ಕಾಮ್ಯಾ ಪಂಜಾಬಿ 'ಬಾನು ಮೈ ತೇರಿ ದುಲ್ಹಾನ್' ಮೂಲಕ ಸಣ್ಣ ಪರದೆಯ ಮೇಲೆ ಫೇಮಸ್ ಆದರು. 2003 ರಲ್ಲಿ, ಕಾಮ್ಯಾ ಬಂಟಿ ನೇಗಿಯನ್ನು ವಿವಾಹವಾದರು ಮತ್ತು 2013 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಅದರ ನಂತರ, ಕಾಮ್ಯಾ ಕಿರುತೆರೆ ತಾರೆ ಕರಣ್ ಪಟೇಲ್ ಅವರೊಂದಿಗೆ ಕೆಲ ಕಾಲ ಡೇಟಿಂಗ್ (Dating) ಮಾಡಿದರು. ಆದರೆ ಅವರಿಬ್ಬರು 2015 ರಲ್ಲಿ ಬೇರ್ಪಟ್ಟರು. ಕಾಮ್ಯಾ ಈಗ ಪ್ರೀತಿಗೆ ಮತ್ತೊಂದು ಅವಕಾಶವನ್ನು ನೀಡಿದ್ದಾರೆ ಮತ್ತು ಅವರು ದೆಹಲಿಯ ಶಲಭ್ ದಂಗ್ ಅವರನ್ನು ವಿವಾಹವಾಗಿದ್ದಾರೆ.