ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ಅವರು ಕುರಿತು 6 ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
1. ಗಿಲ್ಲಿ ನಟನ ಮೂಲ ಹೆಸರು ನಟರಾಜ್. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಡದಪುರದ ರೈತ ಕುಟುಂಬದಿಂದ ಬಂದವರು. 10 ಕ್ಲಾಸ್ ಓದಿ 2 ವರ್ಷ ಐಐಟಿ ಮಾಡಿ ನೇರ ಗಾಂಧೀನಗರದತ್ತ ಹೆಜ್ಜೆ ಹಾಕಿದವರು.
26
ಸೋಷಿಯಲ್ ಮೀಡಿಯಾ
2. ಮೊದಲಿಗೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಆರ್ಟ್ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡಿದರು. ಆದರೆ ಅಲ್ಲಿ ಕನಸು ಈಡೇರುವ ಲಕ್ಷಣ ಕಾಣದಿದ್ದಾಗ ಇವರ ಕೈ ಹಿಡಿದದ್ದು ಸೋಷಿಯಲ್ ಮೀಡಿಯಾ.
36
ಕಾಮಿಡಿ ಪಂಚ್
3. ಅವಕಾಶ ಸೃಷ್ಟಿಸಿಕೊಂಡು ಮುನ್ನುಗ್ಗಿದ ಅವರು ತನ್ನೂರಿನ ಪರಿಸರ, ಅಲ್ಲಿನ ಜನರನ್ನೇ ಕಲಾವಿದರಾಗಿ ಮಾಡಿ ಅವರ ಜೊತೆ ಕಾಮಿಡಿ ಪಂಚ್ ಕೊಟ್ಟು ಸ್ಕಿಟ್ ಮಾಡಿಸಿ ಅದನ್ನು ಯೂಟ್ಯೂಬ್‌ಗೆ, ಸೋಷಿಯಲ್ ಮೀಡಿಯಾಕ್ಕೆ ಅಪ್‌ಲೋಡ್ ಮಾಡಿದರು. ಅದು ಫೇಮಸ್ ಆಯಿತು.
4. ಮುಂದಿನ ದಾರಿ ಸರಾಗವಾಯ್ತು. ರಿಯಾಲಿಟಿ ಶೋಗಳಲ್ಲಿ ಅವಕಾಶ ಕೈಬೀಸಿ ಕರೆಯಿತು. ಸಿನಿಮಾಗಳಲ್ಲೂ ಗಿಲ್ಲಿ ನಟ ಫೇಮಸ್ ಆಗತೊಡಗಿದರು.
56
ರಿಯಾಲಿಟಿ ಶೋಗಳಲ್ಲೂ ಜನಪ್ರಿಯ
5. ‘ಕಾಮಿಡಿ ಕಿಲಾಡಿಗಳು ಸೀಸನ್ 4’ನಲ್ಲಿ ರನ್ನರ್ ಅಪ್ ಆದ ಗಿಲ್ಲಿ ನಟ ಮುಂದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಭರ್ಜರಿ ಬ್ಯಾಚುಲರ್ಸ್’, ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋಗಳಲ್ಲೂ ಜನಪ್ರಿಯರಾದರು.
66
ನನ್ನ ಹೆಸ್ರು ಹಾಳು ಮಾಡಿದ್ದಾರೆ
6. ಗಿಲ್ಲಿ ನಟನಿಗೆ ‘ಗಿಲ್ಲಿ’ ಹೆಸರು ಅಂಟಿಕೊಂಡಿದ್ದು ತನ್ನ ಜೊತೆಗಿದ್ದ ಪೋಲಿ ಹುಡುಗರ ಮೂಲಕ ಅನ್ನೋದನ್ನು ಅವರೇ ಇತ್ತೀಚೆಗೆ ಹೇಳಿದ್ದಾರೆ. ‘ನನ್ನ ಹೆಸರು ನಟರಾಜ್ ಅಂತ. ನನ್ನ ಜೊತೆಗಿದ್ದ ಪೋಲಿ ಬಡ್ಡೆತಾವು ಗಿಲ್ಲಿ ಗಿಲ್ಲಿ ಅಂತ ನನ್ನ ಹೆಸ್ರು ಹಾಳು ಮಾಡಿದ್ದಾರೆ’ ಎಂದು ಗಿಲ್ಲಿ ನಟ ತಿಳಿಸಿದ್ದಾರೆ.