Bride to Be ಮೇಘನಾಗೆ ಭರ್ಜರಿ ಬ್ಯಾಚುಲರೇಟ್ ಪಾರ್ಟಿ ನೀಡಿದ ಸೀತಾ ರಾಮ ಗರ್ಲ್ಸ್ ಟೀಮ್

First Published | Dec 21, 2024, 6:51 PM IST

ಸೀತಾ ರಾಮಾ ಧಾರಾವಾಹಿಯ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಶೀಘ್ರದಲ್ಲೇ ಹಸೆಮಣೆ ಏರಲಿದ್ದು, ಈ ಹಿನ್ನೆಲೆಯಲ್ಲಿ ಸೀರಿಯಲ್ ನ ಗರ್ಲ್ಸ್ ಟೀಮ್ ಟೂರ್ ಮಾಡಿ ಸಂಭ್ರಮಿಸಿದೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸೀತಾರಾಮ (Seetha Rama Serial). ಈ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಮುದ್ದು ಮುದ್ದಾಗಿ ನಟಿಸುವ ಮೂಲಕ ವೀಕ್ಷಕರ ಫೇವರಿಟ್ ಆಗಿರುವ ನಟಿ ಮೇಘನಾ ಶಂಕರಪ್ಪ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. 
 

ಸೀತಾ ರಾಮಾ ಧಾರಾವಾಹಿಯಲ್ಲಿ ಅಶೋಕ್ ಮತ್ತು ಪ್ರಿಯಾ ಜೋಡಿ ಅಂದ್ರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ. ಹೆಚ್ಚು ಮಾತನಾಡುತ್ತಾ, ತಿನ್ನುತ್ತಾ, ಮುದ್ದು ಮುದ್ದಾಗಿ ಆಡುವ ಪ್ರಿಯಾ ಹಾಗೂ, ಮೆಚ್ಯೂರ್ ಆಗಿರುವ ಅಶೋಕ್ ನಡುವೆ ಬಾಂಧವ್ಯವನ್ನು ಜನ ಇಷ್ಟಪಟ್ಟಿದ್ದರು. ಇಬ್ಬರು ನಿಜ ಜೀವನದಲ್ಲೂ ಮದುವೆಯಾದರೆ ಚೆಂದ ಅಂತಾನೂ ಹೇಳಿದ್ದರು. 
 

Tap to resize

ಆದರೆ ಇದೀಗ ಪ್ರಿಯಾ ಖ್ಯಾತಿಯ ಮೇಘನಾ ಶಂಕರಪ್ಪ ರಿಯಲ್ ಲೈಫಲ್ಲಿ ಸಪ್ತಪದಿ ತುಳಿಯೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಮೇಘನಾ ತಮ್ಮ ಭಾವಿ ಪತಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ಪರಿಚಯಿಸಿದ್ದರು. 
 

ಮೇಘನಾ (Meghana Shankarappa_ ಜಯಂತ್ ಕುಮಾರಸ್ವಾಮಿ ಎನ್ನುವವರ ಜೊತೆ 2025ರ ಫೆಬ್ರುವರಿ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ. ಇತ್ತೀಚೆಗೆ ಅವರ ಜೊತೆಗಿನ ಮುದ್ದಾದ ಫೋಟೊಗಳು ಹಾಗೂ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
 

ಮೇಘನಾ ವೈವಾಹಿಕ ಜೀವನಕ್ಕೆ ಕಾಲಿಡುವ ಹಿನ್ನೆಲೆಯಲ್ಲಿ ಸೀತಾ ರಾಮ ಧಾರಾವಾಹಿಯ ಗರ್ಲ್ಸ್ ಗ್ಯಾಂಗ್, ಅಂದರೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ (Vaishnavi Gowda), ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ, ವಿಲನ್​ ಭಾರ್ಗವಿ ಪಾತ್ರಧಾರಿ ಪೂಜಾ ಲೋಕೇಶ್​ ಹಾಗೂ ರಾಮ್​ ಚಿಕ್ಕಮ್ಮನ ಪಾತ್ರದಲ್ಲಿ ನಟಿಸುತ್ತಿರುವ ಸಿಂಧು ರಾವ್​ ಎಲ್ಲರೂ ಜೊತೆಯಾಗಿ ಟೂರ್ ಮಾಡಿದ್ದಾರೆ. 
 

ಮೇಘನಾಗೆ ಬ್ಯಾಚುಲರೇಟ್ ಪಾರ್ಟಿ (bachelorette party) ನೀಡಿರುವ ಈ ಗರ್ಲ್ಸ್ ಗ್ಯಾಂಗ್, ಜೊತೆಯಾಗಿ ಎಂಜಾಯ್ ಮಾಡುತ್ತಾ, ಚಳಿಯಲ್ಲೂ ಬಿಂದಾಸ್ ಆಗಿ ಡೋಂಟ್ ವರಿ ಬೇಬಿ ಚಿನ್ನಮ್ಮ ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿದ್ದರು. ಈ ವಿಡೀಯೋವನ್ನು ಸಿಕ್ಕಾಪಟ್ಟೆ ಜನ ಇಷ್ಟ ಪಟ್ಟಿದ್ದರು. 

ಇದೀಗ ವೈಷ್ಣವಿ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಬ್ಯಾಚುಲರೇಟ್ ಪಾರ್ಟಿಯ ಮೋಜು ಮಸ್ತಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮೇಘಾನಗೆ ಬ್ರೈಡ್ ಟು ಬಿ ಎನ್ನುವ ಟ್ಯಾಗ್ ಹಾಕಿ, ಎಲ್ಲರೂ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. 
 

ಇದರ ಜೊತೆಗೆ ವೈಷ್ಣ Meghu’s bachelorette. ಇದು ತುಂಬಾನೆ ಮೋಜಿನಿಂದ ಕೂಡಿದ ಟ್ರಿಪ್ ಆಗಿತ್ತು, ಕಂಗ್ರಾಜುಲೇಶನ್ ಮೇಘನಾ. ನೀನು ತುಂಬಾನೆ ಒಳ್ಳೆಯ ಹೃದಯವುಳ್ಳ ವ್ಯಕ್ತಿ. so so happy for you . ನಿನ್ನ ಮದುವೆಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. 
 

Latest Videos

click me!