₹23 ಲಕ್ಷದ MG Windsor ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿಗೆ ಬಂದ ನೆಗೆಟಿವ್ ಕಾಮೆಂಟ್‌ಗಳಿಗೆ ತಾರೇಶ್, “ನಮ್ಮ ಕಷ್ಟ ನಮಗೆ ಗೊತ್ತು” ಎಂದು ಖಡಕ್ ಉತ್ತರ ನೀಡಿದ್ದಾರೆ. ಹಾಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಯೂಟ್ಯೂಬರ್ ಜೋಡಿಯೊಂದು ಇತ್ತೀಚೆಗೆ ಸುಮಾರು ₹23 ಲಕ್ಷ ಮೌಲ್ಯದ MG Windsor ಎಲೆಕ್ಟ್ರಿಕ್ ಕಾರು ಖರೀದಿಸಿದೆ. ಆದರೆ ಕಾರು ಖರೀದಿಸಿದ ಬಳಿಕ ಕೆಲವರು, ₹19 ಲಕ್ಷ ಸಾಲ ಮಾಡದೆ ಕ್ಯಾಶ್ ಕೊಟ್ಟು ಕಾರು ಖರೀದಿಸಿದ್ದಾರೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿರುವುದು ಈ ಜೋಡಿಯ ಬೇಸರಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ತಾರೇಶ್, ನಮ್ಮ ಕಷ್ಟ ಏನು ಅನ್ನೋದು ನಮಗೆ ಗೊತ್ತು. ಒಡವೆ ಇಟ್ಟು, ಸಾಲ ಮಾಡಿ ಕಾರು ತೆಗೆದುಕೊಂಡಿದ್ದೇವೆ ಎಂದು ತಮ್ಮ ಕಾರು ಖರೀದಿಯ ಹಿಂದಿನ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ .
₹23 ಲಕ್ಷದ ಕಾರು ಖರೀದಿಸಿದ ಜೋಡಿ
ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹಲವು ಆಧುನಿಕ ಫೀಚರ್‌ಗಳನ್ನು ಹೊಂದಿರುವ MG Windsor EV ಅನ್ನು ಈ ಯೂಟ್ಯೂಬರ್ ಜೋಡಿ ಖರೀದಿಸಿದೆ. ಕಾರು ಖರೀದಿಸಿ ಸುಮಾರು ಮೂರು ತಿಂಗಳಾಗಿದ್ದು, ಮೊದಲ ಸರ್ವಿಸ್ ಕೂಡ ಪೂರ್ಣಗೊಂಡಿದೆ. ಇದೀಗ ತಮ್ಮ ಹೊಸ ಕಾರಿನ ಅನುಭವ, ಕಂಫರ್ಟ್, ಫೀಚರ್‌ಗಳು ಸೇರಿದಂತೆ ಸಂಪೂರ್ಣ ರಿವ್ಯೂ ಅನ್ನು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.
