ದಿವ್ಯಾ- ಅರವಿಂದ್ ಬಂಧಕ್ಕೆ 3 ವರ್ಷ : ಮದ್ವೆಯಾಗಿ, ಆನಿವರ್ಸರಿ ಸೆಲೆಬ್ರೇಟ್ ಮಾಡ್ತೀವಿ ಎಂದ ಫ್ಯಾನ್ಸ್

First Published | Feb 29, 2024, 2:16 PM IST

ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಗಳಾಗಿ ಆಗಮಿಸಿ, ಬಳಿಕ ಜೋಡಿ ಹಕ್ಕಿಗಳಾಗಿ ಮಿಂಚುತ್ತಿರುವ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಬಂಧಕ್ಕೆ ಇದೀಗ 3 ವರ್ಷದ ಸಂಭ್ರಮ. 
 

ಬೈಕರ್ ಅರವಿಂದ್ ಕೆಪಿ (Aravind KP)ಮತ್ತು ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಆಗಮಿಸಿ, ತಮ್ಮ ಆಟ, ಫ್ರೆಂಡ್ ಶಿಪ್, ಪ್ರೀತಿ, ಬಾಂಧವ್ಯದ ಮೂಲಕ ಕನ್ನಡಿಗರ ಮನೆಮಾತಾದ ಜೋಡಿ. 

ಈ ಜೋಡಿ ಅರ್ವಿಯಾ (Arviya) ಅಂತಾನೇ ಫೇಮಸ್. ಈ ಜೋಡಿ ಹಕ್ಕಿಗಳಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಪೇಜ್ ಗಳು ಇವೆ. ಅವರಿಂದಲೇ ಅರ್ವಿಯಾ ಜೋಡಿ ಇಷ್ಟೊಂದು ಫೇಮಸ್ ಆಗಿದ್ದು. ಇದೀಗ ಅರವಿಂದ್ ದಿವ್ಯಾ ಪ್ರೇಮ ಬಂಧಕ್ಕೆ 3 ವರ್ಷ ಆಗಿದ್ದು, ಈ ಸಂಭ್ರಮವನ್ನು ಅರವಿಂದ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಇಬ್ಬರ ಜೊತೆಗಿನ ಫೋಟೋ ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದರು. 

Tap to resize

ಬಿಗ್ ಬಾಸ್ ಸೀಸನ್ 8 ಆರಂಭವಾಗಿದ್ದು ಫೆಬ್ರುವರಿ 8, 2021 ರಂದು, ಹಾಗಾಗಿ ಅಂದಿನಿಂದ ಇಂದಿನವರೆ ದಿವ್ಯಾ (Divya Uruduga) -ಅರವಿಂದ್ ಸ್ನೇಹ ಪ್ರೇಮಕ್ಕೆ 3 ವರ್ಷ. ಹಾಗಾಗಿ ಹ್ಯಾಪಿ 3 ಇಯರ್ಸ್ ಟು ಅಸ್ ಎಂದು ಬರೆದಿರುವ ಅರವಿಂದ ತಮ್ಮ ಅಭಿಮಾನಿಗಳಿಗೆ ನೀವು, ನಿಮ್ಮ ಬೇಷರತ್ತಾದ ಪ್ರೀತಿ, ನಿಮ್ಮ ಆಶೀರ್ವಾದ, ನಮ್ಮನ್ನೂ ನಿಮ್ಮ ಜೀವನದಲ್ಲಿ ಒಬ್ಬರಂತೆ ಕಂಡ ರೀತಿ, ಇವೆಲ್ಲವೂ ಇರದಿದ್ದರೆ ಅರ್ವಿಯಾ ಪ್ರಯಾಣ ಸುಲಭವಾಗುತ್ತಿರಲಿಲ್ಲ. ಎಲ್ಲಾ ಅಭಿಮಾನಿಗಳಿಗೂ 3ನೇ ವರ್ಷದ ಶುಭಾಶಯ ಎಂದು ಬರೆದಿದ್ದಾರೆ. 

