ನನ್ನ ತಪ್ಪು ಅರ್ಥವಾಗಿದೆ: ವಿಚ್ಛೇದನದ ಕುರಿತು ನಟಿ ಅಂಕಿತಾ ಲೋಖಂಡೆ ಮಾತು

Published : Feb 08, 2024, 04:56 PM IST

ನಟಿ  ಅಂಕಿತಾ ಲೋಖಂಡೆ (Ankita Lokhande) ಮತ್ತು ಪತಿ ವಿಕ್ಕಿ ಜೈನ್ (Vicky Jain) ಬಿಗ್ ಬಾಸ್ 17 ಅನ್ನು ಒಟ್ಟಿಗೆ ಪ್ರವೇಶಿಸಿದರು. ಅವರು ತಮ್ಮ ಜಗಳ ಮತ್ತು ವಾದಗಳಿಂದ ಸುದ್ದಿಅಗಿದ್ದರು.  ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬಾಸ್ 17 ಶೋನಲ್ಲಿ ವಿಚ್ಛೇದನ ಪಡೆಯುವ ಬಗ್ಗೆ ಸುಳಿವು ನೀಡಿದ್ದ  ಅಂಕಿತಾ ಲೋಖಂಡೆ  ವಿಚ್ಛೇದನದ ಕುರಿತು ಅಂಕಿತಾ ಲೋಖಂಡೆ ಮೌನ ಮುರಿದಿದ್ದಾರೆ.

PREV
19
ನನ್ನ ತಪ್ಪು ಅರ್ಥವಾಗಿದೆ:  ವಿಚ್ಛೇದನದ ಕುರಿತು ನಟಿ ಅಂಕಿತಾ ಲೋಖಂಡೆ  ಮಾತು

ದಂಪತಿಗಳಾದ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ಬಿಗ್ ಬಾಸ್ 17 ರ ಭಾಗವಾಗಿದ್ದರು. ಈ ಸಮಯದಲ್ಲಿ ಜೋಡಿ ನಡುವಿನ ಜಗಳ ಮತ್ತು ವಿವಾದಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು ಈಗ   ಅಂಕಿತಾ ಅವರು ವಿಕ್ಕಿಯಿಂದ ಬೇರೆಯಾಗುವ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ.

29

ಸುದ್ದಿ ಸಂಸ್ಥೆ  ಜೊತೆ ಮಾತನಾಡಿದ ನಟಿ, ಅವರು ಹೆಚ್ಚು ಸಂವೇದನಾಶೀಲರಾಗಿರಬೇಕಿತ್ತು. ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗಿನ ಸಂಬಂಧವು ಅವರು ಶೋಗೆ ಹೋದ ನಂತರ ಗಟ್ಟಿಯಾಗಿದೆ ಎಂದು ಭಾವಿಸುತ್ತೇನೆ ಎಂದು ಅಂಕಿತಾ ಹೇಳಿದರು.

39

'ನಾವು ವರ್ಷಗಳ ಕಾಲ ಸ್ನೇಹಿತರಾಗಿ ನಂತರ ಮದುವೆಯಾಗಿದ್ದೇವೆ. ನಾನು ಕ್ಯಾಮೆರಾದ ಮುಂದೆ ಇದ್ದಾಗ, ಮಾತನಾಡುವಾಗ ನಾನು ಏನು ಮಾತನಾಡುತ್ತೇನೆ ಎಂಬುದರ ಬಗ್ಗೆ ತಿಳಿದಿರಬೇಕು. ನಾನು ಇನ್ನೂ ಕಲಿಯುತ್ತಿದ್ದೇನೆ. ನಮ್ಮ ಸಂಬಂಧವು ಅಷ್ಟು ಬಲವಾಗಿರದಿದ್ದರೆ, ನಾವು ಜಗಳವಾಡದೇ ಇರಬಹುದಾಗಿತ್ತು' ಎಂದು ಅಂಕಿತಾ ಹೇಳಿದ್ದಾರೆ.