25
MG ಕಾರು ತಗೋಬೇಕು ಅನ್ನೋದು ಮೊದಲಿನಿಂದಲೂ ಕನಸು
ಕಾರಿನ ಬಗ್ಗೆ ಮಾತನಾಡಿರುವ ತಾರೇಶ್, MG ಬ್ರ್ಯಾಂಡ್ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿತ್ತು ಎಂದು ಹೇಳಿದ್ದಾರೆ. ಕೆಲಸಕ್ಕೆ ಹೋಗುವ ದಾರಿಯಲ್ಲಿ MG ಶೋರೂಮ್ ಕಾಣಿಸುತ್ತಿತ್ತು. ಪ್ರತಿಬಾರಿ ಅದನ್ನು ನೋಡಿದಾಗ, ಒಂದು ದಿನ MG ಕಾರು ತೆಗೆದುಕೊಳ್ಳಬೇಕು” ಎಂದುಕೊಳ್ಳುತ್ತಿದ್ದೆವು. ಆದರೆ ಇದೇ ಕಾರನ್ನು ಖರೀದಿಸುತ್ತೇವೆ ಎಂಬ ಯಾವುದೇ ಯೋಜನೆ ಇರಲಿಲ್ಲ. ಇದು ಅನಿರೀಕ್ಷಿತವಾಗಿ ಕೈಗೂಡಿದ ಕನಸು ಎಂದು ತಾರೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಕಾರಿನ ಸೀಟ್‌ಗಳು ಹಾಗೂ ಕಂಫರ್ಟ್ ಬಗ್ಗೆಯೂ ತಾರೇಶ್ ಅವರ ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರಿಗಾಗಿ ಅಮ್ಮನ ಒಡವೆ ಕೂಡ ಇಟ್ಟಿದ್ದರು
ಹೊಸ ಕಾರಿನ ಖರೀದಿಯ ಹಿಂದೆ ತಮ್ಮ ಕುಟುಂಬದ ದೊಡ್ಡ ಹೋರಾಟವಿದೆ ಎಂದು ತಾರೇಶ್ ಭಾವುಕರಾಗಿ ಹೇಳಿದ್ದಾರೆ. ತಮ್ಮ ಹಳೆಯ ಸ್ವಿಫ್ಟ್ ಕಾರನ್ನು ಕೇವಲ ₹4 ಲಕ್ಷಕ್ಕೆ ಮಾರಾಟ ಮಾಡಬೇಕಾಯಿತು. ಕಾರು ಖರೀದಿಗೆ ಹಣ ಹೊಂದಿಸಲು ಅಮ್ಮನ ಒಡವೆಗಳನ್ನು ಕೂಡ ಇಡಬೇಕಾಯಿತು ಎಂದು ತಿಳಿಸಿದ್ದಾರೆ. ಕಾರು, ಇಂಟೀರಿಯರ್ ಹಾಗೂ ಇತರ ಖರ್ಚುಗಳನ್ನು ಸೇರಿಸಿದರೆ ಒಟ್ಟಾರೆ ಸುಮಾರು ₹25 ಲಕ್ಷದಷ್ಟು ಹಣ ಖರ್ಚಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಹೊರಗಿನಿಂದ ನೋಡಿದವರಿಗೆ ಇದು ಸುಲಭವಾಗಿ ಖರೀದಿಸಿದ ಕಾರಿನಂತೆ ಕಾಣಬಹುದು. ಆದರೆ ಅದರ ಹಿಂದೆ ತಮ್ಮ ಕುಟುಂಬದ ಹಣಕಾಸಿನ ಕಷ್ಟ ಮತ್ತು ಹಲವು ತ್ಯಾಗಗಳಿವೆ ಎಂಬುದು ತಾರೇಶ್ ಮಾತಿನ ಅರ್ಥ.
35
ಕ್ಯಾಶ್ ಕೊಟ್ಟು ಕಾರು ತಗೊಂಡಿದ್ದಾರೆ ಅಂತ ವಿಡಿಯೋ ಮಾಡಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಾರಿನ ಬಗ್ಗೆ ಬಂದಿರುವ ಕೆಲವೊಂದು ಕಾಮೆಂಟ್‌ಗಳು ಮತ್ತು ವಿಡಿಯೋಗಳ ಬಗ್ಗೆಯೂ ತಾರೇಶ್ ಮಾತನಾಡಿದ್ದಾರೆ. ಯಾರೋ ಒಬ್ಬರು ವಿಡಿಯೋ ಮಾಡಿ ₹19 ಲಕ್ಷ ಲೋನ್ ಮಾಡದೇ ಕ್ಯಾಶ್ ಕೊಟ್ಟು ಕಾರು ತೆಗೆದುಕೊಂಡಿದ್ದಾರೆ ಅಂತ ಹಾಕಿದ್ದಾರೆ. ನಮಗೆ ಗೊತ್ತು ನಮ್ಮ ಕಷ್ಟ ಏನು ಅಂತ. ನಾವು ಒಡವೆ ಇಟ್ಟು, ಲೋನ್ ಮಾಡಿ ಕಾರು ತಗೊಂಡಿದ್ದು ಎಂದು ಅವರು ಹೇಳಿದ್ದಾರೆ.
