ಏನ್ರೀ ಸ್ಟೈಲ್‌ ನಿಮ್ದು; ಶಾಲಿನಿ ವಿಚಿತ್ರ ಬ್ಲೌಸ್‌ ನೋಡಿ ನೆಟ್ಟಿಗರು ಶಾಕ್

First Published | Dec 6, 2022, 2:08 PM IST

ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಮಿಂಚಿಸುತ್ತಿರುವ ಶಾಲಿನಿ ಸತ್ಯನಾರಾಯಣ್. ಕ್ರಿಯೇಟಿವ್‌ ಲುಕ್‌ಗೆ ನೆಟ್ಟಿಗರು ಶಾಕ್....

ಕನ್ನಡ ಕಿರುತೆರೆ ಜನಪ್ರಿಯ ನಟಿ ಕಮ್ ನಿರೂಪಕಿ ಶಾಲಿನಿ ಸತ್ಯನಾರಾಯಣ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. 

150ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ದಾಟಿರುವ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿರುವುದು ಶಾಲಿನಿ ಧರಿಸುವ ಡಿಫರೆಂಟ್ ಸೀರೆ ಬ್ಲೌಸ್‌ಗಳು. 

Tap to resize

ಶಾಲಿನಿ ಧರಿಸುವ ಸೀರೆ ಬ್ಲೌಸ್‌ಗಳನ್ನು ಮೋನಿಷ್‌ ಎಂಬುವವರು ಡಿಸೈನ್ ಮಾಡುತ್ತಾರೆ. ಜನರಿಗೆ ಡಿಸೈನ್ ಅರ್ಥವಾಗಬೇಕೆಂದು ರೀಲ್ಸ್‌ ಮಾಡಿ ಅಪ್ಲೊಡ್ ಮಾಡುತ್ತಾರೆ. 

 'ನಿಮ್ಮ ಡಿಸೈನ್‌ಗಳಿಂದ ನಮ್ಮ ಮನೆಯಲ್ಲಿ ಹೆಂಗಸರು ಕಾಟ ಕೊಡುವುದಕ್ಕೆ ಶುರು ಮಾಡಿದ್ದಾರೆ. ದಯವಿಟ್ಟು ಪೋಸ್ಟ್ ಮಾಡಬೇಡಿ' ಎಂದು ಕೆಲವರು ಕಾಮೆಂಟ್ ಮಾಡಿದ್ದರು.

ಇನ್ನೂ ಕೆಲವರು 'ಏನ್ರಿ ನಿಮ್ಮ ಡಿಸೈನ್‌? ನಮಗೂ ಟ್ರೈ ಮಾಡಬೇಕು ಅನಿಸುತ್ತದೆ ಆದರೆ ನಮ್ಮ ಮನೆ ಗಂಡಸರು ಏನ್ ಅಂತಾರೆ ಅನ್ನೋ ಭಯ' ಎಂದಿದ್ದಾರೆ ಕೆಲವರು.

 ಕೊರೋನಾ ಸೋಂಕು ತಗುಲಿದ್ದಾಗ ಶಾಲಿನಿ ಕೆಲವು ದಿನಗಳ ಕಾಲ ಶೋಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಚೇತರಿಸಿಕೊಂಡು ಬಿಗ್ ಕಮ್ ಬ್ಯಾಕ್ ಮಾಡಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ 3 ಲಕ್ಷ 51 ಸಾವಿರ ಫಾಲೋವರ್ಸ್‌ ಹೊಂದಿರುವ ಶಾಲಿನಿ ಪ್ರತಿ ವಾರವೂ ಸೀರಿ ಮತ್ತು ಬ್ಲೌಸ್‌ ಡಿಸೈನ್‌ ಫೋಟೋ ಅಪ್ಲೋಡ್ ಮಾಡಿಲ್ಲ ಅಂದ್ರೆ ನೆಟ್ಟಿಗರು ಬೇಸರ ಮಾಡಿಕೊಳ್ಳುತ್ತಾರೆ.

Latest Videos

click me!