Amruthadhaare: ಯಾರೀ ದೀಪಿಕಾ? ಹುಟ್ಟಿನ ಗುಟ್ಟು ರಟ್ಟಾಯ್ತು- ಅಮ್ಮನ ಮಡಿಲು ಸೇರೊ ಕಾಲ ಬಂದಾಯ್ತು

Published : Oct 15, 2026, 09:00 PM IST

ಅಮೃತಧಾರೆಯಲ್ಲಿ ಇದೀಗ ದೀಪಿಕಾ ಮತ್ತು ಭೂಮಿಕಾ ಒಂದಾಗಿ ಶತ್ರು ಸಂಹಾರಕ್ಕೆ ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ದೀಪಿಕಾಗೆ ತನ್ನ ಹುಟ್ಟಿನ ಗುಟ್ಟು ಬಯಲಾಗಿದೆ. ಅಜ್ಜಿಯಿಂದ ದೀಪಿಕಾಗೆ ಹುಟ್ಟಿನ ವಿಷಯ ತಿಳಿದಿದೆ.ಏನಿದು ರೋಚಕ ಟ್ವಿಸ್ಟ್​?

PREV
16
ಒಡಲ ಗುಟ್ಟು ರಟ್ಟು

ಅಮೃತಧಾರೆಯಲ್ಲಿ ಇದೀಗ ದೀಪಿಕಾ ಮತ್ತು ಭೂಮಿಕಾ ಒಂದಾಗಿ ಶತ್ರು ಸಂಹಾರಕ್ಕೆ ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ದೀಪಿಕಾಗೆ ತನ್ನ ಹುಟ್ಟಿನ ಗುಟ್ಟು ಬಯಲಾಗಿದೆ.

26
ಮಕ್ಕಳಿಗಾಗಿ ಬೇಡಿಕೆ

ಅವಳ ಅಜ್ಜಿ, ದೀಪಿಕಾಗೆ ಅವಳು ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ತಿಳಿಸಿದ್ದಾಳೆ. ನಾನು, ನನ್ನ ಮಗಳು ಮತ್ತು ಅಳಿಯ ದೇವಸ್ಥಾನಕ್ಕೆ ಮಕ್ಕಳ ಕೊರಗು ನೀಗಿಸಲು ಬೇಡಿಕೊಳ್ಳಲು ಹೋದ ಸಮಯದಲ್ಲಿ ದೀಪಿಕಾ ಸಿಕ್ಕ ವಿಷಯವನ್ನುಹೇಳಿದ್ದಾಳೆ.

36
ಗಂಡನ ಪ್ರಾಣ

ಅಲ್ಲಿ ದೀಪಿಕಾ ಅಮ್ಮ ಬಂದು ಮಗುವನ್ನು ಇಟ್ಟು, ಈ ಮಗುವಿನಿಂದ ನನ್ನ ಗಂಡನ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿದ್ದಾರೆ. ಆದ್ದರಿಂದ ನೀನೇ ಕಾಪಾಡು ಎಂದು ಮಗುವನ್ನು ದೇವರ ಎದುರು ಇಟ್ಟು ಹೋದ ವಿಷಯ ತಿಳಿಸಿದ್ದಾಳೆ.

46
ಮಗು ಕೊಡಲು ಒತ್ತಾಯ

ಆ ಮಗುವಿನ ಬಳಿ ದುಡ್ಡು ಇಟ್ಟು ಹೋಗಿದ್ದರು. ಕೊನೆಗೆ ನನ್ನ ಮಗಳು ಅಳಿಯ ನಿನ್ನನ್ನು ಕರೆದುಕೊಂಡು ಬಂದರು. ಆದರೆ ಕೆಲವು ದಿನಗಳ ನಂತರ ನಿನ್ನ ಅಮ್ಮ ಬಂದು ಮಗುವನ್ನು ಕೊಡುವಂತೆ ಹೇಳಿದಳು ಎಂದು ವಿಷಯ ತಿಳಿಸಿದ್ದಾಳೆ.

56
ಪ್ರಾಣಕ್ಕೆ ಅಪಾಯ

ಆದರೆ ಮಗುವನ್ನು ಕರೆದುಕೊಂಡು ಹೋದರೆ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿದ್ದೀರಲ್ಲ. ಅದಕ್ಕಾಗಿ ನಾವೇ ಮಗುವನ್ನು ಸಾಕುತ್ತೇವೆ ಎಂದು ನಿನ್ನ ಸಾಕು ಅಪ್ಪ, ಅಮ್ಮ ಹೇಳಿ ನಿನ್ನನ್ನು ಆ ಊರಿನಿಂದ ಬೇರೆ ಕಡೆ ಕರೆದುಕೊಂಡು ಬಂದರು ಎಂದಿದ್ದಾಳೆ.

66
ಸೀರಿಯಲ್​ ಮುಗಿದಂತೆ

ಅಲ್ಲಿಗೆ ದೀಪಿಕಾ ಗುಟ್ಟು ರಟ್ಟಾಗಿದೆ. ಇದನ್ನು ಅವಳು ಕೇಳಿ ಭೂಮಿಕಾನೇ ತನ್ನ ಅಕ್ಕ ಎಂದು ತಿಳಿಯುವ ಕಾಲ ಬಂದಿದೆ. ಇಷ್ಟಾದರೆ ಅಲ್ಲಿಗೆ ಅಮೃತಧಾರೆ ಸೀರಿಯಲ್​ ಮುಗಿದಂತೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories