ಅಜ್ಜಿ ಮತ್ತು ಭಾಗ್ಯಮ್ಮನ ಯೋಜನೆಯಿಂದ ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಬಂದಿದೆ. ಭೂಮಿಕಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರೆ, ಇತ್ತ ಜೈದೇವನಿಗೆ ಆಕಾಶ್ ಗೌತಮ್ ಮಗ ಎಂಬ ಸತ್ಯ ಫೋಟೋ ಮೂಲಕ ತಿಳಿದುಬಂದಿದೆ. ಅತ್ತ ಅಜ್ಜಿಯ ಆಸ್ತಿ ಕಬಳಿಸುವ ಜೈದೇವನ ಸಂಚು ಕೂಡ ವಿಫಲವಾಗಿದೆ.
ಅಮೃತಧಾರೆ (Amruthadhaare Serial) ಸೀರಿಯಲ್ನಲ್ಲಿ ಅಜ್ಜಿ ಮತ್ತು ಭಾಗ್ಯಮ್ಮ ಮಾಡಿದ ಡ್ರಾಮಾದಿಂದಾಗಿ ಈಗ ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಕೂಡಿ ಬಂದಿದೆ.
25
ಅಮ್ಮ-ಅಪ್ಪ ಎನ್ನೋ ಖುಷಿ
ಮಿಂಚು ಮತ್ತು ಆಕಾಶ್ ಕೂಡ ಇಬ್ಬರನ್ನೂ ಅಮ್ಮ-ಅಪ್ಪ ಎಂದು ಹೇಳಿ ಖುಷಿ ಪಟ್ಟಿದ್ದಾರೆ. ಅದೇ ಮುಂದುವರೆಯಲಿ ಎನ್ನುವ ಆಸೆ ಅವರದ್ದು. ಅದೇ ಇನ್ನೊಂದೆಡೆ ಅಜ್ಜಿ ಕೂಡ ಇವರಿಬ್ಬರನ್ನೂ ಒಂದು ಮಾಡಲು ಇನ್ನಷ್ಟು ಪ್ಲ್ಯಾನ್ ಮಾಡುತ್ತಿದ್ದಾಳೆ.
35
ಭೂಮಿಕಾ ಹೇಳಿದ ಸತ್ಯ
ಅದೇ ಇನ್ನೊಂದೆಡೆ, ಭೂಮಿಕಾಗೆ ಈಗ ಗೌತಮ್ನ ಬಿಟ್ಟು ಇರಲಾಗದ ಎಂದು ಅನ್ನಿಸತೊಡಗಿದೆ. ಇದೇ ವಿಷಯವನ್ನು ಆಕೆ ಮಲ್ಲಿ ಎದುರೂ ಹೇಳಿದ್ದಾಳೆ. ನಾನು ಗೌತಮ್ ಜೊತೆಯಾಗಿ ಇರಬೇಕು ಎಂದು ಬಯಸುವುದಾಗಿ ಕೊನೆಗೂ ಬಾಯಿ ಬಿಟ್ಟಿದ್ದಾಳೆ. ಸತ್ಯವನ್ನು ಆಕೆ ಹೇಳಿದ್ದಾಳೆ.
ಆದರೆ ಅಷ್ಟರಲ್ಲಿಯೇ ಕೆಡಿ ಜೈದೇವನ ಕೈಗೆ ಭೂಮಿಕಾ, ಆಕಾಶ್ ಮತ್ತು ಮಲ್ಲಿ ಇರುವ ಫೋಟೋ ಸಿಕ್ಕಿಬಿಟ್ಟಿದೆ. ಫೋಟೋಶೂಟ್ ಸಮಯದಲ್ಲಿ ಮಿಂಚು ಕೈಯಿಂದ ಆ ಫೋಟೋ ಕೆಳಕ್ಕೆ ಬಿದ್ದಿತ್ತು. ಅದನ್ನು ನೋಡಿ ಅವನಿಗೆ ಆಕಾಶ್ ಗೌತಮ್ ಮಗ ಎನ್ನುವ ಸತ್ಯ ತಿಳಿದಿದೆ.
55
ಗೌತಮ್ ಹೆಸರಿಗೆ ಆಸ್ತಿ
ಅದೇ ಇನ್ನೊಂದೆಡೆ, ಅಜ್ಜಿ ಕೂಡ ತನ್ನೆಲ್ಲಾ ಆಸ್ತಿಯನ್ನು ಇದಾಗಲೇ ಗೌತಮ್ ಹೆಸರಿಗೆ ಮಾಡಿದ್ದಾಳೆ. ಜೈದೇವನ ಕುತಂತ್ರ ಬುದ್ಧಿ ಅವನಿಗೇ ಉಲ್ಟಾ ಹೊಡೆದಿದೆ. ಅಜ್ಜಿಗೆ ನಿದ್ದೆ ಬರುವ ಮಾತ್ರೆ ಕೊಟ್ಟು ಸಹಿ ಹಾಕಿಸಿಕೊಳ್ಳಲು ನೋಡಿದ್ದ ಜೈದೇವ. ಆದರೆ ಅಜ್ಜಿ ಅದನ್ನು ತಿಂದೇ ಇರಲಿಲ್ಲ. ಆದರೆ ಎಡಗೈ ಬದಲು ಜೈದೇವ ಗಡಿಬಿಡಿಯಲ್ಲಿ ಬಲಗೈ ಬೆರಳಚ್ಚನ್ನು ಹಾಕಿಕೊಂಡಿದ್ದರಿಂದ ಅಜ್ಜಿ ಸುಮ್ಮನೇ ಇದ್ದಳು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.