45
ನೆಗೆಟಿವ್ ಕಮೆಂಟ್ಸ್‌ಗಳಿಂದ ದೂರವಿರುವುದು ಹೇಗೆ?
ನಾವು ಎಷ್ಟೇ ಪಾಸಿಟಿವ್ ಆಗಿರಲು ಪ್ರಯತ್ನಿಸಿದರೂ, ಒಂದು ಸಣ್ಣ ನೆಗೆಟಿವ್ ಕಮೆಂಟ್ ನಮ್ಮ ಇಡೀ ದಿನದ ನೆಮ್ಮದಿಯನ್ನು ಕೆಡಿಸಬಹುದು. "ನಾವು ಮಾಡ್ತಿರೋದು ತಪ್ಪಾ?", "ಜನ ಯಾಕೆ ಈ ರೀತಿ ಮಾತನಾಡುತ್ತಾರೆ?" ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಲು ಪ್ರಾರಂಭಿಸುತ್ತವೆ. ಸ್ಕ್ರೀನ್‌ನಿಂದ ದೂರವಿರಿ: ನೆಗೆಟಿವ್ ಕಮೆಂಟ್ ಕಂಡ ತಕ್ಷಣ ಫೋನ್ ಪಕ್ಕಕ್ಕಿಟ್ಟು ನಿಮ್ಮ ಕೆಲಸದತ್ತ ಗಮನಹರಿಸಿ.
ಪ್ರತಿಕ್ರಿಯಿಸದಿರಿ: ಪ್ರತಿಯೊಂದು ಕಾಮೆಂಟ್‌ಗೂ ಉತ್ತರ ನೀಡುತ್ತಾ ಕೂತರೆ ನಮ್ಮ ಶಕ್ತಿ ಮತ್ತು ಸಮಯ ಎರಡೂ ಪೋಲಾಗುತ್ತದೆ. ಅವಾಯ್ಡ್ ಮಾಡುವುದನ್ನು ಕಲಿಯಿರಿ: ಅಂತಹ ಕಮೆಂಟ್ಸ್‌ಗಳನ್ನು ಆದಷ್ಟು ನಿರ್ಲಕ್ಷಿಸುವುದೇ ಮನಸ್ಸಿನ ಶಾಂತಿಗೆ ಉತ್ತಮ ಮಾರ್ಗ. ಎಂದು ಹೇಳಿದ್ದಾರೆ, ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ.
55
ಕಂಟೆಂಟ್ ಕ್ರಿಯೇಟರ್ಸ್‌ನಿಂದ ವೀಕ್ಷಕರಲ್ಲಿ ಒಂದು ಸಣ್ಣ ವಿನಂತಿ
ನಾವು ನಿಯತ್ತಾಗಿ, ಪ್ರಾಮಾಣಿಕವಾಗಿ ಮುನ್ನಡೆಯುತ್ತಿರುವಾಗ ಬರುವ ಅನಗತ್ಯ ಟೀಕೆಗಳು ಮನಸ್ಸಿಗೆ ಆಳವಾಗಿ ತಾಗುತ್ತವೆ. ನಿಮಗೆ ಒಬ್ಬರ ವಿಡಿಯೋ ಅಥವಾ ಕೆಲಸ ಇಷ್ಟವಾಗದಿದ್ದರೆ, ದಯವಿಟ್ಟು ಅವರನ್ನು ಡಿಮೋಟಿವೇಟ್ ಮಾಡಲು ಹೋಗಬೇಡಿ. ನೆಗೆಟಿವ್ ಕಮೆಂಟ್ ಹಾಕುವುದರಿಂದ ನಿಮಗೂ ಏನೂ ಸಿಗುವುದಿಲ್ಲ, ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.