ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ… ಒಂದು ಜೋಡಿ ನೇರವಾಗಿ ಬಿಗ್ ಬಾಸ್ ಮನೆಗೆ! ಯಾರಾಗ್ತಾರೆ ಆ ಜೋಡಿ?

First Published | Sep 28, 2024, 3:01 PM IST

ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದೆ.  ಈ ಫಿನಾಲೆಯ ದೊಡ್ಡ ಟ್ವಿಸ್ಟ್ ಅಂದ್ರೆ ಈ ಬಾರಿ ಫಿನಾಲೆ ವೇದಿಕೆಯಲ್ಲಿ ಬಿಗ್ ಬಾಸ್ 11 ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗುತ್ತಿದ್ದು, ರಾಜಾ ರಾಣಿಯ ಒಂದು ಕಪಲ್ ನೇರವಾಗಿ ಬಿಗ್ ಬಾಸ್ ಮನೆಗೆ ಹಾರಲಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಈಗಾಗಲೇ ನಡೆದಿದ್ದು, ಇಂದು ಕಲರ್ಸ್ ವಾಹಿನಿಯಲ್ಲಿ ಕಾರ್ಯಕ್ರಮದ ಪ್ರಸಾರವಾಗಲಿದೆ. ಯಾರಾಗಲಿದ್ದಾರೆ ಈ ಸೀಸನ್ ನ ಬೆಸ್ಟ್ ರಾಜಾ ರಾಣಿ ಜೋಡಿ ಎಂದು ನೋಡೋದಕ್ಕೆ ವೀಕ್ಷಕರು ಕಾಯ್ತಿದ್ದಾರೆ. 
 

ರಾಜಾ ರಾಣಿ ಕಪಲ್ಸ್ ರಿಯಾಲಿಟಿ ಶೋ (Raja Rani Couple reality Show) ಮೂರು ವರ್ಷಗಳಿಂದ ನಡೆಯುತ್ತಿದ್ದು, ಈ ಬಾರಿ ಕಾರ್ಯಕ್ರಮಕ್ಕೆ ನಟಿ ತಾರಾ ಅನುರಾಧ, ಅದಿತಿ ಪ್ರಭುದೇವ ಹಾಗೂ ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದರು. ಹಾಗೆಯೇ ಅನುಪಮಾ ಗೌಡ (Anupama Gowda) ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದು, ಸೆಲೆಬ್ರಿಟಿ ಜೋಡಿಗಳ ಈ ಕಾರ್ಯಕ್ರಮ, ಭರ್ಜರಿ ಮನರಂಜನೆಯೊಂದಿಗೆ ಅದ್ಭುತವಾಗಿ ಮೂಡಿ ಬಂದಿತ್ತು. 
 

Tap to resize

ಪ್ರತಿ ಸೀಸನ್ ಗಳಲ್ಲಿ ರಾಜಾ ರಾಣಿ ಜೋಡಿಗಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಮಾಡಲಾಗುತ್ತಿತ್ತು, ಆದರೆ ಈ ಬಾರಿಯ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ರಾಜಾ ರಾಣಿ ಫಿನಾಗೆ ಫೈನಲ್‌ಗೆ ಹರ್ಷಿತಾ - ವಿನಯ್‌, ಮೇಘ -ಸಂಜಯ್, ಅರ್ಜುನ್ ಯೋಗಿ -ಸಾರಿಕಾ, ಲೋಕೇಶ್ ಬನಹಟ್ಟಿ-ರಚನಾ ದಶರಥ್‌, ಪ್ರಿಯಾಂಕಾ ಕಾಮತ್ - ಅಮಿತ್ ಜೋಡಿ ಆಯ್ಕೆಯಾಗಿದ್ದಾರೆ. 
 

