ಎರಡು ವರ್ಷಗಳ ನಂತರ ನನ್ನರಸಿ ರಾಧೆಯಲ್ಲಿ ಕಾಣಿಸಿಕೊಂಡ ಅಮೂಲ್ಯ ಗೌಡ!

First Published | May 29, 2022, 3:06 PM IST

ಅಗ್ನಿಸಾಕ್ಷಿ ನಂತರ ಎರಡು ವರ್ಷ ಆಫ್‌ ಸ್ಕ್ರೀನ್‌ ಉಳಿದುಕೊಂಡ ಅಮೂಲ್ಯ ಗೌಡ ಇದೀಗ ಅಶ್ವಿನಿ ಆಗಿ ಎಂಟ್ರಿ ಕೊಟ್ಟಿದ್ದಾರೆ.
 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯನ ಸಹೋದರಿ ಅಶ್ವಿನಿ ಪಾತ್ರದಲ್ಲಿ ಅಮೂಲ್ಯ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. 

 ಅಶ್ವಿನಿ ಪಾತ್ರದ ಮೂಲಕ ಪಾಸಿಟಿವ್ ಮತ್ತು ನೆಗೆಟಿವ್ ಶೇಡ್‌ನಲ್ಲಿ ಅಮೂಲ್ಯ ಮಿಂಚಲಿದ್ದಾರೆ. ಅಲ್ಲದೆ ಕಾಣಿಸಿಕೊಂಡ ಒಂದೇ ವಾರದಕ್ಕೆ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

Tap to resize

- 'ಆರಂಭದಲ್ಲಿ ನೆಗೆಟಿವ್ ಪಾತ್ರಗಳಿಗೆ ನಾನ No ಹೇಳುತ್ತಿದೆ ಆದರೆ ಅಶ್ವಿನಿ ಪಾತ್ರವನ್ನು ನಾನು ಸ್ವೀಕರಿಸಿದ್ದೀನಿ, ಎಲ್ಲಾ ಕಲಾವಿದರಿಗೆ ಈ ರೀತಿ ಅವಕಾಶ ಸಿಗುವುದಿಲ್ಲ' ಎಂದು ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.

 'ಎರಡು ವರ್ಷಗಳಲ್ಲಿ ನೂರಾರು ಆಫರ್‌ಗಳು ಬಂತು ಆದರೆ ನಾನು ಒಳ್ಳೆ ಕಥೆ ಹುಡುಕುತ್ತಿದ್ದೆ. ಅಗ್ನಿಸಾಕ್ಷಿ ನಂತರ ನಾನು ಲೈಮ್‌ಲೈಟ್‌ನಿಂದ ದೂರ ಉಳಿದುಕೊಂಡೆ'.

'ಎರಡು ಮೂರು ಆಭರಣ ಬ್ರಾಂಡ್‌ಗಳಿಗೆ ಅಂಬಾಸಿಡರ್. ಕೆಲವು ಸಿನಿಮಾಗಳಿಗೆ ಡಬ್ ಮಾಡಿದ್ದೀನಿ, ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೀನಿ ಹೀಗೆ ಒಂದೊಂದೆ ಫೀಲ್ಡ್‌ಗಳಲ್ಲಿ ಕೆಲಸ ಮಾಡಿದ್ದೀನಿ'.

 'ಇಂಡಸ್ಟ್ರಿಯಲ್ಲಿ ನನ್ನ ಸ್ನೇಹಿತರು ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವುದನ್ನು ನೋಡಿ ಬೇಸರವಾಗುತ್ತಿತ್ತು, ಆ ಸಮಯದಲ್ಲಿ ಹಲವು ಆಡಿಷನ್‌ಗಳನ್ನು ಮಿಸ್ ಮಾಡಿದ್ದೀನಿ. ಇಷ್ಟು ದಿನ ಕಾದು ನನ್ನರಸಿ ಸಿಕ್ಕಿದೆ' ಎಂದು ಅಮೂಲ್ಯ ಮಾತನಾಡಿದ್ದಾರೆ.

Latest Videos

click me!