ಅಲಿಶಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ 'ಅನುಪಮಾ' ಧಾರಾವಾಹಿಯನ್ನ ತಾವು ಬಿಟ್ಟಿಲ್ಲ ಅಂತ ಹೇಳಿದ್ದಾರೆ. ಆದರೆ ಅವರನ್ನ ಯಾಕೆ ತೆಗೆದು ಹಾಕಲಾಗಿದೆ ಅನ್ನೋ ನಿಜವಾದ ಕಾರಣ ಅವರಿಗೆ ಗೊತ್ತಿಲ್ಲವಂತೆ. ಎಲ್ಲವೂ ಸರಿಯಾಗೇ ನಡೀತಿತ್ತು, ಆದರೆ ಇದ್ದಕ್ಕಿದ್ದಂತೆ ಏನಾಯ್ತು ಅಂತ ಅವರಿಗೆ ಅರ್ಥವಾಗ್ತಿಲ್ಲ. ಇದು ಅವರಿಗೆ ತುಂಬಾ ಶಾಕಿಂಗ್ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.