ಅಮೃತಧಾರೆಯ ಪಾರ್ಥನ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರ ಸ್ಪೆಷಲ್ ಕೇಕ್… ಭಾವುಕರಾದ ಕರಣ್

First Published | Jul 13, 2024, 2:12 PM IST

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನ ಪಾತ್ರದಲ್ಲಿ ನಟಿಸುತ್ತಿರುವ ಕರಣ್ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರು ಮನೆಗೆ ಕೇಕ್ ಕಳುಹಿಸಿ ಕೊಟ್ಟು ಸ್ಪೆಷಲ್ ಆಗಿ ವಿಷ್ ಮಾಡಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಗೌತಮ್ ದಿವಾನ್ ಕಿರಿಯ ತಮ್ಮ ಪಾರ್ಥನ ಪಾತ್ರದಲ್ಲಿ ನಟಿಸುತ್ತಿರುವ ನಟ ಕರಣ್ (Karan) ಜುಲೈ 12 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
 

ಅಮೃತಧಾರೆಯಲ್ಲಿ (Amruthadhare) ಫಾರಿನ್ ರಿಟರ್ನ್ ಹುಡುಗನಾಗಿ, ಯಾವಾಗ್ಲೂ ಮನೆಯವರನ್ನು ನಗಿಸುತ್ತಿರುವ ಹುಡುಗನಾಗಿ, ಜೊತೆಗೆ ಅತ್ತೆಗೆ ಭೂಮಿಕಾ ತಂಗಿ ಅಪೇಕ್ಷಾಳನ್ನು ಪ್ರೀತಿಸುವ ಹುಡುಗನಾಗಿ ಕರಣ್ ಅಪಾರ ಜನಮನ್ನಣೆ ಪಡೆದಿದ್ದಾರೆ. 
 

Tap to resize

ಹಿಂದೆ ಅರಸಿ ಸೇರಿ ಹಲವು ಸೀರಿಯಲ್ ಗಳಲ್ಲಿ ಕರಣ್ ನಟಿಸಿದ್ದರೂ ಸಹ ಅಮೃತಧಾರೆ ಸೀರಿಯಲ್ ನಿಂದ ಇವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದೆ. ಅಭಿಮಾನಿಗಳು, ಇವರ ಮಾತು, ನಟನೆ, ಇವರ ಸ್ಟೈಲ್ ಗೂ ಫಿದಾ ಆಗಿದ್ದಾರೆ. 
 

ಜುಲೈ 12 ರಂದು ಕರಣ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರು ಇವರ ಮನೆಗೆ ಕೇಕ್ ಮತ್ತು ಗ್ರೀಟಿಂಗ್ ಕಳುಹಿಸಿಕೊಟ್ಟಿದ್ದಾರೆ. ಮಧ್ಯರಾತ್ರಿ ಕೇಕ್ ಕಳುಹಿಸಿಕೊಟ್ಟ ಅಭಿಮಾನಿಗೆ ಥ್ಯಾಂಕ್ಸ್ ಹೇಳಿ, ಕರಣ್ ಭಾವುಕ ಬರಹಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಗೀಚಿದ್ದಾರೆ. 
 

ಅಭಿಮಾನಿ ಕಳುಹಿಸಿಕೊಟ್ಟ ಕೇಕ್ ಕತ್ತರಿಸುವ ವೀಡಿಯೋ ಫೋಟೋಗಳನ್ನು ಹಂಚಿಕೊಂಡಿರುವ ಕರಣ್… ಈ ರೀತಿ ಬರೆದುಕೊಂಡಿದ್ದಾರೆ….  ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ನಾನು ಮೊದಲು ಬಂದಿದ್ದು ಸೀದಾ ಮನೆಗೆ. ಯಾಕೆ ಅಂದ್ರೆ ನನ್ನ ಅಭಿಮಾನಿ ಒಬ್ಬರು ನನಗೆ ಏನೋ ಮನೆಗೆ ಕಳುಹಿಸಿದ್ದೀನಿ ಅಂತ ಹೇಳಿದರು. ಆ ಒಂದು ಕುತೂಹಲದಿಂದ ನಾನು ಮನೆಗೆ ಬಂದು ನೋಡಿದರೆ ನನಗೆ  ಅಚ್ಚರಿಯಾಯ್ತು.. ಅವರು ನಂಗೆ ಒಂದು ಅದ್ಭುತವಾದ ಕೇಕ್ ನನ್ನ ಹುಟ್ಟುಹಬ್ಬಕ್ಕಾಗಿ ಕಳಿಸಿದ್ದರು. 
 

ನಿಜ ಹೇಳ್ತೀನಿ, ಈತರಹದ ಕೇಕ್ ನಾನು ನನ್ನ ಇಡೀ ಜೀವನದಲ್ಲೇ ತಿಂದಿರಲಿಲ್ಲ. ತುಂಬಾನೇ ಸ್ವಾದಿಷ್ಟವಾಗಿತ್ತು. ಆ ಕೇಕು ಎಷ್ಟು ಸ್ವಾದಿಷ್ಟವಾಗಿತ್ತೋ, ಅದನ್ನ ನನಗೆ ಅಂತ ಸಮಯ ಕೊಟ್ಟು ಕಳುಹಿಸಿದ, ಅದರ ಜೊತೆ ಒಂದು ಗ್ರೀಟಿಂಗ್ ಕಾರ್ಡ್ ಮಾಡಿ, ಅದರಲ್ಲಿ ಪ್ರೀತಿಯ ಮಾತುಗಳ್ಳನ ನನಗೋಸ್ಕರ ಬರೆದಿರುವವರ ಮನಸ್ಸು ಕೂಡ ಅಷ್ಟೇ ಸಿಹಿಯಾಗಿದೆ ಅಂತ ನಂಗೆ ಅನಿಸಿತ್ತು.
 

ನನಗೆ ತುಂಬಾನೇ ಖುಷಿಯಾಯಿತು. ರಾಜೇಶ್ವರಿ ನನ್ನ ಹುಟ್ಟುಹಬಕ್ಕೆ ನಿಮ್ಮ ಈ ಉಡುಗೊರೆ ತುಂಬಾನೇ ಸ್ಪೆಷಲ್ ಆಗಿತ್ತು. ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂದು ಅಭಿಮಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಕರಣ್. ಜೊತೆಗೆ ತಮ್ಮ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲಾ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಫ್ಯಾನ್ಸ್ ಗಳಿಗೆ, ಕುಟುಂಬದ ಸದಸ್ಯರಿಗೆ, ಲವರ್ಸ್ ಗಳಿಗೆ, ಆರಾಧಕರಿಗೆ ಥ್ಯಾಂಕ್ಯೂ ಎಂದು ಹೇಳಿದ್ದಾರೆ. 
 

Latest Videos

click me!