ಹೋಗಿ ಬಾ ಮಗಳೇ ಎಂದ ಬಿಗ್ ಬಾಸ್; ಬಿಕ್ಕಿ ಬಿಕ್ಕಿ ಅತ್ತ ಐಶ್ವರ್ಯಾ ಶಿಂಧೋಗಿ

Published : Dec 30, 2024, 11:10 AM IST

ಬಿಗ್ ಬಾಸ್ ಮನೆಯಿಂದ ಹೊರ ಬಂದ ಐಶ್ವರ್ಯ ಶಿಂಧೋಗಿ. ಮನೆ ಸದಸ್ಯರು ಮಾತ್ರವಲ್ಲದೆ ಬಿಗ್ ಬಾಸ್‌ ಪ್ರೀತಿ ಮತ್ತು ನೂರಾರು ಕನ್ನಡಿಗರ ಮನಸ್ಸು ಗೆದ್ದ ಐಶು.....  

PREV
16
ಹೋಗಿ ಬಾ ಮಗಳೇ ಎಂದ ಬಿಗ್ ಬಾಸ್; ಬಿಕ್ಕಿ ಬಿಕ್ಕಿ ಅತ್ತ ಐಶ್ವರ್ಯಾ ಶಿಂಧೋಗಿ

ಬಿಗ್ ಬಾಸ್ ಸೀಸನ್ 11ರ 13ನೇ ವಾರದ ಎಲಿಮಿನೇಷನ್‌ನಲ್ಲಿ ಐಶ್ವರ್ಯ ಶಿಂಧೋಗಿ ಹೊರ ಬಂದಿದ್ದಾರೆ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಬೈ ಹೇಳಿದ್ದಾರೆ.ಆಕೆಯನ್ನು ಮಗಳೇ ಎಂದು ಕರೆದಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ. 

26

ಬಿಗ್ ಬಾಸ್ ಪತ್ರದಲ್ಲಿ 'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ' ಎಂದು ಬರೆದಿದ್ದಾರೆ. 

36

'ತನ್ನವರು ಯಾರೂ ಇಲ್ಲ ಎಂಬ ಕೊರಗಿನೊಂದಿಗೆ ಈ ಮನೆಯನ್ನು ನೀವು ಪ್ರವೇಶ ಮಾಡಿದ್ರಿ ಆದರೆ ಈಗ ಬಿಗ್ ಬಾಸ್ ಮನೆಯವರು, ಕರುನಾಟ ಮನೆ ಮನೆಯವರ ಪ್ರೀತಿಯನ್ನು ಗಳಿಸಿದ್ದೀರಿ. ಈ ಮನೆಯಲ್ಲಿ ನಿಮ್ಮ ಪ್ರಯಣ ಮುಗಿದಿರಬಹುದು ಆದರೆ ನಮ್ಮ ನಿಮ್ಮ ನಂಟು ಎಂದಿಗೂ ಮುಗಿಯುವಂಥದ್ದಲ್ಲ'

46

'ಖಾಲಿ ಪತ್ರ ಪಡೆದೆ ಅಂದು, ಪದಗಳಿರುವ ಪತ್ರ ಪಡೆದೆ ಇಂದು ಹಾಗೂ ಎಂದೆಂದಿಗೂ ಈ ಮನೆಯ ಹಾಗೂ ಬಿಗ್ ಬಾಸ್ ಕುಟುಂಬದವರಾಗಿಯೇ ಇರುತ್ತೀರಿ. ಇದು ನಿಮಗೆ ಬಿಗ್ ಬಾಸ್ ನೀಡುತ್ತಿರುವ ಅಭಿಮಾನದ ವಿದಾಯ. ಹೋಗಿ ಬನ್ನಿ ಐಶ್ವರ್ಯಾ ನಿಮಗೆ ಶುಭವಾಗಲಿ' ಎಂದು ಬರೆದ್ದಾರೆ.

56

ಐಶ್ವರ್ಯಾ ಈ ಮನೆಯಲ್ಲಿನ ನಿಮ್ಮ ಆಟ ಇಂದಿಗೆ ಮುಗಿದರಬಹುದು ಆದರೆ ಮನೆಯ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರ ಕಾಲ್ಪಟ್ಟ ಐಶ್ವರ್ಯಾಗೆ ಅಲ್ಲ ತನ್ನ ತವರಿನಿಂದ ಹೊರಟು ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಳಿಗೆ ಶುಭವಾಗಲಿ' ಎಂದು ಬಿಗ್ ಬಾಸ್ ಹೇಳುತ್ತಾರೆ.

66

ಕಣ್ಣೀರಿಡುತ್ತ ಬಾಗಿಲ ಬಳಿ ನಿಂತ ಐಶ್ವರ್ಯಾಗೆ 'ಹೋಗಿ ಬಾ ಮಗಳೇ'ಎಂದು ಬಿಗ್ ಬಾಸ್ ಹೇಳುತ್ತಾರೆ. ಈ ಮಾತಿನಿಂದ ಧೈರ್ಯ ತೆಗೆದುಕೊಂಡು ಹೋಸ ಜೀವನ ಆರಂಭಿಸಲು ಐಶ್ವರ್ಯ ಹೊರ ನಡೆಯುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories