ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದೀಪಿಕಾ ದಾಸ್ : Unseen Photos ವೈರಲ್

Published : Mar 01, 2025, 11:04 AM ISTUpdated : Mar 01, 2025, 12:10 PM IST

ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಮೊದಲನೇ ವಿವಾಹ ವಾರ್ಷಿಕೋತ್ಸವದಲ್ಲಿ ಸಂಭ್ರಮದಲ್ಲಿದ್ದು, ಈ ಸುಂದರ ಪಯಣದ ನೀವೆಂದೂ ನೋಡಿರದ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.   

PREV
19
ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದೀಪಿಕಾ ದಾಸ್ : Unseen Photos ವೈರಲ್

ಕನ್ನಡ ಕಿರುತೆರೆಯಲ್ಲಿ ನಾಗಿಣಿಯಲ್ಲಿ ಬುಸುಗುಟ್ಟಿದ ಸುಂದರಿ ದೀಪಿಕಾ ದಾಸ್ (Deepika Das) ಇಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ನಟಿ ಮದುವೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

29

ಮದುವೆಯ ಫೋಟೋಗಳನ್ನು ಶೇರ್ ಮಾಡಿರುವ ದೀಪಿಕಾ It’s been a year for our adventures MARCH-PAST (1st )😉 journey. Happy ANNIVERSARY D ಎಂದು ಬರೆಯುವ ಮೂಲಕ, ಗಂಡನಿಗೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. 

39

ದೀಪಿಕಾ ದಾಸ್ ಕಳೆದ ವರ್ಷ ಅಂದ್ರೆ 2023 ರ ಮಾರ್ಚ್ 1ನೇ ತಾರೀಕಿನಂದು ಗೋವಾದಲ್ಲಿ ಕೇವಲ ಕುಟುಂಬದ ಸಮ್ಮುಖದಲ್ಲಿ ಮದುವೆಯಾದರು. ಇವರ ಮದುವೆ ಫೋಟೊಗಳು ಹೊರ ಬರುತ್ತಿದ್ದಂತೆ, ಸಿನಿಮಾ ಇಂಡಷ್ಟ್ರಿ ಶಾಕ್ ಆಗಿತ್ತು. 

49

ದೀಪಿಕಾ ದಾಸ್ ತಮ್ಮ ಬಹುಕಾಲದ ಗೆಳೆದ ದೀಪಕ್ ಗೌಡ (Deepak Gowda) ಅವರನ್ನು ಗೋವಾದಲ್ಲಿ ಬೀಚ್ ಸೈಡ್ ಡೆಸ್ಟಿನೇಶನ್ ವೆಡ್ಡಿಂಗ್ ಮೂಲಕ ಬೆರಳೆಣಿಕೆಯ ಕುಟುಂಬ, ಸ್ನೇಹಿತರ ಮಧ್ಯೆ ಮದುವೆಯಾಗಿದ್ದರು. ವಾರಗಳ ಬಳಿಕ ಬೆಂಗಳೂರಲ್ಲಿ, ಸೆಲೆಬ್ರಿಟಿಗಳಿಗಾಗಿ ಅದ್ಧೂರಿ ರಿಸೆಪ್ಶನ್ ಇಟ್ಟುಕೊಂಡಿದ್ದರು. 

59

ದೀಪಿಕಾ ದಾಸ್ ಪತಿ ದೀಪಕ್‌ ಗೌಡ ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮಿಯಾಗಿದ್ದಾರೆ. ದೀಪಿಕಾ ದಾಸ್ ಮತ್ತು ದೀಪಕ್‌ ಪರಸ್ಪರ ಪ್ರೀತಿಸಿ ಮದುವೆಯಾದವರು. ಇವರಿಬ್ಬರು ಆರಂಭದಲ್ಲಿ ಸ್ನೇಹಿತರಾಗಿದ್ದು, ಬಳಿಕ ಪ್ರೀತಿಸಿ ಮದುವೆಯಾಗಿದ್ದಾರೆ. 

69

ಮದುವೆಯ ಬಳಿಕ ಪ್ರೆಸ್ ಮೀಟ್ ನಲ್ಲಿ ನಟಿ ತಮ್ಮ ಗಂಡನನ್ನು ಪರಿಚಯಿಸುತ್ತಾ, ಇವರು ಬೇರೆ ರಾಜ್ಯದವರು ಅಲ್ಲ, ಅಪ್ಪಟ ಕನ್ನಡಿಗ ಎಂದಿದ್ದರು. ದೀಪಕ್‌ ಬೆಂಗಳೂರಿನವರಾಗಿದ್ದು, ರಿಯಲ್​ ಎಸ್ಟೇಟ್​ ಡೆವೆಲಪರ್​ ಆಗಿದ್ದಾರೆ. ಯುಕೆ ಮತ್ತು ದುಬೈನಲ್ಲಿ ದೀಪಕ್‌ ಸ್ಟಾರ್ಟಪ್​ ಹೊಂದಿದ್ದಾರೆ.
 

79

ಹಾಗಾಗಿಯೇ ಈ ಜೋಡಿ ಹೆಚ್ಚಾಗಿ ವಿದೇಶದಲ್ಲಿ ಟೂರ್ ಮಾಡುತ್ತಲೆ ಇರುತ್ತಾರೆ. ಅದರಲ್ಲೂ ಲಂಡನ್ ನಲ್ಲಿ ದೀಪಿಕಾ ದಾಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪತಿಯ ಬ್ಯುಸಿನೆಸ್ ಸಲುವಾಗಿ ಈ ಜೋಡಿ ಲಂಡನ್ ನಲ್ಲಿರುತ್ತಾರೆ. 
 

89

ಇನ್ನು ಇತ್ತೀಚೆಗೆ ನಟಿ ದೀಪಿಕಾ ತಮ್ಮ 29ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿ ಕೊಂಡಿದ್ದರು. ದೀಪಿಕಾಗೆ ಪತಿ ದೀಪಕ್ ಗೌಡ ಅದ್ಧೂರಿ ಸರ್ಪ್ರೈಸ್ ಕೊಟ್ಟಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. 
 

99

ದುಬೈನ ಡೆಸೆರ್ಟ್ ನಲ್ಲಿ ದೀಪಿಕಾಗಾಗಿ ಭರ್ಜರಿ ಪಾರ್ಟಿ ಅರೇಂಜ್ ಮಾಡಿದ್ದ ದೀಪಕ್, ಬಂಗಾರದ ಒಡವೆಗಳನ್ನು ಉಡುಗೊರೆಯಾಗಿ ಕೊಟ್ಟು, ಮದುವೆಯಾದ ಬಳಿಕದ ಮೊದಲ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದರು. ಇದನ್ನು ದೀಪಿಕಾ ರೊಮ್ಯಾಂಟಿಕ್ ಬರ್ತ್ ಡೇ ಎಂದು ಸಹ ಹೇಳಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories