ಅಂತರಪಟ; ಮಂಡಿಸೇವೆ ಮಾಡೋದು ನೋಡಿ ಜನ ಕಣ್ಣಿರಿಡ್ತಿದ್ರೆ, ಆರಾಧನಾ ಥೈಲ್ಯಾಂಡಲ್ಲಿ ಮಸ್ತಿ ಮಾಡ್ತಿದ್ದಾರೆ!

Published : Jul 12, 2024, 03:22 PM IST

ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸುತ್ತಿರುವ ತನ್ವಿಯಾ ಬಾಲರಾಜ್ ಥೈಲ್ಯಾಂಡ್ ನಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.  

PREV
17
ಅಂತರಪಟ; ಮಂಡಿಸೇವೆ ಮಾಡೋದು ನೋಡಿ ಜನ ಕಣ್ಣಿರಿಡ್ತಿದ್ರೆ, ಆರಾಧನಾ ಥೈಲ್ಯಾಂಡಲ್ಲಿ ಮಸ್ತಿ ಮಾಡ್ತಿದ್ದಾರೆ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸುತ್ತಿರುವ ತನ್ವಿಯಾ ಬಾಲರಾಜ್ (Thanviya Balraj) ಸದ್ಯ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಪ್ರವಾಸ ಮಾಡ್ತಿದ್ದಾರೆ. 
 

27

ಹೌದು, ಅಂತರಪಟದಲ್ಲಿ ಆರಾಧನಾ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿ ತನ್ವಿಯಾ ತಮ್ಮ ಸ್ನೇಹಿತರ ಜೊತೆ ಥೈಲ್ಯಾಂಡ್ (Thailand) ಪ್ರವಾಸ ಮಾಡಿ ಬಂದಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

37

ಸೀರಿಯಲ್ ನಲ್ಲಿ ತಮ್ಮ ಸಂಸಾರ ಚೆನ್ನಾಗಿರಲಿ ಎಂದು ಅಮಲಾ ಕುತಂತ್ರವನ್ನು ಮೀರಿ ಆರಾಧನಾ ಮಂಡಿ ಸೇವೆ ಮಾಡ್ತಿದ್ದಾರೆ, ನೋವು ಅನುಭವಿಸಿ ಆರಾಧನಾ ಮಂಡಿ ಸೇವೆ ಮಾಡೋದನ್ನ ನೋಡಿ ವೀಕ್ಷಕರು ಕಣ್ಣಿರು ಇಡುತ್ತಿದ್ರೆ, ನಟಿ ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

47

ಥೈಲ್ಯಾಂಡ್ ನ ಸುಂದರ ತಾಣಗಳಾದ ಬ್ಯಾಂಕಾಕ್, ಪಟ್ಟಾಯ, ಫುಕೇಟ್ ಸೇರಿ ಹಲವು ಪ್ರವಾಸಿ ತಾಣಗಳಿಗೆ ತಮ್ಮ ಸ್ನೇಹಿತರ ಜೊತೆ ಭೇಟಿ ನೀಡಿರುವ ನಟಿ, ಅಲ್ಲಿನ ಸುಂದರ ಫೋಟೋಗಳು ಮತ್ತು ಸ್ನೇಹಿತರ ಜೊತೆಗಿನ ಮಸ್ತಿಯ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

57

ತನ್ವಿಯಾ ಕ್ರೀಂ ಬಣ್ಣದ ಲೇಸ್ ಡ್ರೆಸ್ ಫೋಟೋಗಳನ್ನು ಶೇರ್ ಮಾಡಿದ್ದು, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. ಅಭಿಮಾನಿಗಳು ಬಾರ್ಬಿ ಡಾಲ್, ಪ್ರೆಟಿ, ಗಾರ್ಜಿಯಸ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ರು ಮೇಡಂ ನೀವು ನೀವಾಗಿರಿ ಅಂತಾನು ಹೇಳಿದ್ದಾರೆ. 
 

67

ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದೋಳು, ಸೀರಿಯಲ್ ನ ನಾಯಕ ನಟಿಯಾಗೋವರೆಗೂ ತುಂಬಾ ಕಷ್ಟಪಟ್ಟು ಮುಂದೆ ಬಂದಿದ್ದ ಮಿಡಲ್ ಕ್ಲಾಸ್ ಹುಡುಗಿ ತನ್ವಿಯಾ, ಈಗಂತೂ ಅಂತರಪಟದ ಆರಾಧನಾ ಆಗಿ ಕರ್ನಾಟಕದ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 
 

77

ಸೋಶಿಯಲ್ ಮಿಡೀಯಾದಲ್ಲಿ ಆಕ್ಟೀವ್ ಆಗಿರುವ ನಟಿ ತನ್ವಿಯಾ ಹೆಚ್ಚಾಗಿ ತಮ್ಮ ಸೀರಿಯಲ್ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಮಾಡುವ ವಿಡಿಯೋಗಳನ್ನು, ಫ್ರೆಂಡ್ಸ್ ಜೊತೆಗಿನ ಟ್ರಾವೆಲಿಂಗ್ ಫೋಟೋ, ಫೋಟೋ ಶೂಟ್ ಮಾಡಿಸಿಕೊಂಡದ್ದನ್ನೆಲ್ಲಾ ಹಂಚಿಕೊಳ್ಳುತ್ತಲೇ ಇರುತ್ತಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories