ಬಿಗ್‌ಬಾಸ್ ಕನ್ನಡ 11ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಸ್ಪರ್ಧಿಗಳು ಅನ್ನುವುದಕ್ಕಿಂತ ಉತ್ತಮ ಬಾಂಧವ್ಯ ಹೊಂದಿದ್ದು, ಕ್ಲೋಸ್ ಆಗಿ ಮಾತನಾಡುತ್ತಾರೆ. ಅವರು ಈ ಹಿಂದೆಯೇ ಬಿಗ್‌ಬಾಸ್ ಮಿನಿ ಸೀಸನ್‌ನಲ್ಲಿ ಭಾಗವಹಿಸಿದ್ದರು. ಅವಾಗಿನಿಂದಲೇ ಅವರಿಬ್ಬರು ಪರಸ್ಪರ ಪರಿಚಯ. ಬಿಬಿಕೆ11ರ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ದಿನ ತ್ರಿವಿಕ್ರಮ್ ಮೊದಲೇ ಪರಿಚಯ ಒಂದೆರಡು ಬಾರಿ ಸಿಕ್ಕಾಗ ಹಾಯ್ ಎಂದು ಹೇಳಿದ್ದಷ್ಟೇ ಎಂದು ಸುದೀಪ್ ಬಳಿ ಹೇಳಿದ್ದರು.
ಇದೀಗ ಡಿಸೆಂಬರ್ 20ರ ಎಪಿಸೋಡ್ ನಲ್ಲಿ ಭವ್ಯಾ ಗೌಡ ಬಳಿ ಮಾತನಾಡುವಾಗ ತ್ರಿವಿಕ್ರಮ್ ರಿಯಲೀ ಲವ್ ಯೂ ಭವ್ಯಾ ಎಂದಿದ್ದಾರೆ. ಹೀಗಾಗಿ ಮನೆಗೆ ಬರುವ ಮುಂಚೆಯೇ ಅವರಿಬ್ಬರ ಮಧ್ಯೆ ಗೆಳತನಕ್ಕೆ ಮೀರಿದ ಬಂಧ ಇತ್ತಾ ಎಂಬ ಪ್ರಶ್ನೆ ಎದ್ದಿದೆ. ಬಿಗ್‌ಬಾಸ್ ಮನೆಯಲ್ಲಿ ಮಾತ್ರ ಸ್ಪರ್ಧಿಗಳಂತೆ ಇಬ್ಬರೂ ವೈಯಕ್ತಿಕ ಆಟ ಆಡುತ್ತಿದ್ದಾರೆ. ಆದರೆ ಇಬ್ಬರ ಮಧ್ಯೆ ಸಂಥಿಂಗ್ ಇತ್ತು ಎಂದು ನಿನ್ನೆಯ ಎಪಿಸೋಡ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ.
ನಿನ್ನೆ ಲಕ್ಷುರಿ ಬಜೆಟ್ ಟಾಸ್ಕ್ ನಂತರ ತ್ರಿವಿಕ್ರಮ್ ಪ್ರಾಪರ್ಟಿ ಮುಟ್ಟಲು ಹೋದರೆಂದು ಎಂದು ಮನೆಯ ಕ್ಯಾಪ್ಟನ್ ಭವ್ಯಾ ಏರುದನಿಯಲ್ಲಿ ಟಾಸ್ಕ್ ಬಳಿಕ ಪ್ರಾಪರ್ಟಿ ಮುಟ್ಟಬೇಡಿ ತ್ರಿವಿಕ್ರಮ್ ಮತ್ತು ಹನುಮಂತಗೆ ಹೇಳಿದರು. ಇದು ತ್ರಿವಿಕ್ರಮ್ ಮೂಡ್ ಆಫ್ ಗೆ ಕಾರಣವಾಗಿತ್ತು. ಹೀಗಾಗಿ ಇದರ ಬಗ್ಗೆ ಎಪಿಸೋಡ್ ಕೊನೆಯಲ್ಲಿ ಇಬ್ಬರೂ ಬಗೆಹರಿಸಿಕೊಳ್ಳಲು ಪರಸ್ಪರ ಮಾತನಾಡಿದ್ದಾರೆ. ಸರಿ ವಿಕ್ರಮ್ ನಾನು ನಿಮಗೆ ಹೇಳಿದ್ದೇ ತಪ್ಪು ನಾಳೆ ಎಲ್ಲರ ಎದರು ಕ್ಷಮೆ ಕೇಳುತ್ತೇನೆ ಎಂದು ಭವ್ಯಾ ಹೇಳಿದ್ರು.
ತ್ರಿವಿಕ್ರಂ: ನಾವು ಲಕ್ಷುರಿ ಟಾಸ್ಕ್‌ನಲ್ಲಿ ಎಷ್ಟು ಪಾಯಿಂಟ್ ಸೋತೆವೆಂದು ಹೇಳಲಷ್ಟೇ ನಿಂಗೆ ಹೇಳಿಕೊಡೋಕೆ ಬಂದಿದ್ದು. ನಾನು ನಿನಗೆ ಬೈಯಲು ಆಗ್ಲಿ, ಹೊರಗಡೆ ಆಗ್ಲಿ ಇಲ್ಲಿ ಆಗ್ಲಿ ಬಂದಿಲ್ಲ.
ಭವ್ಯಾ: ನಾನು ಅದನ್ನೇ ಹೇಳಲು ಬಂದೆ. ಮಾತಾಡಿ ಅಂತಾನೆ ಹೇಳಿದ್ದು, ನಾನು ಎಲ್ಲರತ್ರ ಯಾವ ಟೋನ್‌ನಲ್ಲಿ ಮಾತಾಡಬೇಕು. ಅದನ್ನು ಹೇಳಿಕೊಡಿ
ತ್ರಿವಿಕ್ರಮ್: ನೀನು ಎಲ್ಲಾರೂ ಅಂತಿದ್ದೀಯಲ್ಲ. ಎಲ್ಲರೂ ನಿನ್ನ ಜೊತೆಗಿದ್ರಾ ಇಷ್ಟು ದಿನ?
ಭವ್ಯಾ:ಹಂಗಲ್ಲಾ ವಿಕ್ಕಿ, ಎಲ್ಲಾ ವಿಚಾರಕ್ಕೂ ನನ್ನ ಮೇಲೆ ಅಫೆಂಡ್ ಆಗ್ತೀದ್ದೀರಾ ಯಾಕೆ? ನಾನು ಏನು ಮಾಡಬೇಕು.
ತ್ರಿವಿಕ್ರಮ್: ನಾನು ಯಾವ ವಿಚಾರಕ್ಕೆ ಅಫೆಂಡ್ ಆದೆ ಭವ್ಯಾ, ಐ ಸೀರಿಯಸ್ಲಿ ಲವ್ ಯೂ ಓಕೆ. ವೈಟ್ ಕೇಳಿಸಿಕೋ, ನಾನು ನಿಂಗೆ ಅಫೆಂಡ್ ಆಗಿ ಆಗ್ಲಿ, ಕೋಪದಲ್ಲಾಗ್ಲಿ, ನಾನು ಏನೂ ಮಾತಾಡ್ತಿಲ್ಲ. ನಾನು ಜಸ್ಟ್ ಕನ್ವಿನ್‌ಸಿಂಗ್ ಯೂ, ಜಸ್ಟ್ ಟೆಲ್ಲಿಂಗ್ ಯೂ
ಈ ಮಾತುಕತೆ ಎಪಿಸೋಡ್ ಎಂಡ್ ಆಗುವಾಗ ನಡೆದಿದೆ. ಇದು ಜಸ್ಟ್ ಪ್ಲೋ ನಲ್ಲಿ ತ್ರಿವಿಕ್ರಮ್ ಹೇಳಿದ್ರಾ ಅನ್ನೋದು ಗೊತ್ತಿಲ್ಲ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಇದೇ ಚರ್ಚೆ ನಡೆಯುತ್ತಿದೆ. ಇಷ್ಟು ಮಾತ್ರವಲ್ಲ "ತ್ರಿವ್ಯ" ಎಂಬ ಪೇಜ್‌ಗಳೂ ಕೂಡ ಅಭಿಮಾನಿಗಳು ಕ್ರಿಯೇಟ್ ಮಾಡಿದ್ದು, ಇವರ ಕ್ಯೂಟ್ ಮಾತುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಶೋ ಆರಂಭದಿಂದಲೂ ತ್ರಿವಿಕ್ರಮ್ ಮತ್ತು ಭವ್ಯಾ ಅವರನ್ನು ಸುದೀಪ್ ಒಂದಲ್ಲ ಒಂದು ರೀತಿಯಲ್ಲಿ ಕಾಲೆಳೆಯುತ್ತಲೇ ಬಂದಿದ್ದಾರೆ. ಶೋ ಆರಂಭದಲ್ಲೇ ಇವರಿಬ್ಬರ ಮಧ್ಯೆ ಗೆಳತನಕ್ಕೂ ಮೀರಿದ ಬಂಧವಿದೆ ಎಂದು ಹಲವು ಸ್ಪರ್ಧಿಗಳಿಗೆ ಅನುಮಾನ ಇತ್ತು.
