ಆ್ಯಂಕರ್ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಪಯಣದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದು ಭಾವುಕರಾಗಿದ್ದಾರೆ. ಗಗನಸಖಿಯಾಗುವ ಕನಸು ಕಂಡಿದ್ದ ಅನುಶ್ರೀ ಅವರ ಭವಿಷ್ಯವನ್ನು ಅವರ ಶಾಲಾ ಶಿಕ್ಷಕಿಯೊಬ್ಬರು ಅಂದೇ ನುಡಿದಿದ್ದರು, ಆ ಕುತೂಹಲಕಾರಿ ಘಟನೆಯನ್ನು ಇಲ್ಲಿ ವಿವರಿಸಲಾಗಿದೆ.
ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್ ಅನುಶ್ರೀ (Anchor Anushree). ಆ್ಯಂಕರಿಂಗ್ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್ ಮಾಡುವಲ್ಲಿ ಆ್ಯಂಕರ್ಸ್ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್ಗಳಿಗೆ.
27
ಸುಖಮಯ ದಾಂಪತ್ಯ
ಆ್ಯಂಕರ್ ಅನುಶ್ರೀ ಅವರು ಸದ್ಯ ತಾವು ಮನಮೆಚ್ಚಿದ ಹುಡುಗ ರೋಷನ್ ಅವರನ್ನು ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅನುಶ್ರೀ ಎಲ್ಲಿಯೇ ಹೋದರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಅದು ಮದುವೆ ಯಾವಾಗ ಎನ್ನುವುದು. ಎರಡು ವರ್ಷಗಳಿಂದ ಅನುಶ್ರೀ ಅವರು ರೋಷನ್ ಅವರ ಜೊತೆ ಫ್ರೆಂಡ್ಷಿಪ್ನಲ್ಲಿ ಇದ್ದರೂ ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಒಂದೇ ಸಲ ಮದುವೆಯ ಬಗ್ಗೆ ಮಾತನಾಡಿ ಸರ್ಪ್ರೈಸ್ ಕೊಟ್ಟಿದ್ದರು.
37
ಮುಳ್ಳಿನ ಹಾದಿ
18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಭಾವುಕರಾಗಿದ್ದರು. ವೇದಿಕೆಯ ಮೇಲೆಯೇ ಕಣ್ಣೀರಾದರು. ಅನುಶ್ರೀ ಅವರು ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಅಷ್ಟಕ್ಕೂ ಅನುಶ್ರೀ ಅವರಿಗೆ ಗಗನಸಖಿ ಆಗಬೇಕು ಎನ್ನುವ ಅದಮ್ಯ ಬಯಕೆ ಇತ್ತಂತೆ. ಅದಕ್ಕಾಗಿ ಕಂಡಕಂಡ ಜ್ಯೋತಿಷಿಗಳಿಗೆ ಜಾತಕ ತೋರಿಸುತ್ತಿದ್ದರಂತೆ. ಅವರು ನೀನು ತುಂಬಾ ಎತ್ತರಕ್ಕೆ ಹೋಗುತ್ತೀ ಎಂದಿದ್ದರು. ನಾನು ಎತ್ತರ ಎಂದಾಕ್ಷಣ ಆಕಾಶ ಎಂದುಕೊಂಡಿದ್ದೆ, ಗಗನಸಖಿ ಆಗ್ತೇನೆ ಎಂದು ಅಂದುಕೊಂಡಿದ್ದೆ ಎಂದು ಚಂದನ ವಾಹಿನಿಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ ಹೇಳಿದ್ದಾರೆ.
57
ಊರಿನವರು ತಮಾಷೆ ಮಾಡಿದ್ರು
ಆಗೆಲ್ಲಾ ಗಗನಸಖಿಯರಿಗೆ ತುಂಬಾ ಹೈಟ್ ಬೇಕಿತ್ತು. ಅದಕ್ಕೆ ನನ್ನ ಊರಿನವರು ತಮಾಷೆ ಮಾಡ್ತಿದ್ರು, ನಿನ್ನ ಹೈಟ್ ನೋಡು ಎಂದು. ನಾನು ಟ್ಯೂಷನ್ ಮಾಡುತ್ತಿದ್ದರಿಂದ ಒಳ್ಳೆ ಟೀಚರ್ ಆಗ್ತಿ ಅಂದ್ರು, ಡಾನ್ಸ್ ಮಾಡುತ್ತಿದ್ದರಿಂದ ಒಳ್ಳೆ ಡಾನ್ಸರ್ ಆಗ್ತಿ ಬಿಡು ಅಂತೆಲ್ಲಾ ಹೇಳಿದ್ರು. ಆದರೆ ನಮ್ಮ ಕನ್ನಡ ಟೀಚರ್ ಮಾತ್ರ ನನ್ನ ಭವಿಷ್ಯ ಅಂದೇ ನುಡಿದಿದ್ದರು ಎಂದು ನಟಿ ನೆನಪಿಸಿಕೊಂಡಿದ್ದಾರೆ.
67
ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ
ಪೇರೆಂಟ್ಸ್ ಮೀಟಿಂಗ್ ದಿನ ನನ್ನಮ್ಮ ಶಾಲೆಗೆ ಬಂದಿದ್ದರು. ಅಲ್ಲಿಯ ಕನ್ನಡ ಟೀಚರ್ಗೆ ನಾನೆಂದ್ರೆ ತುಂಬಾ ಇಷ್ಟ. ಡಾನ್ಸ್ಗೆಲ್ಲಾ ನನ್ನನ್ನೇ ಮುಂದೆ ನಿಲ್ಲಿಸ್ತಾ ಇದ್ರು. ಮೀಟಿಂಗ್ ಮುಗಿದ ಮೇಲೆ ನನ್ನ ಅಮ್ಮನನ್ನು ಕರೆದು, ನಿಮ್ಮ ಮಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಅವಳು ಸ್ಮೈಲ್ ಕೊಟ್ರೆ ಇಡೀ ಕರ್ನಾಟಕ ಫಿದಾ ಆಗುತ್ತೆ, ಜಾಗೃತೆ ಎಂದಿದ್ದರು ಎಂದು ಅಂದು ನಡೆದ ಘಟನೆ ನೆನಪಿಸಿಕೊಂಡಿದ್ದಾರೆ ಅನುಶ್ರೀ.
77
ಮೊದಲ ಬಾರಿ ಆ್ಯಂಕರ್
ನನ್ನ ಅಮ್ಮನಿಗೆ ಏನು ಎಂದು ಅರ್ಥ ಆಗಲಿಲ್ಲ, ಆಗ ಟೀಚರ್ ನಿಮ್ಮ ಮಗಳು ಇರೋದೇ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳಲು, ಅವಳ ಸ್ಮೈಲ್ ಜೋಪಾನವಾಗಿ ಇಟ್ಟುಕೊಳ್ಳಿ. ಅವಳು ಇರೋದೇ ಸ್ಕ್ರೀನ್ ಮೇಲೆ ನೋಡಲು ಎಂದು ಹೇಳಿದ್ದೂ ಅಲ್ಲದೇ, ಶಾಲೆಯಲ್ಲಿ ಮೊದಲ ಬಾರಿಗೆ ನನ್ನನ್ನು ಆ್ಯಂಕರ್ ಮಾಡಿದ್ದು ಅವರೇ ಎಂದು ನೆನಪಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.