ಅರವಿಂದ್ ಮತ್ತು ದಿವ್ಯಾ ಇಬ್ಬರ ಸೋಶಿಯಲ್ ಮೀಡಿಯಾದಲ್ಲಿ (social media) 3ನೇ ವರ್ಷದ ಸಂಭ್ರಮ ನೋಡಿದ ಅಭಿಮಾನಿಗಳು ನೀವಿಬ್ಬರೂ ಆದಷ್ಟು ಬೇಗ ಮೂರು ಆಗಬೇಕು.. ಹಾಗಾಗಿ ಮದುವೆ ಮಾಡಿಕೊಂಡು, ಆ ಆಸೆಯನ್ನು ಆದಷ್ಟು ಬೇಗನೇ ನೆರವೇರಿಸಿ. ಮೂರು ಅಲ್ಲಾ ನೂರು ವರ್ಷ ಆದರೂ, ನೀಮ್ಮಿಬ್ಬರ ಪ್ರೀತಿ ಮಾಸಲ್ಲ. ನಿಮ್ಮ ಪ್ರೀತಿ ಎಷ್ಟೋ ಜನಕ್ಕೆ ಆದರ್ಶವನ್ನು ನೀಡಲಿ ಎಂದು ಹಾರೈಸಿದ್ದಾರೆ. 

Divya uruduga

ಮತ್ತೊಬ್ಬರು ಪ್ಲೀಸ್ ಅರ್ವಿಯಾ ಮುಂದಿನ ವರ್ಷದಿಂದ ನಾವು ನಿಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಬೇಕು. ಇದಕ್ಕಾಗಿಯೇ ನಾವು ಕಳೆದ 3 ವರ್ಷಗಳಿಂದ ಕಾಯ್ತ ಇದ್ದೀವಿ. ನಿಮ್ಮ ಮೂರು ವರ್ಷದ ಡೇಟಿಂಗ್ ತುಂಬಾನೆ ಅದ್ಭುತವಾಗಿತ್ತು ಅನ್ನೋದು ಗೊತ್ತು, ಇನ್ನು ಮುಂದಿನ ವರ್ಷದಿಂದ ಇದನ್ನ ಸೆಲೆಬ್ರೇಟ್ ಮಾಡೋದಕ್ಕೆ ಹೊಸ ರೀಸನ್ ಸಿಗಲಿ, ಕಾಯ್ತ ಇದ್ದೀವಿ ಬೇಗ ಮದುವೆಯಾಗಿ ಎಂದಿದ್ದಾರೆ. 
 

ಅರ್ವಿಯಾ ಮತ್ತು ಅರ್ವಿಯನ್ಸ್ ಗಳ‌ ಸುಮಧುರ ಪಯಣ ನೂರು ವರ್ಷಗಳ ವರೆಗೂ ಸಾಗುತಿರಲಿ ಎಂದು ಮತ್ತೊಬ್ಬರು ಹಾರೈಸಿದರೆ ಇನ್ನೊಬ್ಬರು ಇನ್ನೂ ಕೂಡ ನಿಮ್ಮ ಸೀಸನ್ ಅನ್ನು ರೀಪೀಟ್ ನೋಡ್ತಾ ಇದ್ದೀನಿ, ನಿಮ್ಮ ಇಬ್ರನ್ನು ಮತ್ತೆ ಮತ್ತೆ ನೋಡೋಕೆ ಚೆನ್ನ, ಕ್ಯೂಟ್ ಕಪಲ್ಸ್ ಎಂದಿದ್ದಾರೆ. 
 

Divya Uruduga

ಮತ್ತೊಬ್ಬ ಅಭಿಮಾನಿ ನಿವೀಬ್ಬರೂ ಜಸ್ಟ್ ಆಸಮ್. ನೀವಿಬ್ಬರು ರಿಯಲ್ ಮತ್ತು ನೈಜವಾಗಿದ್ದೀರಿ, ಹಾಗಾಗಿ ನಿಮ್ಮಿಬ್ಬರನ್ನು ಲವ್ ಮಾಡೋರು ಜಾಸ್ತಿ. ನಿಮ್ಮಿಬ್ಬರ ಜರ್ನಿ ಹೀಗೆ ಸಾಗಲಿ, ನಿಮಗೆಲ್ಲಾ ಯಶಸ್ಸು ಸಿಗಲಿ, ನಿಮ್ಮಿಬ್ಬರನ್ನು ನಾವು, ಪ್ರತಿದಿನ, ಸೆಲೆಬ್ರೇಟ್ ಮಾಡ್ತೀವಿ. ಲವ್ ಯೂ ಬೋತ್ ಎಂದಿದ್ದಾರೆ. 

Latest Videos

click me!