ಜೋಡಿ ಟಾಸ್ಕ್ ನಲ್ಲಿ ಜೋಡಿಯಾಗಿದ್ದ ಭವ್ಯಾ ಜೊತೆಗೆ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ಎಂಬ ಹಾಡಿಗೆ ಡಾನ್ಸ್ ಮಾಡಿದ್ದರು. ಬಿಗ್‌ಬಾಸ್ ಗೆ ಬಂದ ನಂತರ ನಮ್ಮಿಬ್ಬರ ಗೆಳೆತನ ಮತ್ತಷ್ಟು ಗಟ್ಟಿಯಾಗಿದೆ ಎಂದು ತ್ರಿವಿಕ್ರಮ್ ಒಂದು ಬಾರಿ ಚಟುವಟಿಕೆಯಲ್ಲಿ ಹೇಳಿಕೊಂಡಿದ್ದರು.
ಗೆಳೆತನ ಇರುವವರಿಗೆ ರೋಸ್ ಕೊಡುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ನಾನು ಈ ಮನೆಯಲ್ಲಿ ಆನೆ ತರಹ ಇದ್ದರೆ, ಮಾವುತನ ತರಹ ಒಂದು ಲಿಲ್ಲಿಪುಟ್ಟು ಓಡಾಡುತ್ತಾ ಇರುತ್ತೆ. ಫ್ರೆಂಡ್ಶಿಪ್ ಅಂದ್ರೆ ಮಾತನಲ್ಲ, ಮೌನವನ್ನು ಅರ್ಥ ಮಾಡಿಕೊಳ್ಳುವವರು. ನಾನು ಈ ಗುಲಾಬಿಯನ್ನು ಭವ್ಯಾಗೆ ಕೊಡುತ್ತೇನೆ. ತುಂಬಾ ದೂರ ನೋಡುವ ಆಸೆ ಇದೆ ಎಂದಿದ್ದರು.
ಇದೇ ಟಾಸ್ಕ್‌ನಲ್ಲಿ ಭವ್ಯಾ ಕೂಡ ಕೆಂಪು ಗುಲಾಬಿಯನ್ನು ತ್ರಿವಿಕ್ರಂಗೆ ಕೊಟ್ಟು ನಾನು ಈ ವ್ಯಕ್ತಿ ಜೊತೆ ಮಾತೇ ಆಡಲ್ಲ ಎಂದುಕೊಂಡಿದ್ದೆ. ಹೊರಗೆ ಹಾಯ್ ಬಾಯ್ ಕೂಡ ಸರಿಯಾಗಿ ಇರಲಿಲ್ಲ. ಈಗ ಇವರ ಜೊತೆಗೆ ಚೆನ್ನಾಗಿ ಕನೆಕ್ಟ್ ಆಗಿದ್ದೇನೆ. ಗೆಳೆತನದಲ್ಲಿ ಅವರು ಏನನ್ನೂ ನಿರೀಕ್ಷಿಸಲ್ಲ. ಆಗುಣ ಇಷ್ಟ. ಹೊರಹೋದಮೇಲೂ ನಾನು ಈ ಗೆಳೆತನ ಮುಂದುವರಿಸಲು ಬಯಸುತ್ತೇನೆ ಎಂದಿದ್ದರು. ಇವೆಲ್ಲ ನೋಡಿದ ನಂತ ಇವರದ್ದು ಗೆಳತನಕ್ಕೂ ಮೀರಿದ ಬಂಧ. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕವಷ್ಟೇ ಜೋಡಿಗಳೇ ಇದಕ್ಕೆಲ್ಲ ಸ್ಪಷ್ಟನೆ ನೀಡಬೇಕಿದೆ.