49

ವಿಕ್ಕಿ ಜೊತೆಗಿನ ಸಂಬಂಧ ಈಗ ಗಟ್ಟಿಯಾಗಿದೆ ಎನ್ನುತ್ತಾರೆ ಅಂಕಿತಾ.'ಒಂದೇ ವ್ಯತ್ಯಾಸವೆಂದರೆ ಟಿವಿಯಲ್ಲಿ ನಮ್ಮ ಜಗಳಗಳು ಹೊರಬಂದವು, ಇದು ಇತರ ಸಾಮಾನ್ಯ ದಂಪತಿಗಳ ವಿಷಯದಲ್ಲಿ ಸಂಭವಿಸುವುದಿಲ್ಲ. ಆದರೆ ಇದೆಲ್ಲದರಿಂದ ನಮ್ಮ ಸಂಬಂಧವು ಗಟ್ಟಿಯಾಗಿದೆ. ನಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆಂದು ನನಗೆ ಅರ್ಥವಾಗುತ್ತಿತ್ತು ಮತ್ತು ಅವನು ಅವನು ಎಲ್ಲಿ ತಪ್ಪಾಗಿದ್ದಾನೆಂದು ಅರ್ಥಮಾಡಿಕೊಳ್ಳಬಹುದು. ನಾವು ಮೊದಲಿಗಿಂತ ಬಲಶಾಲಿಯಾಗಿದ್ದೇವೆ' ಎಂದಿದ್ದಾರೆ ಅಂಕಿತಾ

59

ಅಂಕಿತಾ  ಪತಿ-ಉದ್ಯಮಿ ವಿಕ್ಕಿ ಜೈನ್ ಜೋಡಿ ಬಿಗ್‌ಬಾಸ್‌ನಲ್ಲಿ ಜಗಳ ಮತ್ತು ವಾದಗಳಿಂದಾಗಿ ಸುದ್ದಿ ಮಾಡಿತ್ತು. ಬಿಗ್‌ ಬಾಸ್‌ ಮೆನಯಲ್ಲಿ ದಂಪತಿ ತಮ್ಮ ಸಂಬಂಧದಲ್ಲಿ ಹಲವಾರು ಏರಿಳಿತಗಳನ್ನು ಅನುಭವಿಸಿದರು ಮತ್ತು ಈ ಕಾರಣದಿಂದ ನಿರಂತರವಾಗಿ ಅವರನ್ನು  ಜಡ್ಜ್‌ ಮಾಡಲಾಯಿತು. 

69

ಗ್ರ್ಯಾಂಡ್ ಫಿನಾಲೆಗೆ ಮೊದಲು ವಾರದ ಮಧ್ಯದ ಎಲಿಮಿನೇಷನ್‌ನಲ್ಲಿ ವಿಕ್ಕಿ ಕಾರ್ಯಕ್ರಮದಿಂದ ಔಟ್‌ ಆದರು . ನಂತರ ಅಂಕಿತಾ ಕೂಡ ಎಲಿಮಿನೇಟ್‌ ಆದರು. ಅಂಕಿತಾ ಮೂರನೇ ರನ್ನರ್ ಅಪ್ ಆಗಿದ್ದರು.

79

ಮುಂದಿನ ದಿನಗಳಲ್ಲಿ ಅಕಿಂತಾ ಅವರು ವೀರ್‌  ಸಾವರ್ಕರ್ ಅವರ ಜೀವನಚರಿತ್ರೆಯಾದ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಲನಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಣದೀಪ್ ಹೂಡಾ ನಟಿಸಿದ್ದು, ಅವರೇ ನಿರ್ದೇಶನ ಮಾಡಿದ್ದಾರೆ. ಚಿತ್ರ ಮಾರ್ಚ್ 22 ರಂದು ತೆರೆಗೆ ಬರಲಿದೆ.

89

ಟಿವಿ ಕಾರ್ಯಕ್ರಮಗಳ ಹೊರತಾಗಿ, ಅಂಕಿತಾ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಉದಾಹರಣೆಗೆ ಮಣಿಕರ್ಣಿಕಾ ಮತ್ತು ಬಾಘಿ 3.ಆದರೆ ಅಂಕಿತಾ ಅವರು ಧಾರಾವಾಹಿ ಪವಿತ್ರ ರಿ‍ಷ್ತಾದಿಂದ ಖ್ಯಾತಿಗೆ ಏರಿದರು. 

 

99

2019 ರಲ್ಲಿ, ಅಂಕಿತಾ ಲೋಖಂಡೆ ವಿಕ್ಕಿ ಜೈನ್‌ ಜೊತೆಗಿನ ತಮ್ಮ ಸಂಬಂಧವನ್ನು ಘೋಷಿಸಿದರು ಮತ್ತು ಈ ಜೋಡಿ  ಡಿಸೆಂಬರ್ 14, 2021 ರಂದು ಮುಂಬೈನಲ್ಲಿ ವಿವಾಹವಾದರು.

Read more Photos on
click me!

Recommended Stories