಾಳೆ. ಹಾಗಾದರೆ ಮುಂದೆ ಏನಾಗಬಹುದು? 

PREV
16
Lakshmi Nivasa Serial: ಜಯಂತ್‌ಗೆ ಹೆದರಿ ವಿಶ್ವನ ಮನೆ ತೊರೆದ ಜಾನು ಮತ್ತೆ ಶ್ರೀಲಂಕಾಕ್ಕೆ ಹೋಗ್ತಾಳಾ?

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ವಿಶ್ವನ ಮನೆಗೆ ಜಾಹ್ನವಿ ಬಂದಿರೋದನ್ನು ನೋಡಿ ಇವರಿಬ್ಬರಿಗೂ ಮದುವೆ ಆಗಲಿದೆಯಾ ಎಂದು ವೀಕ್ಷಕರು ಅಚ್ಚರಿಪಟ್ಟಿದ್ದರು. ಈಗ ವಿಶ್ವ ಮನೆಯಿಂದ ಜಾನು ಹೊರಗಡೆ ಬಂದಿದ್ದಾಳೆ.

26

ಹೌದು, ತನ್ನ ಮನೆಯಲ್ಲಿ ಜಾನು ಇರೋದು ವಿಶ್ವನಿಗೆ ಗೊತ್ತೇ ಇಲ್ಲ. ಜಾನು ಸತ್ತು ಹೋಗಿದ್ದಾಳೆ ಅಂತ ಅವನು ಭಾವಿಸಿದ್ದಾನೆ, ನನ್ನ ಮನೆಯಲ್ಲಿ ಜಾನು ಹಾಡೋದನ್ನು ಕೇಳಿದ್ದ ಅವನಿಗೆ ಇದೆಲ್ಲ ಭ್ರಮೆ, ಕನಸು ಅನಿಸಿದೆ. ಜಾನು ಬದುಕಿಲ್ಲ ಅಂತ ಅವನು ಕಣ್ಣೀರಿಡುತ್ತಿದ್ದಾನೆ.

36

ಇನ್ನೊಂದು ಕಡೆ ವಿಶ್ವನ ಮನೆಯವರಿಗೆ ನನ್ನ ಗಂಡ ಜಯಂತ್‌ ತುಂಬ ಕ್ಲೋಸ್‌, ಆಗಾಗ ಅವನು ಇಲ್ಲಿಗೆ ಬರ್ತಾನೆ, ಅವನ ಕಣ್ಣಿಗೆ ನಾನು ಕಂಡ್ರೆ ಅಷ್ಟೇ ನನ್‌ ಕಥೆ ಎಂದು ಅವಳು ಭಯಪಟ್ಟು ಮನೆಯಿಂದ ಹೊರಗಡೆ ಹೋಗಲು ರೆಡಿಯಾಗಿದ್ದಾಳೆ.

46

ವಿಶ್ವ ತಂದೆ-ತಾಯಿಗೆ ನಮಸ್ಕಾರ ಮಾಡಿ ಅವಳು ಮನೆಯಿಂದ ಹೊರಡಲು ರೆಡಿಯಾಗಿದ್ದಾಳೆ. ನಿಜಕ್ಕೂ ಜಾನು ಮನೆಯಿಂದ ಹೊರಗಡೆ ಬರ್ತಾಳಾ? ಜಾನುಳನ್ನು ಯಾರು ತಡೆಯುತ್ತಾರಾ? ಎಂದು ಕಾದು ನೋಡಬೇಕಾಗಿದೆ. ಇನ್ನೊಂದು ಕಡೆ ಜಯಂತ್‌ ಮಾತ್ರ ಸುಮ್ಮನೆ ಕೂರುವವನಲ್ಲ. 

56

ಜಯಂತ್‌ಗೆ ತನ್ನ ಹೆಂಡ್ತಿ ಬದುಕಿದ್ದಾಳೆ ಎನ್ನುವುದು ಇನ್ನೂ ಅರ್ಥ ಆಗಿಲ್ಲ. ಅವನಿಗೆ ಜಾನು ಬದುಕಿದ್ದಾಳೆ ಅಂತ ಗೊತ್ತಾದ್ರೆ ಮಾತ್ರ ಅವನು ಸುಮ್ಮನೆ ಇರೋದಿಲ್ಲ. ಹೇಗಾದರೂ ಮಾಡಿ ಅವನು ಪತ್ನಿಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ.

66

ಅತಿಯಾಗಿ ಹೆಂಡ್ತಿಯನ್ನು ಪ್ರೀತಿಸುವ ಜಯಂತ್‌ ಪತ್ನಿಗೋಸ್ಕರ ಯಾರನ್ನು ಬೇಕಿದ್ರೂ ಕೊಲೆ ಮಾಡ್ತಾನೆ. ಈ ಭಯಕ್ಕೆ ಜಾನು ಅವಳಿಂದ ದೂರ ಇದ್ದಾಳೆ. ಒಟ್ಟಿನಲ್ಲಿ ಮುಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಅಂದಹಾಗೆ ಜಯಂತ್‌ ಪಾತ್ರದಲ್ಲಿ ದೀಪಕ್‌ ಸುಬ್ರಹ್ಮಣ್ಯ, ಜಾನು ಪಾತ್ರದಲ್ಲಿ ಚಂದನಾ ಅನಂತಕೃಷ್ಣ, ವಿಶ್ವ ಪಾತ್ರದಲ್ಲಿ ಭವಿಷ್‌ ಗೌಡ ಅವರು ನಟಿಸುತ್ತಿದ್ದಾರೆ.  

Read more Photos on
click me!

Recommended Stories