ಇಂದು ನಡೆಯಲಿರುವ ಫಿನಾಲೆಯಲ್ಲಿ ಯಾವ ಜೋಡಿ ರಾಜಾ ರಾಣಿ ಕಿರೀಟ ಮುಡಿಗೇರಿಸಿಕೊಳ್ಳಲಿದೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದ್ದು, ಇಂದು ಸಂಜೆ ಆರು ಗಂಟೆಗೆ ಆರಂಭವಾಗಲಿರುವ ಈ ಗ್ರ್ಯಾಂಡ್ ಫಿನಾಲೆಯಲ್ಲಿ (Grand Finale) ಮತ್ತೊಂದು ದೊಡ್ಡದಾದ ಸರ್ಪ್ರೈಸ್ ಕೂಡ ಕಾದಿದೆ. ಅದಕ್ಕಾಗಿ ವೀಕ್ಷಕರು ಮತ್ತಷ್ಟು ಕಾತುರರಾಗಿದ್ದಾರೆ. 
 

ಹೌದು ಇವತ್ತಿನ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಸೀಸನ್ 11 ರ (Bigg Boss Season 11) ಸ್ಪರ್ಧಿಗಳಲ್ಲಿ ಕೆಲವರ ಹೆಸರು ರಿವೀಲ್ ಆಗಲಿದೆ, ಆ ಸ್ಪರ್ಧಿಗಳೇ ವೇದಿಕೆ ಮೇಲೆ ಬರೋ ಸಾಧ್ಯತೆ ಇದೆ. ಅವರಲ್ಲಿ ಯಾರು ಎಲ್ಲಿಗೆ ಹೋಗಬೇಕೆಂದು ತೀರ್ಮಾನ ಮಾಡುವ ಸಂಪೂರ್ಣ ಅಧಿಕಾರವನ್ನು ವೀಕ್ಷಕರಿಗೆ ನೀಡಿದೆ. 
 

ಈ ಬಾರಿಯ ಬಿಬಿಕೆ 11 ಸೀಸನ್ ತುಂಬಾನೆ ಅದ್ಭುತವಾಗಿದ್ದು, ಎರಡು ಹೌಸ್ ಗಳಲ್ಲಿ ಆಟ ನಡೆಯಲಿದೆ. ಒಂದು ಸ್ವರ್ಗ ಮತ್ತೊಂದು ನರಕ. ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗಬೇಕು ಮತ್ತು ಯಾವ ಸ್ಪರ್ಧಿ ನರಕಕ್ಕೆ ಹೋಗಬೇಕು ಅನ್ನೋದನ್ನು ವೀಕ್ಷಕರು ನಿರ್ಧರಿಸುತ್ತಾರೆ. ಹಾಗಾಗಿ ಈ ಬಾರಿ ಯಾರೆಲ್ಲಾ ಬಿಗ್ ಬಾಸ್ ಗೆ ಹೋಗಲಿದ್ದಾರೆ, ಈ ಬಾರಿಯ ಗೇಮ್ ಹೇಗಿರಲಿದೆ ಅನ್ನೋದನ್ನ ನೋಡೊದಕ್ಕೆ ವೀಕ್ಷಕರು ಕಾಯ್ತಿದ್ದಾರೆ. 
 

ಇನ್ನು ಕಾರ್ಯಕ್ರಮದ ಮತ್ತೊಂದು ವಿಶೇಷತೆ ಅಂದ್ರೆ ಇವತ್ತು ನಡೆಯುವಲ್ಲಿ ರಾಜಾ ರಾಣಿ ಫಿನಾಲೆಯಲ್ಲಿರುವ ಒಂದು ಜೋಡಿ ನೇರವಾಗಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ. ಆ ಜೋಡಿ ಯಾರು ಅನ್ನೋದನ್ನು ಸಹ ಇವತ್ತು ಹೇಳಲಾಗುತ್ತೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಯಾವ ಜೋಡಿ ಬಿಗ್ ಬಾಸ್ ಮನೆಗೆ ಹೋಗುತ್ತೆ ಅನ್ನೋದನ್ನ ಕಾದು ನೋಡೋಣ. 
 

Latest Videos

click me!