ಅಣ್ಣಯ್ಯ ಧಾರಾವಾಹಿ ಅರ್ಧಕ್ಕೆ ಬಿಟ್ಟು 'ಬಿಗ್ ಬಾಸ್ ಮನೆಗೆ ಹೊರಟ' ಜಿಮ್ ಸೀನ! ನಟ ಸುಷ್ಮಿತ್ ಜೈನ್ ಹೇಳಿದ್ದೇನು?

Published : Aug 13, 2026, 11:53 AM IST

'ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್ ಸೀನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಸುಷ್ಮಿತ್ ಜೈನ್, ಧಾರಾವಾಹಿಯಿಂದ ಹೊರನಡೆದಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ, ಅವರು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಬಲವಾಗಿ ಊಹಿಸುತ್ತಿದ್ದಾರೆ.

PREV
16

ಅಣ್ಣಯ್ಯ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಆಗಿದ್ದ ಯುವ ನಟ ಸುಷ್ಮಿತ್ ಜೈನ್ ಅವರು ಇದೀಗ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದಾರೆ. ಗುಂಡಮ್ಮನ ಗಂಡನಾಗಿ ಪಿಂಕಿಯ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಜಿಮ್ ಸೀನ ಇದೀಗ ಏಕಾಏಕಿ ಧಾರಾವಾಹಿ ತೊರೆದಿದ್ದು, ಇನ್ನುಮುಂದೆ ಬರುವ ಹೊಸ ನಟನಿಗೂ ನಿಮ್ಮ ಬೆಂಬಲ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಧಾರಾವಾಹಿ ಬಿಟ್ಟು ಅರ್ಧಕ್ಕೆ ಹೋಗುವಂತಹ ಕಾರಣವೇನಿತ್ತು ಎಂದು ಹುಡುಕಾಡಿದರೆ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.

26

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜನ ಸಾಮಾನ್ಯರಿಗೂ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಇರುವುದರಿಂದ ಅವರಿಗೆ ಅವಕಾಶ ನೀಡಲು ಹಲವು ಹಂತಗಳನ್ನು ಕಲರ್ಸ್ ಕನ್ನಡ ತಂಡವು ಮಾಡುತ್ತಿದೆ. ಇದೀಗ ಜನ ಸಾಮಾನ್ಯರ ಆಯ್ಕೆಯು ಮೂರು ಹಂತಗಳನ್ನು ದಾಟಿ ಅಗ್ನಿ ಪರೀಕ್ಷೆ ಹಂತವನ್ನು ತಲುಪಿದ್ದು, 10ಕ್ಕಿಂತ ಕಡಿಮೆ ಜನರನ್ನು ಮನೆಯೊಳಗೆ ಕಳಿಸಲು ಸಿದ್ಧತೆ ಮಾಡಲಾಗುತ್ತಿದೆ.

36

ಜನ ಸಾಮಾನ್ಯರ ಆಯ್ಕೆ ಒಂದು ಕಡೆ ನಡೆಯುತ್ತಿದ್ದರೆ ಸೆಲೆಬ್ರಿಟಿಗಳು ಯಾರಾರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈ ಲೆಕ್ಕಾಚಾರದಲ್ಲಿ ಈವರೆಗೆ ಕಾಣಿಸಿಕೊಳ್ಳದ ಸುಷ್ಮತ್ ಜೈನ್ ಇದೀಗ ಧಾರಾವಾಹಿ ಅರ್ಧಕ್ಕೆ ಬಿಟ್ಟು ಹೊರನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಒಂದು ವೇಳೆ ಸುಷ್ಮಿತ್ ಜೈನ್ ಅವರು ಬಿಗ್ ಬಾಸ್ ಮನೆಗೆ ಬಂದಲ್ಲಿ ಹಿಂದಿನ ಸೀಸನ್‌ನ ಸೂರಜ್‌ ಸಿಂಗ್ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

46

ಸುಷ್ಮಿತ್ ಜೈನ್ ಇನ್ನೂ ಯುವನಟ ಆಗಿದ್ದು, ಕಟ್ಟುಮಸ್ತಾದ ದೇಹವನ್ನಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವಂತಹ ಟಾಸ್ಕ್ ಹಾಗೂ ಲವ್ ಗೇಮ್‌ಗಳಿಗೂ ಹೇಳಿ ಮಾಡಿಸಿದ ವ್ಯಕ್ತಿತ್ವವಾಗಿದೆ. ಇನ್ನು ಅಣ್ಣಯ್ಯ ಧಾರಾವಾಹಿಯಲ್ಲಿ ಪಿಂಕಿ ಜೊತೆಗೆ ಲವರ್ ಬಾಯ್ ಆಗಿ ಕಾಣಿಸಿಕೊಂಡ ಜಿಮ್ ಸೀನ ಕೊನೆಗೆ ಹುಡುಗಿ ಕೈಕೊಟ್ಟು ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಂಡು ಹೋಗಿದ್ದಾಳೆ.

56

ಇದರಿಂದ ಹಳೆ ಹೆಂಡ್ತಿ ಪಾದವೇ ಗತಿ ಎನ್ನುವಂತೆ ಗುಂಡಮ್ಮನಿಗೆ ಒಳ್ಳೆಯ ಗಂಡನಾಗಿ ಜೀವನ ಮಾಡಲು ಮುಂದಾಗುತ್ತಾನೆ. ಇಂತಹ ಸಂದರ್ಭದಲ್ಲಿ ದಿಢೀರನೆ ಧಾರಾವಾಹಿ ಬಿಟ್ಟು ಹೊರಗೆ ಹೋಗುತ್ತಿರುವುದಾಗಿ ಘೋಷಿಸಿದ್ದಾರೆ.

66

ಹೊಸಬರಿಗೂ ಪ್ರೋತ್ಸಾಹ ನೀಡುವಂತೆ ಮನವಿ:

ಧಾರಾವಾಹಿ ತೊರೆಯುವ ಮುನ್ನ ಜೀ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸುಷ್ಮಿತ್ ಜೈನ್ ಅವರು 'ನಾನು ವೈಯಕ್ತಿಕ ಕಾರಣದಿಂದ ಇನ್ನುಮುಂದೆ ಜಿಮ್ ಸೀನ ಪಾತ್ರವನ್ನು ಮುಂದುವರಿಸಲು ಆಗುತ್ತಿಲ್ಲ. ಹೀಗಾಗಿ ಮುಂದೆ ನನ್ನ ಪಾತ್ರವನ್ನು ಯಾರು ಹೊಸಬರು ಮಾಡಲು ಬರುತ್ತಾರೋ ಅವರಿಗೂ ಅದೇ ಪ್ರೀತಿ, ಬೆಂಬಲ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ' ಎಂದು ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories